ಉತ್ತರ ಪ್ರದೇಶದ ರಾಂಪುರ ಜಿಲ್ಲೆಯಲ್ಲಿ 11 ವರ್ಷದ ಮಾತು ಮಾತಾಡಲಾರದ ಹಾಗೂ ಕಿವಿ ಕೇಳದ ಅಪ್ರಾಪ್ತ ಬಾಲಕಿ ಮೇಲೆ ನಡೆದ ಅತ್ಯಾಚಾರ ಘಟನೆ ಭಾರೀ ವಿಸ್ಮಯ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಈ ಅಮಾನವೀಯ ಕೃತ್ಯ ಎಸಗಿದ ಆರೋಪಿಯನ್ನು ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಮಂಗಳವಾರ ಸಂಜೆ ಹೊತ್ತಿಗೆ ಬಾಲಕಿ ನಾಪತ್ತೆಯಾಗಿದ್ದು, ದಿನವಿಡಿ ಹುಡುಕಾಟ ನಡೆಸಿದರೂ ಪ್ರಯೋಜನವಿಲ್ಲದೆ ಪೋಷಕರು ಮನೆಗೆ ಮರಳಿದ್ದರು. ಬುಧವಾರ ಬೆಳಗ್ಗೆ, ಆಕೆಯನ್ನು ಹತ್ತಿರದ ಹೊಲದಲ್ಲಿ ಬೆತ್ತಲಾಗಿ, ತೀವ್ರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆ ಹಚ್ಚಲಾಯಿತು. ಸ್ಥಳೀಯರು ಈ ಬಗ್ಗೆ ತಕ್ಷಣ ಪೋಷಕರಿಗೆ ತಿಳಿಸಿ, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರು. ಹೆಚ್ಚಿನ ಚಿಕಿತ್ಸೆಗೆ ಮೀರತ್ ಆಸ್ಪತ್ರೆಗೆ ರವಾನಿಸಲಾಯಿತು.

ಪೊಲೀಸರು ಈ ಸಂಬಂಧ ತಕ್ಷಣವೇ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿ, ತನಿಖೆಗೆ ಮೂರು ವಿಶೇಷ ತಂಡಗಳನ್ನು ರಚಿಸಿದರು. ಸ್ಥಳೀಯ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅದೇ ಗ್ರಾಮದ ಡಾನ್ ಸಿಂಗ್ (24) ಎಂಬವನ ವಿರುದ್ಧ ಶಂಕೆ ಬಿದ್ದಿತು.

ಆತನನ್ನು ಬಂಧಿಸಲು ಹೊರಟಿದ್ದಾಗ, ಆತ ಪೊಲೀಸರು ತಾನಾಗಿದ್ದವರತ್ತ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆತ್ಮರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದರು. ಸದ್ಯ ಆತನ ವಿರುದ್ಧ ಗಂಭೀರ ಅಪರಾಧದ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಬಾಲಕಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯೆ ಡಾ. ಅಂಜು ಸಿಂಗ್ ಪ್ರಕಾರ, ಈ ಪ್ರಕರಣ ಅತ್ಯಂತ ಭೀಕರ ಲೈಂಗಿಕ ಅಪರಾಧವಾಗಿದೆ. “ಬಾಲಕಿಯ ಖಾಸಗಿ ಭಾಗಗಳಲ್ಲಿ ತೀವ್ರ ಗಾಯಗಳಿವೆ. ಮುಖಕ್ಕೂ ಬಲವಾದ ಹೊಡೆತವಿದೆ. ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಮಾತನಾಡಲೂ ಸಾಧ್ಯವಾಗುತ್ತಿಲ್ಲ. ಇಂಥಾ ಕ್ರೂರತೆ ನಾನು ಎಂದೂ ನೋಡಿಲ್ಲ,” ಎಂದು ಅವರು ಆಘಾತ ವ್ಯಕ್ತಪಡಿಸಿದರು.

ಘಟನೆ ಇಡೀ ಪ್ರದೇಶದಲ್ಲಿ ಆಕ್ರೋಶ ಎಬ್ಬಿಸಿದ್ದು, ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂಬ ಆಗ್ರಹ ವ್ಯಕ್ತವಾಗುತ್ತಿದೆ.

Leave a Reply

Your email address will not be published. Required fields are marked *

Related News

error: Content is protected !!