
ಕನ್ನಡದ ವಜ್ರಕಾಯ ನಟಿ ನಭಾ ನಟೇಶ್ ಸದಾ ತನ್ನ ಫೋಟೋಶೂಟ್‌ಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ. ಈ ಬಾರಿ, ಪಿಜ್ಜಾ ತಿನ್ನುತ್ತಾ ತೆಗೆಸಿಕೊಂಡ ಬೋಲ್ಡ್ ಫೋಟೋಶೂಟ್ ಹಂಚಿಕೊಂಡಿದ್ದಾರೆ. ಈ ಚಿತ್ರಗಳಿಗೆ ನೆಟ್ಟಿಗರಿಂದ ವಿಭಿನ್ನ ಪ್ರತಿಕ್ರಿಯೆಗಳು ಹರಿದುಬರುತ್ತಿವೆ.
ವೈಟ್ ಡ್ರೆಸ್, ಹಾಟ್ ಲುಕ್
ನಭಾ ವೈಟ್ ಶಾರ್ಟ್ ಡ್ರೆಸ್‌ನಲ್ಲಿ ಮಿಂಚಿದ್ದು, ಪಿಜ್ಜಾ ತಿನ್ನುತ್ತಾ ಒದಗಿಸಿರುವ ವಿಭಿನ್ನ ಭಂಗಿಗಳು ಫ್ಯಾನ್‌ಗಳ ಗಮನ ಸೆಳೆದಿವೆ. “ಪಿಜ್ಜಾಗಿಂತ ನಿಮ್ಮ ಸೊಂಟವೇ ಹಾಟ್ ಆಗಿದೆ!” ಎಂದು ಒಬ್ಬ ನೆಟ್ಟಿಗ ಕಾಮೆಂಟ್ ಮಾಡಿದ್ದಾರೆ.
ತೆಲುಗು ಚಿತ್ರರಂಗದಲ್ಲಿ ಬ್ಯುಸಿ
ಶೃಂಗೇರಿಯ ಸುಂದರಿ ನಭಾ, ಈಗ ತೆಲುಗು ಚಿತ್ರರಂಗದಲ್ಲಿ ಹೆಚ್ಚು ಸಕ್ರಿಯರಾಗಿದ್ದು, ಮುಂದಿನ ಸ್ವಯಂಭು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಿದ್ದಾರೆ. ನಿಖಿಲ್ ಸಿದ್ಧಾರ್ಥ್ ಅವರಿಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಕನ್ನಡದಿಂದ ತೆಲುಗುಗೆ ಹಾರಿದ ನಭಾ
ನಭಾ ನಟೇಶ್, ಶಿವಣ್ಣನ ವಜ್ರಕಾಯ ಸಿನಿಮಾದ ಮೂಲಕ ಕನ್ನಡದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಬಳಿಕ ಲೀ ಮತ್ತು ಸಾಹೇಬ ಸಿನಿಮಾಗಳಲ್ಲೂ ನಟಿಸಿ ಜನಪ್ರಿಯರಾದರು. ನಂತರ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿ, ಅಲ್ಲಿ ತನ್ನದೇ ಆದ ಗುರುತು ಮೂಡಿಸಿದ್ದಾರೆ.
ನಭಾ ಹಂಚಿಕೊಳ್ಳುವ ಪ್ರತಿಯೊಂದು ಫೋಟೋಶೂಟ್ ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸುತ್ತಿದ್ದು, ಈ ಬಾರಿಗೆ ಅವರ ಪಿಜ್ಜಾ ಫೋಟೋಶೂಟ್ ಕೂಡ ಅದರಿಂದ ಹೊರತಾಗಿಲ್ಲ!