ಮುಂಡಗೋಡ: ತಾಲೂಕಿನ ಪಾಳಾ ಕ್ರಾಸ್ ಸನಿಹ ಶಿರಸಿ ಹುಬ್ಬಳ್ಳಿ ರಸ್ತೆಯಲ್ಲಿ ಕಾರು ಮರಕ್ಕೆ ಡಿಕ್ಕಿ ಹೊಡೆದು ಸಹೋದರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ರಾತ್ರಿ ಜರುಗಿದೆ.
ಪಾಳಾದಲ್ಲಿ ನಡೆಯುತ್ತಿರುವ ಜಾತ್ರೆಗೆ ಹೊರಟಿದ್ದ ಸಮಯದಲ್ಲಿ ಐವರು ಯುವಕರಿಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ಸಹೋದರರು ಸ್ಥಳದಲ್ಲಿ ಮರಣ ಹೊಂದಿದ್ದು, ಉಳಿದ ಮೂವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಮುಂಡಗೋಡ ಪಟ್ಟಣದ ಬಸವನಬೀದಿಯ ನಿವಾಸಿಗಳಾದ ಗಣೇಶ ಗಾಣಿಗೇರ್ ಮತ್ತು ಮಹೇಶ್ ಗಾಣಿಗೇರ್ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಸ್ಥಳಕ್ಕೆ ಮುಂಡಗೋಡ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.
ವರದಿ:ಮಂಜುನಾಥ ಹರಿಜನ.