ದಿನಾಂಕ ೦೯-೦೯-೨೦೨೨ ರಂದು ಮೈಸೂರು ನಗರ ಸಿ.ಸಿ.ಬಿ. ಪೊಲೀಸರು ಮೈಸೂರು ನಗರ ವ್ಯಾಪ್ತಿಯಲ್ಲಿ ಗಸ್ತಿನಲ್ಲಿದ್ದಾಗ ಮೈಸೂರು ನಗರ ಮಂಡಿ ಮೊಹಲ್ಲಾದ ಸುನ್ನಿಚೌಕದಲ್ಲಿ ಆಕ್ಸಿಸ್ ದ್ವಿಚಕ್ರವಾಹನದಲ್ಲಿ ಇಬ್ಬರು ಕುಳಿತಿದ್ದು, ಪೊಲೀಸರನ್ನು ನೋಡಿ ಒಬ್ಬ ಆಸಾಮಿ ಓಡಿ ಹೋಗಿ ಪರಾರಿಯಾಗಿದ್ದು ಮತ್ತೊಬ್ಬ ಆಸಾಮಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಆತನು ಕಾನೂನುಬಾಹಿರವಾಗಿ ದ್ವಿ ಚಕ್ರ ವಾಹನದಲ್ಲಿ ಗಾಂಜಾವನ್ನು ಇಟ್ಟುಕೊಂಡಿರುವುದು ಕಂಡು ಬಂದ ಮೇರೆಗೆ ಸುಮಾರು ೨,೦೬,೦೦೦/-ರೂ ಮೌಲ್ಯದ ೫ಕೆ.ಜಿ. ೧೫೦ ಗ್ರಾಂ ತೂಕದ ಗಾಂಜಾ ಹಾಗೂ ಇದನ್ನು ತೂಕ ಮಾಡಲು ಇಟ್ಟುಕೊಂಡಿದ್ದ ಯಂತ್ರ ಹಾಗೂ ಸಾಗಾಣಿಕೆಗೆ ಬಳಸಿದ್ದ ದ್ವಿಚಕ್ರವಾಹನವನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ. ಈ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಓಡಿ ಪರಾರಿಯಾದ ಆರೋಪಿಯ ಪತ್ತೆ ಕಾರ್ಯ ಮುಂದುವರೆದಿದೆ.
ಈ ದಾಳಿ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ., ಕೇಂದ್ರಸ್ಥಾನ, ಅಪರಾಧ ಮತ್ತು ಸಂಚಾರ ವಿಭಾಗರವರಾದ ಶ್ರೀಮತಿ ಗೀತ. ಎಂ.ಎಸ್., ಐ.ಪಿ.ಎಸ್.ರವರ ಮಾರ್ಗದರ್ಶನದಲ್ಲಿ ಸಿ.ಸಿ.ಬಿ ಘಟಕದ ಎ.ಸಿ.ಪಿ.ರವರಾದ ಶ್ರೀ ಸಿ.ಕೆ.ಅಶ್ವತ್ಥನಾರಾಯಣರವರ ನೇತೃತ್ವದಲ್ಲಿ ಸಿ.ಸಿ.ಬಿ. ಘಟಕದ ಹೆಚ್&ಬಿ ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ರವರಾದ ಶ್ರೀ ಜಿ.ಶೇಖರ್, ಸಿಬ್ಬಂದಿಗಳಾದ ಸಲೀಂಪಾಷ, ಉಮಾಮಹೇಶ ಮಧುಸೂದನ ರವರುಗಳು ನಡೆಸಿರುತ್ತಾರೆ.
ಈ ದಾಳಿ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರವರಾದ ಡಾ: ಚಂದ್ರಗುಪ್ತ, ಐ.ಪಿ.ಎಸ್. ರವರು ಪ್ರಶಂಸಿಸಿರುತ್ತಾರೆ.