ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಅಂಬೇಡ್ಕರ್ ನಗರದಲ್ಲಿ ಗುಂಪು ಕಟ್ಟಿಕೊಂಡು ಜೂಜು ( ಇಸ್ಪೆಟ್ ) ಆಟದಲ್ಲಿ ತೊಡಗಿದ್ದ 5 ಜನ ಜೂಜುಕೋರರನ್ನು ಬಂಧನ ಮಾಡುವ ಕಾರ್ಯಾಚರಣೆಯಲ್ಲಿ ಹುಬ್ಬಳ್ಳಿ ಧಾರವಾಡ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ ಖಚಿತ ಮಾಹಿತಿ ಆಧರಿಸಿದ ಹುಬ್ಬಳ್ಳಿ ಧಾರವಾಡ ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಬಾಬಾ ಹುಳ್ಳನ್ನವರ್ ಮತ್ತು ಹುಬ್ಬಳ್ಳಿ ಧಾರವಾಡ ಸಿಸಿಬಿ ಪೋಲಿಸ್ ಅಧಿಕಾರಿಗಳ ತಂಡದವರು ಕಾರ್ಯಾಚರಣೆ ನಡೆಸಿ ದಾಳಿ ಮಾಡಿ ಇಸ್ಪೇಟ್ ಆಟವನ್ನು ಆಡುತ್ತಿದ್ದ 5 ಜನರನ್ನು ಬಂಧಿಸಿ 1,31,000 ( ಒಂದು ಲಕ್ಷ ಮೂವತ್ತೊಂದು ಸಾವಿರ ) ರೂ ಹಣವನ್ನು ವಶಪಡಿಸಿಕೊಂಡಿದ್ದು ಈ ವಿಚಾರವಾಗಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಜೂಜುಕೋರರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ವರದಿ: ಶಿವು ಹುಬ್ಬಳ್ಳಿ .