
ಬೆಂಗಳೂರು: ಲಂಚ ಸ್ವೀಕಾರ ಪ್ರಕರಣದಲ್ಲಿ ಡಿಸಿಆರ್‌ಬಿ ಪೊಲೀಸ್ ಇನ್ಸ್‌ಪೆಕ್ಟರ್ ಗೀತಾ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಫೋನ್ ಪೇ ಮೂಲಕ ಹಣ ಪಡೆಯುವಾಗಲೇ ಅಧಿಕಾರಿಗಳು ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯಾವ ಪ್ರಕರಣ?
ಸ್ಲಂ ಬೋರ್ಡ್‌ನಿಂದ ಮನೆ ಪಡೆಯಲು ಅಗತ್ಯವಿರುವ ಜಾತಿ ಪ್ರಮಾಣಪತ್ರಕ್ಕಾಗಿ ಲೋಕೇಶ್ ಎಂಬ ವ್ಯಕ್ತಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ದಾಖಲೆ ನೀಡುವ ಪ್ರತಿಯಾಗಿ ಇನ್ಸ್‌ಪೆಕ್ಟರ್ ಗೀತಾ 25,000 ರೂ. ಲಂಚದ ಬೇಡಿಕೆ ಇಟ್ಟಿದ್ದರು.
ಫೋನ್ ಪೇ ಮೂಲಕ ಮುಂಗಡ ಲಂಚ
ಲೋಕೇಶ್ ಅವರಿಂದ ಮುಂಗಡವಾಗಿ ₹10,000 ಲಂಚವನ್ನು ಫೋನ್ ಪೇ ಮೂಲಕ ಸ್ವೀಕರಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿತು. ಲಂಚದ ಬಗ್ಗೆ ಅನುಮಾನಗೊಂಡ ಲೋಕೇಶ್ ಕೂಡಲೇ ಲೋಕಾಯುಕ್ತಕ್ಕೆ ದೂರು ನೀಡಿದರು.
ಲೋಕಾಯುಕ್ತ ದಾಳಿ ಮತ್ತು ಬಂಧನ
ಲೋಕೇಶ್ ನೀಡಿದ ಮಾಹಿತಿಯ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ಚಲನವಲನಗಳನ್ನು ಗಮನಿಸಿ, ಸೂಕ್ತ ಪ್ಲಾನ್ ಹಾಕಿ ದಾಳಿ ನಡೆಸಿದರು. ಫೋನ್ ಪೇ ಮೂಲಕ ಹಣ ವರ್ಗಾವಣೆ ಆಗುತ್ತಿದ್ದ ಸಂದರ್ಭದಲ್ಲಿಯೇ ಅಧಿಕಾರಿಗಳು ಗೀತಾ ಅವರನ್ನು ಬಂಧಿಸಿದರು.
ಈ ಪ್ರಕರಣದ ಕುರಿತು ಮುಂದಿನ ತನಿಖೆ ಸಾಗುತ್ತಿದೆ. ಅಧಿಕಾರ ದುರುಪಯೋಗ ಮಾಡಿಕೊಂಡು ಲಂಚ ಸ್ವೀಕರಿಸುವ ಪ್ರಕರಣಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.