ಕಲಬುರಗಿ: ಮರಳು ಸಾಗಾಣಿಕೆಗೆ ಅನುಮತಿ ನೀಡಲು ಲಂಚ ಪಡೆಯುವಾಗ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದ ಪೋಲಿಸ್ ಕಾನ್ ಸ್ಟೇಬಲ್ ಗಳ ನ್ನು ಅಮಾನತ್ತುಗೊಳಿಸಿ ಎಸ್ಪಿ ಇಶಾ ಪಂತ್ ಆದೇಶ ಹೊರಡಿಸಿದ್ದಾರೆ.
ಜೇವರ್ಗಿ ಠಾಣೆಯ ಕಾನ್ ಸ್ಟೇಬಲ್ ಶಿವರಾಯ ಅರಳಗುಂಡಗಿ ಹಾಗೂ ಅವ್ವಣ್ಣ ಅಮಾನತ್ತುಗೊಂಡವರು.
ಮರಳು ಸಾಗಾಣೆಗೆ ಅನುಮತಿ ನೀಡಲು ಶಹಾಪುರ ಮೂಲದ ಅಖಿಲ್ ಎಂಬುವರಿಗೆ ಲಂಚದ ಬೇಡಿಕೆ ಇಟ್ಟು, ಗುರುವಾರ ಹಣ ಪಡೆಯುವಾಗ ಲೋಕಾಯುಕ್ತರು ಟ್ರ್ಯಾಪ್ ಮಾಡಿ ಕಾನ್ ಸ್ಟೇಬಲ್ ಶಿವರಾಯ ಅರಳಗುಂಡಗಿಯನ್ನು ಬಲೆಗೆ ಕೆಡವಿದ್ದರು. ಬಳಿಕ ಅವ್ವಣ್ಣ ಕೂಡಾ ಪ್ರಕರಣದಲ್ಲಿ ತಗುಲಾಕಿಕೊಂಡಿದ್ದರು. ಇಬ್ಬರನ್ನು ಅ.6 ರವರೆಗೂ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಈ ಹಿನ್ನಲೆ ಎಸ್ಪಿ ಇಬ್ಬರನ್ನು ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ.