ಬಜೆಟ್‌ನಲ್ಲಿ ರೈತರು, ಮಹಿಳೆಯರು ಮತ್ತು ಯುವಕರಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಆದಾಯ ತೆರಿಗೆ ಭಾರ ಕಡಿಮೆ ಮಾಡಿದೆ ಮೋದಿ ಸರ್ಕಾರ. ಹಳೆಯ ತೆರಿಗೆ ಪದ್ಧತಿ ಬಳಸುವವರಿಗೆ ಯಾವುದೇ ಬದಲಾವಣೆ ಇಲ್ಲ. ಹೊಸ ತೆರಿಗೆ ಪದ್ಧತಿ ಬಳಸುವವರಿಗೆ ಹೊಸ ಟ್ಯಾಕ್ಸ್ ಸ್ಲ್ಯಾಬ್ ಘೋಷಿಸಿಲಾಗಿದೆ.
* 0-3 ಲಕ್ಷ : ತೆರಿಗೆ ಇಲ್ಲ
* 3-7 ಲಕ್ಷ: 05 % ತೆರಿಗೆ
* 7-10 ಲಕ್ಷ : 10 % ತೆರಿಗೆ
* 10 -12 ಲಕ್ಷ : 15% ತೆರಿಗೆ
* 12 – 15 ಲಕ್ಷ : 20 % ತೆರಿಗೆ
* 15 ಲಕ್ಷಕ್ಕಿಂತ ಹೆಚ್ಚು : 30 % ತೆರಿಗೆ
ಹೆಚ್ಚು ಮಂದಿ ಹೊಸ ತೆರಿಗೆ ಪದ್ಧತಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಅಂತ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ವಿವಿಧ ಪಾವತಿಗಳಿಗೆ ಐದು ಪ್ರತಿಶತ ಟಿಡಿಎಸ್ ಬದಲಿಗೆ ಎರಡು ಪ್ರತಿಶತ ಟಿಡಿಎಸ್ ಅನ್ನು ಒದಗಿಸಲಾಗುತ್ತದೆ. ಮ್ಯೂಚುವಲ್ ಫಂಡ್ ಅಥವಾ ಯುಟಿಐ ಮರುಖರೀದಿಯಲ್ಲಿ ಟಿಡಿಎಸ್ ಅನ್ನು ಶೇಕಡಾ 20ರಷ್ಟು ಹಿಂಪಡೆಯಲಾಗಿದೆ. ಇ-ಕಾಮರ್ಸ್ ಆಪರೇಟರ್‌ಗಳಿಗೆ ಟಿಡಿಎಸ್ ಅನ್ನು ಶೇಕಡಾ 1 ರಿಂದ 0.1 ಕ್ಕೆ ಇಳಿಸಲಾಗಿದೆ. ಅಲ್ಲದೆ, ಟಿಡಿಎಸ್ ತುಂಬುವಲ್ಲಿ ವಿಳಂಬವನ್ನು ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.