ಕುಂದಗೋಳ; ತಾಲೂಕಿನ ಮುಳ್ಳಹಳ್ಳಿ ಗ್ರಾಮದ ಮದ್ಯ ಅಡ್ಡಲಾಗಿ ನಿರ್ಮಾಸಿಲಾಗಿದ ಸೇತುವೆ ನೆಲಕ್ಕೆ ಅಪ್ಪಳಿಸಿದೆ. ದಿನನಿತ್ಯ ಒಡಾಡಲು ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ.
ಸುಮಾರು ವರ್ಷ ಕಳೆದರೂ ದುರಸ್ಥಿ ಭಾಗ್ಯ ಕಂಡಿಲ್ಲಿ. ಈ ಮಾರ್ಗ ಮದ್ಯೆ ಬೆಣ್ಣಹಳ್ಳ ಹರಿದು ಹೋಗಿದ್ದು, ಇದರ ಜೊತೆಗೆ ಮುಳಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಹಳ್ಳದ ಮದ್ಯೆ ಸೇತುವೆ ನಿರ್ಮಿಸಲಾಗಿದೆ. ನೀರಿನ ರಭಸಕ್ಕೆ ಸೇತುವೆ ಕೊಚ್ಚಿ ಹೋಗಿದೆ, ಸಾರ್ವಜನಿಕರು ಇದರಲ್ಲಿ ದಿನನಿತ್ಯ ಇದರ ಮದ್ಯೆ ವಾಹನ ಸಂಚಾರ ಮಾಡುತ್ತಿದ್ದಾರೆ, ಆದರೆ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ತೆಲೆ ಎತ್ತಿ ನೋಡ್ತಾ ಇಲ್ಲಾ ಅಂತ ಇಲ್ಲಿನ ಜನ ಅಕ್ರೋಶ ವ್ಯಕ್ತಪಡಿಸಿದರು.
ಸುಮಾರು ವರ್ಷ ಕಳೆದಿದೆ ಈ ಸೇತುವೆ ದುರಸ್ತಿ ಒಳಪಟ್ಟು ಇದ್ಯಾವುದೂ ಅವರ ಗಮನಕ್ಕೆ ಬಂದಿಲವ್ವಾ ಅನ್ನುವುದು ಸ್ಪಷ್ಟ ಚಿತ್ರಣ ನಮ್ಮ ಎದುರಿಗೆ ಕಾಣಸುತ್ತೇ. ಇಲ್ಲಿ ರೈತರು ಹೆಚ್ಚಾಗಿ ಎತ್ತಿನ ಬಂಡಿ ತೆಗೆದುಕೊಂಡು ತಮ್ಮ ಜಮೀನುಗಳಿಗೆ ಸಂಚಾರಿಸ ಬೇಕೆಂದರೆ ಇದೆ ರಸ್ತೆ ಪರ್ಯಾಯ ವ್ಯವಸ್ಥೆ ಇಲ್ಲಾ. ಈಗಲಾದರೋ ಅಧಿಕಾರಿಗಳು ಎಚ್ಚೆತ್ತುಕೊಂಡು ಸುಗಮವಾಗಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಇಲ್ಲಿಯ ಸಾರ್ವಜನಿಕರು ಅಹವಾಲುಯಾಗಿದೆ.
ವರದಿ; ಶಾನು ಯಲಿಗಾರ