ಪಾನ್ ಕಾರ್ಡ್ ಅಪ್ಡೇಟ್, ಕೆ ವೈ ಸಿ ಹಾಗೂ ಆಧಾರ್ ಲಿಂಕ್ ಮಾಡಿಸಿಕೊಳ್ಳಿ ಎಂದು ಬರುವ ಸಂದೇಶಗಳನ್ನು ಕ್ಲಿಕ್ ಮಾಡಿ ದೇಶದಲ್ಲಿ ಸಾಕಷ್ಟು ಜನರು ಮೋಸ ಹೋಗುತ್ತಿದ್ದಾರೆ.
ದಿನೇ ದಿನೇ ಇಂತಹ ಪ್ರಕರಣಗಳು ಹೆಚ್ಚುತ್ತಿದ್ದು ಬ್ಯಾಂಕಿನವರು ತಮ್ಮ ಗ್ರಾಹಕರಿಗೆ ನಾವು ಯಾವುದೇ ರೀತಿ ಮೆಸೇಜ್ ಅಥವಾ ಕರೆಯ ಮುಖಾಂತರ ಸಂಪರ್ಕಿಸಿ ತಮ್ಮ ಮಾಹಿತಿಯನ್ನು ಕೇಳುವುದಿಲ್ಲ ಎಂದು ಪದೇಪದೇ ಸಂದೇಶಗಳನ್ನು ಕಳುಹಿಸಲು ಸಹ ಮುಂದಾಗಿದ್ದಾರೆ.
ಆದರೂ ಸಹ ದಿನ ದಿನಕ್ಕೂ ಮೋಸ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಇತ್ತೀಚಿನ ದಿನದಲ್ಲಿ ಮುಂಬೈನ ಬ್ಯಾಂಕ್ ಒಂದರ ಸುಮಾರು 40 ಗ್ರಾಹಕರು ಇಂತಹ ಲಿಂಕನ್ನು ಕ್ಲಿಕ್ ಮಾಡಿ ತಮ್ಮ ಖಾತೆಯಲ್ಲಿರುವ ಹಣವನ್ನು ಕಳೆದುಕೊಂಡಿರುತ್ತಾರೆ.
ಎಸ್ಎಂಎಸ್ ಮೂಲಕ ಸಂದೇಶ ಕಳುಹಿಸುವ ವಂಚಕರು ಸಂದೇಶದಲ್ಲಿರುವ ಲಿಂಕನ್ನು ಬೇರೊಂದು ವೆಬ್ಸೈಟ್ಗೆ ಕೊಂಡೊಯ್ಯುವ ರೀತಿ ಮಾಡಿಕೊಂಡಿರುತ್ತಾರೆ ಅದನ್ನು ಕ್ಲಿಕ್ಕಿಸಿದರೆ ತಮ್ಮ ವಿವರವನ್ನು ಪಡೆದು ತಮ್ಮ ಖಾತೆಯಲ್ಲಿರುವ ಹಣವನ್ನು ದೋಚುತ್ತಾರೆ.
ಪಾನ್ ಕಾರ್ಡ್, ಆಧಾರ್ ಕಾರ್ಡ್, ಕೆ ವೈ ಸಿ ಇನ್ನಿತರ ಅಪ್ಡೇಟ್ಗಳು ಎಂದು ಬರುವ ಸಂದೇಶಗಳನ್ನು ನಿರ್ಲಕ್ಷಿಸಿ ಹಾಗೂ ಸಂದೇಶಗಳಲ್ಲಿ ಬರುವ ಯಾವುದೇ ಲಿಂಕ್ ಅನ್ನು ತಿಳಿಯದೆ ಕ್ಲಿಕ್ ಮಾಡಬೇಡಿ.