ಕುಂದಗೋಳ; ಸರ್ಕಾರಿ ಶಾಲೆಗಳು ಸ್ವಚ್ಚತೆಯಿಂದ ಕೊಡಿರಬೇಕು, ಶಾಲೆಗಳು ಬಣ್ಣದ ಲೇಪನೆಗಳಿಂದ ಕಂಗೊಳಿಸುಬೇಕು, ನೈರ್ಮಲ್ಯವನ್ನು ಕಾಪಾಡಿಕೊಳ್ಳವುದರ ಜೊತೆಗೆ ಉತ್ತಮ ಪರಿಸರ ಹೊಂದಿರಬೇಕು ಎಂಬ ಸದ್ದೋಶದಿಂದ ‘ಬಣ್ಣದರ್ಪಣೆ’ ಬಣ್ಣ ನಮ್ಮದು ಶಾಲೆ ಮತ್ತು ಸಹಾಯ ನಿಮ್ಮದು ಎಂಬ ವಿನೂತನ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಚಾಲನೆ ನೀಡಿದರು.
ಅವರು ಪಟ್ಟಣದ ಖಾಸಗಿ ಹರಭಟ್ಟ ಹೈಸ್ಕೂಲು ಶಾಲಾ ಮೈದಾನದಲ್ಲಿ ಕೇಂದ್ರ ಸಚಿವ ಜೋಶಿ ಅವರು ವಿಶೇಷ ಪರಿಕಲ್ಪನೆಯ ಬಣ್ಣದರ್ಪಣೆ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕುಂದಗೋಳ ಮತಕ್ಷೇತ್ರದ ಹಂಚಿನಾಳ ಗ್ರಾಮದ ಸರಕಾರಿ ಶಾಲೆಗೆ ಬೇಟೆ ಕೊಟ್ಟಾಗ ಅಲ್ಲಿನ ಪರಿಸ್ಥಿತಿ ಕಂಡು ತಕ್ಷಣ ಕಂಪನಿಗಳ ಸಹಾಯದಿಂದ ಕೊಠಡಿ ನಿರ್ಮಿಸಿದ್ದು. ಇದರಂತೆ ಶಾಲಾ ಕೊಠಡಿಗಳಿಗೆ ಬಣ್ಣ ಹಚ್ಚಿಕೂಡಿ ಎಂದು ಮನವಿ ಮಾಡಿಕೊಂಡಿದ್ದರು. ಅಂದು ಬಂದ ಆಲೋಚನೆ ಇವತ್ತು ಸಾಕಾರಗೊಳತ್ತುದೆ ಎಂದರು.
ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 1177 ಶಾಲಾ- ಕಾಲೇಜುಗಳು ಇದ್ದು, ಜೆ.ಎಸ್ ಡಬ್ಲೂ ಸಹಯೋಗದಲ್ಲಿ ನನ್ನ ಕ್ಷೇತ್ರದ ಎಲ್ಲ ಸರ್ಕಾರಿ ಶಾಲೆಗಳಿಗೆ ಕುಂದಗೋಳದಿಂದಲೇ ಆರಂಭಗೊಳ್ಳುತ್ತಿರುವುದು ನನಗೆ ಸಂತಸ ತಂದಿದೆ. ಈ ಕಾರ್ಯಕ್ಕೆ ಪ್ರಧಾನಿ ಮೋದಿ ಸಹ ಶಾಘ್ಲೀನಿಯ ವ್ಯಕ್ತಪಡಿಸಿದ್ದಾರೆ.
ಈಗಾಗಲೇ 133 ಶಾಲಾ ಕೂಠಡಿಗಳುನ್ನು ಕಂಪನಿಗಳ ಸಹಾಯದಿಂದ ನಿರ್ಮಿಸಿದ್ದು. ಇನ್ನೂ 322 ಕೊಠಡಿಗಳುನ್ನು ನಿರ್ಮಿಸಿದರೆ ಶಾಲಾ ಮಕ್ಕಳಿಗೆ ಸುಸಜ್ಜಿತ ವಾತವರಣ ನಿರ್ಮಿಸಿ ಸುತ್ತೇನೆ. ಈಗಾಗಲೇ ಶಾಲೆಗಳಿಗೆ ಹತ್ತು ಸಾವಿರ ಬೆಂಚ್ ಗಳನ್ನು ನೀಡಲಾಗಿದು, ಅದರ ಭಾಗವಾಗಿ ಇನ್ನೂ 50 ಸಾವಿರ ಬೆಂಚ್ ಗಳನ್ನು ನೀಡುತ್ತೇನು ಎಂದು ಭರವಸೆ ನೀಡಿದರು.
ರಾಜ್ಯಸಭಾ ಸದಸ್ಯ ಜಗ್ಗೇಶ್ ಬಣ್ಣದರ್ಪಣೆ ಅಭಿಯಾನದ ಪ್ರೋಮೊ ವಿಡಿಯೋ ಅನಾವರಣಗೊಳಿಸಿ ಮಾತನಾಡಿ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರ ಜೊತೆಯಲ್ಲಿ ಹೆಜ್ಜೆ ಹಾಕುವಂತ ನಾಯಕನನ್ನು ನೀವು ಆಯ್ಕೆ ಮಾಡಿದ್ದರಿಂದ ನೂರಾರು ಕೋಟಿಗಳ ಅಭಿವೃದ್ಧಿಯ ಅನುದಾನ ಪಡೆ ದ್ದೀರಿ. ಇಂತಹ ನಾಯಕನನ್ನು ನೀವು ಕೈ ಬಿಡದೆ ಮತ್ತೇ ಡಬಲ್ ಇಂಜಿನ್ ಸರ್ಕಾರವನ್ನು ನಿರ್ಮಿಸಲು ನಿಮ್ಮಂದಿಲೇ ಆರಂಭಗೂಳ್ಳಲ್ಲಿ ಎಂದರು
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಸಚಿವ ಶಂಕರ ಪಾಟೀಲ ಮನೇನಕೂಪ್ಪ, ಜೆ. ಎಸ್ ಡಬ್ಲೂ, ಕಂಪನಿಯ ಸಿಇಒ ಅಶ್ವಿನಿ ಸೆಕ್ಸೇನ್ ಮಾತನಾಡಿದರು ವಿಪ ಸದಸ್ಯ ವಿ ಎಸ್ ಸಂಕನೂರ, ಶಾಸಕ ಅರವಿಂದ ಬೆಲ್ಲದ, ಸಿ ಎಮ್ ನಿಂಬಣ್ಣವರ. ಮಾಜಿ ಶಾಸಕ ಎಸ್ ಐ ಚಿಕ್ಕನಗೌಡ್ರ, ಎಮ್ ಆರ್ ಪಾಟೀಲ, ಪಪಂ ಅಧ್ಯಕ್ಷ ಪ್ರಕಾಶ ಕೊಕಾಟೆ, ಉಪಾಧ್ಯಕ್ಷ ಹನುಮಂತಪ್ಪ ರಣತೂರ, ಸಾನಿಧ್ಯವನ್ನು ಪಂಚಗ್ರಹ ಹೀರೆಮಠದ ಶಿತಿಕಂಠೆಶ್ವರ ಮಹಾಸ್ವಾಮಿಗಳು ಕಲ್ಯಾಣಪುರ ಬಸವಣ್ಣನವಜ್ಜನವರು, ಶಿವಾನಂದ ಮಠದ, ಮಹಾಂತ ಸ್ವಾಮೀಜಿ ಇದ್ದರು.
ವರದಿ; ಶಾನು ಯಲಿಗಾರ
ನಂಜನಗೂಡು: ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸಮೀಪ…
ನಂಜನಗೂಡು: ಅಪರಿಚಿತ ಕಾರು ಚಾಲಕನ ಅತಿ ವೇಗಕ್ಕೆ ಸಿಲುಕಿದ ಆರು ಜನರ ಪೈಕಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಓರ್ವ ಮಹಿಳೆ…
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಯಿಂದ ಗೊಲಗೇರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆ ಅಪಘಾತದಲ್ಲಿ ಗೊಲಗೇರಿ ಗ್ರಾಮದ ಯುವಕ…
ನಂಜನಗೂಡು: ನಗರದಲ್ಲಿ ವಾಸಿಸುವ ನಗರವಾಸಿಗಳಿಗೆ ದುಬಾರಿ ವೆಚ್ಚದ ಕುಡಿಯುವ ನೀರಿನ ಬಿಲ್‌ಗಳನ್ನು ನೀಡಲಾಗುತ್ತಿದೆ, ಅಲ್ಲದೆ ಅನಧಿಕೃತ ಬಡಾವಣೆಗಳಿಗೆ ಎನ್‌ಓಸಿ ನೀಡಿ…
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು 50,000 ಲಂಚ ಸ್ವೀಕರಿಸುತ್ತಿದ್ದ ವೇಳೆ…
ಗೌರಿಬಿದನೂರು ನಗರದ ವಿನಾಯಕ ನಗರದ ವಾಸಿ ಪದ್ಮ ಜೈನ್ (59) ಎಂಬುವವರ 50 ಗ್ರಾಂ ಮಾಂಗಲ್ಯ ಸರವನ್ನು ದ್ವಿಚಕ್ರ ವಾಹನದಲ್ಲಿ…