ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮುಂಬೈ ಪೊಲೀಸರು ನ್ಯಾಯಾಲಯಕ್ಕೆ 524 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ಇದರಲ್ಲಿ ಆರೋಪಿ ಶೆಜಾನ್ ಖಾನ್ ಹಾಗೂ ನಟಿ ತುನಿಶಾ ಶರ್ಮಾ ನಡುವಿನ ವಾಟ್ಸಾಪ್ ಚಾಟ್ ಸೇರಿದಂತೆ ಹಲವು ವಿಷಯಗಳನ್ನು ಉಲ್ಲೇಖಿಸಿದ್ದಾರೆ. ತುನಿಶಾ ಶರ್ಮಾ ಜೊತೆಗೆ ಅಭಿನಯಿಸಿದ್ದ ಸಹ ನಟರು ಸೇರಿದಂತೆ ಒಟ್ಟು 31 ಮಂದಿಯನ್ನು ಸಾಕ್ಷಿಯನ್ನಾಗಿ ಪೊಲೀಸರು ಪ್ರಸ್ತಾಪಿಸಿದ್ದು, ತುನಿಶಾ ಶರ್ಮಾ ಹಾಗೂ ಶೆಜಾನ್ ಖಾನ್ ನಡುವೆ ಹತ್ತು ನಿಮಿಷಗಳ ಕಾಲ ನಡೆದಿದ್ದ ಮೊಬೈಲ್ ಸಂಭಾಷಣೆ ಕುರಿತೂ ಮಾಹಿತಿ ನೀಡಿದ್ದಾರೆ. ಇದಾದ ಬಳಿಕವೇ ತುನಿಶಾ ಶರ್ಮಾ ಆತ್ಮಹತ್ಯೆ ನಿರ್ಧಾರ ಕೈಗೊಂಡರೆಂದು ಹೇಳಲಾಗಿದೆ.
ಡಿಸೆಂಬರ್ 24, 2022 ರಂದು ನಟಿ ತುನಿಶಾ ಶರ್ಮಾ ಮೇಕಪ್ ರೂಮಿನಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದು, ತನ್ನ ಪುತ್ರಿಯ ಸಾವಿಗೆ ನಟ ಶೆಜಾನ್ ಖಾನ್ ಕಾರಣ ಎಂದು ಆಕೆಯ ತಾಯಿ ಆರೋಪಿಸಿದ್ದರು. ಈ ಹಿನ್ನಲೆಯಲ್ಲಿ ಶೆಜಾನ್ ನನ್ನು ಬಂಧಿಸಿದ್ದ ಪೊಲೀಸರು ಇದೀಗ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.