ಬೆಂಗಳೂರು ನಗರದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈಗಾಗಲೇ ವಿದ್ಯುತ್ ಬಿಲ್ ಹೆಚ್ಚಾಗಿರುವುದರಿಂದ ಜನರು ತೊಂದರೆಗೆ ಸಿಲುಕಿದ್ದು, ಅದಕ್ಕೆ ಮತ್ತೊಂದು ಹೊಸ ಭಾರವಾಗಿ ಈ ವ್ಯವಸ್ಥೆ ಪರಿಚಯವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಹಂತ ಹಂತವಾಗಿ ಸ್ಮಾರ್ಟ್ ಮೀಟರ್ ಅಳವಡಿಕೆ
ಇಂಧನ ಇಲಾಖೆಯ ತೀರ್ಮಾನದಂತೆ, ಹೊಸ ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಲು ನಿರ್ಧರಿಸಲಾಗಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು 2024ರ ಮಾರ್ಚ್ 6ರಂದು ಈ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅದರಂತೆ ಬೆಸ್ಕಾಂ ವ್ಯಾಪ್ತಿಯಲ್ಲಿ ಹಂತ ಹಂತವಾಗಿ ಈ ವ್ಯವಸ್ಥೆಯನ್ನು ಜಾರಿಗೆ ತರುವ ಕೆಲಸ ನಡೆದಿದೆ.

ಸ್ಮಾರ್ಟ್ ಮೀಟರ್: ಲೂಟಿಯ ಹೊಸ ರೂಪವೆ?
ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾದ ಪ್ರಮುಖ ಅಂಶವೇ, ಈ ಸ್ಮಾರ್ಟ್ ಮೀಟರ್ ನಿರ್ವಹಣೆಗೂ ಗ್ರಾಹಕರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡಬೇಕಾದ ಅಗತ್ಯ. ಪ್ರತಿ ತಿಂಗಳು ನಿಗದಿತ ವಿದ್ಯುತ್ ಶುಲ್ಕದ ಜೊತೆಗೆ, ₹75 ರಿಂದ ₹118 ವರೆಗೆ ಹೆಚ್ಚುವರಿ ಹಣ ಭರಿಸಬೇಕಾಗಿದೆ. ಈ ಕ್ರಮ ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ಇದನ್ನು “ಲೂಟಿಯ ಹೊಸ ವಿಧಾನ” ಎಂದು ಕೆಲವರು ಟೀಕಿಸುತ್ತಿದ್ದಾರೆ.

ಒಂದು ಕೈಯಲ್ಲಿ ಸಬ್ಸಿಡಿ, ಇನ್ನೊಂದು ಕೈಯಲ್ಲಿ ಲೂಟಿ?
ಸರ್ಕಾರ ಗೃಹಜ್ಯೋತಿ ಯೋಜನೆ ಮೂಲಕ ಉಚಿತ ವಿದ್ಯುತ್ ನೀಡಿದರೆ, ಮತ್ತೊಂದೆಡೆ ಈ ರೀತಿಯ ಹೊಸ ತೆರಿಗೆಗಳ ಮೂಲಕ ಹಣ ವಸೂಲಿ ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಫಿಕ್ಸ್ಡ್ ಚಾರ್ಜ್ ಮಾತ್ರವಲ್ಲದೆ, ಈಗ ನಿರ್ವಹಣಾ ಶುಲ್ಕವೂ ಗ್ರಾಹಕರ ಮೇಲಾಗಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ಸ್ಮಾರ್ಟ್ ಮೀಟರ್ ಅನಿವಾರ್ಯವೋ? ಅಥವಾ ಗ್ರಾಹಕರ ಒಪ್ಪಿಗೆ ಆಧಾರಿತವಾಗಿರಬಹುದೋ? ಎಂಬ ಪ್ರಶ್ನೆಗಳು ಮುಂದುವರೆದಿದ್ದು, ಈ ಕುರಿತು ಸರ್ಕಾರ ಇನ್ನೂ ಸ್ಪಷ್ಟನೆ ನೀಡಿಲ್ಲ.

Leave a Reply

Your email address will not be published. Required fields are marked *

error: Content is protected !!