Special

ಭಾರತಕ್ಕೆ ಚಿನ್ನದ ಮೊಟ್ಟೆ ಇಡುವ ಕೋಳಿ ಯಾಗುತ್ತ ಬಿಹಾರ್!

ಭಾರತ ದೇಶದ ಅತ್ಯಂತ ಬಡ ರಾಜ್ಯ ಎನಿಸಿಕೊಂಡಿರುವ ಬಿಹಾರ್ ಇದೀಗ ಚಿನ್ನದ ಮೊಟ್ಟೆ ಇಡುವ ಕೋಳಿಯಾಗುತ್ತಿದೆ ಇದರಿಂದ ಭಾರತದ ಭವಿಷ್ಯವೇ ಬದಲಾಗುತ್ತಿದೆ. ಗ್ರೀಕ್ ದೇಶದ ಇತಿಹಾಸಕಾರನಾದ ಹೀರೋಡೋಟಸ್ ತನು ಬರೆದಿರುವ ಹಿಸ್ಟರೀಸ್ ಎಂಬ ಪುಸ್ತಕದಲ್ಲಿ ಭಾರತದ ಜನರು ಇರುವೆಗಳನ್ನು ಗಮನಿಸುತ್ತಾ ಭೂಗರ್ಭದಲ್ಲಿರುವ ಲೋಹಗಳನ್ನು ಪತ್ತೆ ಹಚ್ಚುತ್ತಿದ್ದರು ಎಂದು ಬರೆದಿದ್ದಾರೆ ಆದರೆ ಅಂದಿನ ಕಾಲದಲ್ಲಿ ಹಲವರು ಇದನ್ನು ಒಪ್ಪಿರಲಿಲ್ಲ. ಆದರೆ ಭಾರತೀಯರು ಅಂದಿನ ಕಾಲದಲ್ಲೇ ಬುದ್ಧಿವಂತರಾಗಿದ್ದರು ಎಂದು ಈಗ ಒಪ್ಪುವಂತಹ ಪರಿಸ್ಥಿತಿ ಬಂದಿದೆ. ಹೌದು ಬಿಹಾರದಲ್ಲಿ ಇರುವೆ ಜಮೈ ಎಂಬ ಜಿಲ್ಲೆಯಲ್ಲಿ ೨೩ ಕೋಟಿ ಟನ್ನಿನಷ್ಟು ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಇದು ಬಿಹಾರ ರಾಜ್ಯದ ಅದೃಷ್ಟವನ್ನು ಬದಲಾಯಿಸುತ್ತಿದೆ. ಬಿಹಾರ ರಾಜ್ಯದ ಜಮೈ ಎಂಬ ಜಿಲ್ಲೆಯಲ್ಲಿ ೪೦ ವರ್ಷದ ಹಿಂದೆ ಆಲದ ಮರದ ಕೆಳಗೆ ಇರುವೆಗಳು ಗೂಡು ಕಟ್ಟಿಕೊಂಡಿದ್ದವು. ಬೇಸಿಗೆ ಹೆಚ್ಚಾಗಿದ್ದ ಕಾರಣ ಸ್ಥಳೀಯ ಜನರು ಆಲದ ಮರದ ಕೆಳಗೆ ವಿಶ್ರಾಂತಿ ಪಡೆಯಲು ಹೋದಂತಹ ಸಂದರ್ಭದಲ್ಲಿ ಗೂಡಿನ ಸುತ್ತಲೂ ಬಿದ್ದಿರುವ ಮಣ್ಣಿನಲ್ಲಿ ಹಳದಿ ಬಣ್ಣದಲ್ಲಿ ಮಿಂಚುತ್ತಿರುವ ಚಿನ್ನದ ಚೂರುಗಳನ್ನು ಕಂಡು ಒಬ್ಬರಿಂದ ಮತ್ತೊಬ್ಬರಿಗೆ ಪ್ರಚಾರ ವಾಗುತ್ತಾ ಕೆಲವೇ ಕ್ಷಣಗಳಲ್ಲಿ ಇಡೀ ಜನಸಮೂಹವೇ ಅಲ್ಲಿ ಸೇರುತ್ತದೆ. ಪೊಲೀಸರು ಹಾಗೂ ಸರ್ಕಾರಿ ಅಧಿಕಾರಿಗಳು ಸಹ ಬರುತ್ತಾರೆ. ಆ ಮಣ್ಣನ್ನು ಪರಿಶೀಲಿಸಿದಾಗ ಅದರಲ್ಲಿ ಚಿನ್ನ ಇರುವುದು ಸ್ಪಷ್ಟವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ತಿಳಿದು ಬಂದಿರುವುದೇನೆಂದರೆ ಇರುವೆಗಳು ಚಿನ್ನವನ್ನು ಕಂಡುಹಿಡಿದಿರುವ ಸ್ಥಳದಲ್ಲಿ ಒಟ್ಟು ೨೩ ಕೋಟಿ ಟನ್ನಿನಷ್ಟು ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಇರುವೆಗಳು ಚಿನ್ನವಿರುವ ಸ್ಥಳವನ್ನು ಕಂಡುಹಿಡಿದರು ಸಹ ಭೂಗರ್ಭ ಇಲಾಖೆ ಆ ಸ್ಥಳವನ್ನು ಸರ್ವೆ ಮಾಡಲು ಹಾಗೂ ಅಲ್ಲಿರುವ ನಿಕ್ಷೇಪಗಳನ್ನು ಪತ್ತೆ ಹಚ್ಚಲು ನಲವತ್ತು ವರ್ಷಗಳ ಕಾಲ ಸಮಯ ತೆಗೆದುಕೊಂಡಿದೆ. ಅದು ಯಾವ ಕಾರಣಕ್ಕೆ ಎಂದರೆ ಬಿಹಾರ ರಾಜ್ಯದ ಜಮೈ ಎಂಬ ಜಿಲ್ಲೆಯು ನಕ್ಸಲ್ ಪೀಡಿತ ಪ್ರದೇಶವಾದ ಕಾರಣ ನಕ್ಸಲರು ಹೆಚ್ಚಾಗಿ ಸಕ್ರಿಯವಾಗಿರುವ ಸಂದರ್ಭದಲ್ಲಿ ಭೂಗರ್ಭ ಇಲಾಖೆಯು ಕೆಲಸವನ್ನು ನಿಲ್ಲಿಸಬೇಕಿತ್ತು. ಹಾಗೂ ಸರ್ವೆ ಮಾಡುವಂತಹ ಸಂದರ್ಭದಲ್ಲಿ ಜಮೀನಿನ ರೈತರು ಆಕ್ಷೇಪಣೆ ಮಾಡುತ್ತಿದ್ದ ಕಾರಣ ಕೆಲಸ ತಡವಾಗುತ್ತಿತ್ತು. ಇದರ ಜೊತೆಗೆ ಬ್ರಷ್ಟಾಚಾರ ಬೇರೆ. ಬಿಹಾರ ಬಡ ರಾಜ್ಯ ವಾದ ಕಾರಣ ಅಲ್ಲಿ ಭ್ರಷ್ಟಾಚಾರ ಹೆಚ್ಚಾಗಿಯೇ ಇತ್ತು. ಈ ಎಲ್ಲಾ ಕಾರಣಗಳಿಂದಾಗಿಯೇ ಚಿನ್ನದ ನಿಕ್ಷೇಪವನ್ನು ಕಂಡುಹಿಡಿಯಲು ೪೦ ವರ್ಷಗಳ ಅವಧಿ ಬೇಕಾಯಿತು ಎಂದು ಅಧಿಕಾರಿಗಳು ಹೇಳುತ್ತಾರೆ. ಭಾರತದಲ್ಲಿ ಅತಿ ಹೆಚ್ಚು ಚಿನ್ನವನ್ನು ತೆಗೆದಿರುವ ಸ್ಥಳ ಎಂದರೆ ಅದು ಕೋಲಾರ ಜಿಲ್ಲೆಯ ಕೆಜಿಎಫ್. ಬಿಹಾರ ರಾಜ್ಯವು ಸಹ ಮುಂದಿನ ದಿನಗಳಲ್ಲಿ ಇಂತಹದೇ ಪಟ್ಟಿಗೆ ಸೇರುವ ಸಾಧ್ಯತೆಯಿದೆ. ಭಾರತದಲ್ಲಿ ಅತಿ ಹಳೆಯದಾದ ಚಿನ್ನದ ಗಣಿ ಎಂದರೆ ಅದು ಕೆಜಿಎಫ್. ಹಾಗೂ ಇದು ಸಾಕಷ್ಟು ಇತಿಹಾಸವನ್ನು ಸಹ ಹೊಂದಿದೆ. ಈಗಿನ ಸರ್ಕಾರ ಮಾತ್ರವಲ್ಲದೆ ಬ್ರಿಟಿಷರ ಸರ್ಕಾರ ಹಾಗೂ ರಾಜರುಗಳು ಸಹ ಕೆಜಿಎಫ್ ನಲ್ಲಿ ಚಿನ್ನದ ಗಣಿಗಾರಿಕೆಯನ್ನು ನಡೆಸಿದ್ದಾರೆ. ಹಲವು ಶತಮಾನಗಳಿಂದ ಚಾಲ್ತಿಯಲ್ಲಿದ್ದ ಕೆಜಿಎಫ್ ಚಿನ್ನದ ಗಣಿಗಳು ಸದ್ಯ ನಿಂತುಹೋಗಿವೆ. ವಿಜಯನಗರ ಸಾಮ್ರಾಜ್ಯ ಚಿನ್ನದಿಂದ ರಾರಾಜಿಸಲು ಮುಖ್ಯಪಾತ್ರ ವಹಿಸಿದ್ದಂತಹ ಕೆಜಿಎಫ್ ನ ಚಿನ್ನದ ಗಣಿಗಳ ಕೊಡುಗೆ ಅಪಾರ. ಕೆಜಿಎಫ್ ನ ಚಿನ್ನದ ಗಣಿಗಳಲ್ಲಿ ಸಿಗುತ್ತಿರುವ ಚಿನ್ನಕ್ಕಿಂತ ಆಗುತ್ತಿರುವ ಖರ್ಚು ಹೆಚ್ಚು ಎಂಬ ಕಾರಣಕ್ಕಾಗಿ ಸದ್ಯ ಗಣಿಗಾರಿಕೆಯನ್ನು ನಿಲ್ಲಿಸಿದ್ದಾರೆ. ಬಿಹಾರ ರಾಜ್ಯದ ವಿಚಾರಕ್ಕೆ ಬರುವುದಾದರೆ ಭೂಗರ್ಭ ಇಲಾಖೆಯ ಪ್ರಕಾರ ದೊರೆತಿರುವ ೨೩ ಕೋಟಿ ಟನ್ನಿನಷ್ಟು ಚಿನ್ನದ ನಿಕ್ಷೇಪ ದಲ್ಲಿ ಅವರು ಊಹಿಸಿದಂತೆ ಚಿನ್ನ ವೇನಾದರೂ ದೊರೆತರೆ ಬಿಹಾರ ರಾಜ್ಯದ ಅದೃಷ್ಟ ಕುಲಾಯಿಸುತ್ತದೆ ಹಾಗೂ ಭಾರತ ದೇಶದ ಭವಿಷ್ಯ ಬದಲಾಗುತ್ತದೆ. ಈಗ ದೊರೆತಿರುವ ಚಿನ್ನದ ನಿಕ್ಷೇಪ ದಲ್ಲಿ ಒಟ್ಟು ಎಷ್ಟು ಚಿನ್ನವನ್ನು ಹೊರತೆಗೆಯಬಹುದು ಎಂಬುದರ ಬಗ್ಗೆ ಭೂಗರ್ಭ ಇಲಾಖೆ ಸ್ಪಷ್ಟನೆ ನೀಡಿಲ್ಲ. ಸುಮಾರು ೪೫೦೦ ಟನ್ನಿನಷ್ಟು ಚಿನ್ನವನ್ನು ಹೊರತೆಗೆಯಬಹುದು ಎಂದು ಊಹಿಸಲಾಗುತ್ತಿದೆ. ೨೦೨೧ರಲ್ಲಿ ಇಡೀ ಪ್ರಪಂಚದಲ್ಲಿ ಹೊರತೆಗೆಯಲಾದ ಒಟ್ಟು ಚಿನ್ನ ೩೫೬೧ ಟನ್ನುಗಳು. ಊಹಿಸಿದಂತೆ ೪೫೦೦ ಟನ್ ಗಳಷ್ಟು ಚಿನ್ನವನ್ನೇ ನಾದರೂ ಹೊರತೆಗೆದರೆ ಪ್ರಪಂಚದಲ್ಲಿ ಒಂದು ವರ್ಷದಲ್ಲಿ ತೆಗೆದಿರುವ ಚಿನ್ನಕ್ಕಿಂತ ಸುಮಾರು ೧೦೦೦ ಟನ್ಗಳಷ್ಟು ಅಧಿಕ ಚಿನ್ನ ತೆಗೆದಂತಾಗುತ್ತದೆ. ಇದರಿಂದ ಭಾರತದಲ್ಲಿ ಚಿನ್ನದ ಬೆಲೆ ಕಡಿಮೆಯಾಗುತ್ತದೆ ಹಾಗೂ ಭಾರತದ ಭವಿಷ್ಯವೇ ಬದಲಾಗುತ್ತದೆ. ಮುಂದಿನ ತಿಂಗಳು ಬಿಹಾರದ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಒಂದು ಒಪ್ಪಂದಕ್ಕೆ ಬಂದು ಗಣಿಗಾರಿಕೆ ಆರಂಭಿಸುವ ಆಲೋಚನೆಗೆ ಮುಂದಾಗುವ ಸಾಧ್ಯತೆ ಇದೆ.

The pure gold ore found in the mine on a stone floor
kiran

Recent Posts

ಬೈಕ್ ಟಿಪ್ಪರ್ ನಡುವೆ ಡಿಕ್ಕಿ ಬೈಕ್ ಸವಾರ ಸಾವು

ನಂಜನಗೂಡು: ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸಮೀಪ…

1 month ago

ಅಪರಿಚಿತ ಕಾರು ಡಿಕ್ಕಿ; ಐವರಿಗೆ ಗಂಭೀರ ಗಾಯ, ಓರ್ವ ಮಹಿಳೆ ಸ್ಥಳದಲ್ಲೇ ಸಾವು.

ನಂಜನಗೂಡು: ಅಪರಿಚಿತ ಕಾರು ಚಾಲಕನ ಅತಿ ವೇಗಕ್ಕೆ ಸಿಲುಕಿದ ಆರು ಜನರ ಪೈಕಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಓರ್ವ ಮಹಿಳೆ…

1 month ago

ರಸ್ತೆ ಅಪಘಾತ; ಗೊಲಗೇರಿ ಗ್ರಾಮದ ಯುವಕ ಸಾವು.

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಯಿಂದ ಗೊಲಗೇರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆ ಅಪಘಾತದಲ್ಲಿ ಗೊಲಗೇರಿ ಗ್ರಾಮದ ಯುವಕ…

1 month ago

ಕುಡಿಯುವ ನೀರಿನ ಬಿಲ್ ಪಾವತಿ ಮಾಡಬೇಡಿ -ಮಾಜಿ ಶಾಸಕ ಹರ್ಷವರ್ಧನ್

ನಂಜನಗೂಡು: ನಗರದಲ್ಲಿ ವಾಸಿಸುವ ನಗರವಾಸಿಗಳಿಗೆ ದುಬಾರಿ ವೆಚ್ಚದ ಕುಡಿಯುವ ನೀರಿನ ಬಿಲ್‌ಗಳನ್ನು ನೀಡಲಾಗುತ್ತಿದೆ, ಅಲ್ಲದೆ ಅನಧಿಕೃತ ಬಡಾವಣೆಗಳಿಗೆ ಎನ್‌ಓಸಿ ನೀಡಿ…

1 month ago

ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು 50,000 ಲಂಚ ಸ್ವೀಕರಿಸುತ್ತಿದ್ದ ವೇಳೆ…

1 month ago

ಮಟ-ಮಟ ಮಧ್ಯಾಹ್ನ‌ ಮಹಿಳೆಯ ಮಾಂಗಲ್ಯ ಸರ ಕಸಿದು ಪರಾರಿ ‌

ಗೌರಿಬಿದನೂರು ನಗರದ ವಿನಾಯಕ ನಗರದ ವಾಸಿ ಪದ್ಮ ಜೈನ್ (59) ಎಂಬುವವರ 50 ಗ್ರಾಂ ಮಾಂಗಲ್ಯ ಸರವನ್ನು ದ್ವಿಚಕ್ರ ವಾಹನದಲ್ಲಿ…

1 month ago