ಕುಣಿಗಲಿನಿಂದ ತುಮಕೂರಿಗೆ ತೆರಳುವಂತಹ ಬಸ್ ಸರಿಯಾದ ಸಮಯಕ್ಕೆ ಬಾರದ ಕಾರಣ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿರುವ ಘಟನೆ ದಿನಾಂಕ 26 ನೇ ತಾರೀಖಿನಂದು ನಡೆದಿದೆ.
ಸರಿಯಾದ ಸಮಯಕ್ಕೆ ಬಸ್ ಬರದಿರುವುದು ಹಾಗೂ ಬಸ್ ನಿರ್ವಾಹಕರು ವಿದ್ಯಾರ್ಥಿಗಳ ಜೊತೆ ಅಸಭ್ಯವಾಗಿ ವರ್ತಿಸುತ್ತಿರುವುದು ಮತ್ತು ಬಸ್ಸಿನಲ್ಲಿ ಮಿತಿಗಿನ್ನ ಹೆಚ್ಚಾಗಿ ಪ್ರಯಾಣಿಕರನ್ನು ತುಂಬಿಸುವುದು ಇದರಿಂದಾಗಿ ದಿನನಿತ್ಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿರುವ ಕಾರಣ ಈ ವಿಚಾರವಾಗಿ ಡಿಪೋ ಮ್ಯಾನೇಜರ್ಗಳಿಗೂ ಸಹ ದೂರನ್ನು ನೀಡಿರುತ್ತಾರೆ. ಆದರೂ ಯಾವುದೇ ರೀತಿ ಸ್ಪಂದಿಸಿರುವುದಿಲ್ಲ ಎಂದು ವಿದ್ಯಾರ್ಥಿಗಳು ಹೇಳಿಕೊಂಡಿರುತ್ತಾರೆ. ಇದೇ ವಿಚಾರವಾಗಿ ದಿನಾಂಕ 26-12-2022 ರಂದು ವಿದ್ಯಾರ್ಥಿಗಳೆಲ್ಲ ರಸ್ತೆ ತಡೆದು ಪ್ರತಿಭಟನೆಗೆ ಮುಂದಾಗಿರುತ್ತಾರೆ.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕಿದೆ.