ಸಿ.ಸಿ.ಬಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಿನಾಂಕ ೧೭/೦೯/೨೦೨೨ ರಂದು ಉದಯಗಿರಿ ಪೊಲೀಸ್ ಠಾಣಾ ಸರಹದ್ದು ಗೌಸಿಯಾನಗರದ ಸುಲ್ತಾನ್ ರಸ್ತೆಯಲ್ಲಿರುವ ಖದೀರ್‌ರವರ ಕೇರಂ ಕ್ಲಬ್ ಮುಂಭಾಗ ದಾಳಿ ಮಾಡಿ ಕಾನೂನು ಬಾಹಿರವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ ೫ ಕೆ.ಜಿ ೩೦೦ ಗ್ರಾಂ ತೂಕದ ಗಾಂಜಾ, ರೂ ೯.೫೦೦/- ನಗದು ಹಣ ಹಾಗೂ ಒಂದು ಹೊಂಡಾ ಆಕ್ಟೀವಾ ಸ್ಕೂಟರ್ ಅಮಾನತ್ತು ಪಡಿಸಿಕೊಂಡಿದ್ದು ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ದಾಳಿ ಕಾರ್ಯವನ್ನು ಮೈಸೂರು ನಗರದ ಡಿಸಿಪಿ, ಕೇಂದ್ರಸ್ಥಾನ, ಅಪರಾಧ ಮತ್ತು ಸಂಚಾರ ವಿಭಾಗ ರವರಾದ ಶ್ರೀಮತಿ ಗೀತ ಎಂ.ಎಸ್, ಐ.ಪಿ.ಎಸ್ ಹಾಗೂ ಸಿ.ಸಿ.ಬಿ ಘಟಕದ ಎ.ಸಿ.ಪಿ ರವರಾದ ಶ್ರೀ ಸಿ.ಕೆ. ಅಶ್ವಥನಾರಾಯಣ ರವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಎ. ಮಲ್ಲೇಶ್ ಹಾಗೂ ಸಿಬ್ಬಂದಿಗಳಾದ ಅನಿಲ್. ಎಂ, ಸುಭಾನಲ್ಲಾ ಬಾಲ್‌ದಾರ್ ರವರುಗಳು ಮಾಡಿರುತ್ತಾರೆ.
ಈ ದಾಳಿ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರವರಾದ ಡಾ: ಚಂದ್ರಗುಪ್ತ, ಐ.ಪಿ.ಎಸ್. ರವರು ಪ್ರಶಂಸಿಸಿರುತ್ತಾರೆ.