ಬೆಂಗಳೂರು: ಕಾಟನ್ ಪೇಟೆಯಲ್ಲಿ ಮೂಕಪ್ರಾಣಿಗಳಾದ ಹಸುಗಳ ಕೆಚ್ಚಲನ್ನು ಕತ್ತರಿಸಿದ ಅಮಾನವೀಯ ಘಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ಹಾಗೂ ಸಚಿವ ಜಮೀರ್ ಖಾನ್, ಇಡೀ ರಾಜ್ಯದ ಜನರು ಮತ್ತು ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಅವರು ಸರಕಾರವನ್ನು ಆಕ್ರೋಶ ವ್ಯಕ್ತಪಡಿಸಿ, ಘಟನೆಗೆ ಸಂಬಂಧಿಸಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಈ ಕುರಿತು ಕೇಂದ್ರ ಸಚಿವ ವಿ. ಸೋಮಣ್ಣ ಅವರು ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿ, “ಮೂಕಪ್ರಾಣಿಗಳ ಮೇಲೆ ದೌರ್ಜನ್ಯ ಎಸಗಿದವರು ಸಾಮಾನ್ಯ ಮಾನವೀಯತೆಯನ್ನು ಮರೆತಿದ್ದಾರೆ. ಈ ಘಟನೆ ನಾಗರಿಕ ಸಮಾಜಕ್ಕೆ ಕಲಂಕವಾಗಿದೆ. ಸರ್ಕಾರ ಹಾಗೂ ಪೋಲಿಸು ಇಲಾಖೆ ತಕ್ಷಣದ ಕ್ರಮ ತೆಗೆದುಕೊಳ್ಳಬೇಕು,” ಎಂದು ಹೇಳಿದ್ದಾರೆ.
“ಗೋವು ನಮ್ಮ ತಾಯಿ ಎಂದು ನಾವು ಪೂಜಿಸುವ ದೇಶದಲ್ಲಿ ಈ ರೀತಿಯ ವಿಕೃತಿ ನಡೆಯುವುದು ವಿಷಾದನೀಯ. ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ನೀಡುವುದು ಅವಶ್ಯಕವಾಗಿದೆ, ಇದು ಸಮಾಜಕ್ಕೆ ಪಾಠವಾಗಬೇಕು,” ಎಂದು ಅವರು ಹೇಳಿದ್ದಾರೆ.