ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಲಕ್ನೋ-ಆಗ್ರಾ ಎಕ್ಸ್‌ಪ್ರೆಸ್‌ವೇನಲ್ಲಿ ಕೋಳಿ ತುಂಬಿದ್ದ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ. ಪರಿಣಾಮ ನೂರಾರು ಕೋಳಿಗಳು ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಇದನ್ನು ಗಮನಿಸಿದ ಸ್ಥಳೀಯರು ಅವುಗಳನ್ನು ಹಿಡಿದುಕೊಳ್ಳಲು ಮುಗಿಬಿದ್ದ ಘಟನೆಯ ವಿಡಿಯೋ ಭಾರೀ ವೈರಲ್ ಆಗಿದೆ.

ಲಾರಿ ಪಲ್ಟಿಯಾದ ಕ್ಷಣ

ಮಾಹಿತಿಯ ಪ್ರಕಾರ, ಕೋಳಿಗಳನ್ನು ಸಾಗಿಸುತ್ತಿದ್ದ ಲಾರಿ ಅಚಾನಕ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ್ದರಿಂದ, ಲಾರಿಯಲ್ಲಿದ್ದ ಕೋಳಿಗಳು ರಸ್ತೆಯ ಮೇಲೆ ಹರಡಿದವು. ಈ ದೃಶ್ಯವನ್ನು ಕಂಡ ಸ್ಥಳೀಯರು ಹಾಗೂ ಹಾದುಹೋಗುತ್ತಿದ್ದ ಪ್ರಯಾಣಿಕರು ಲಾರಿ ಸಮೀಪಕ್ಕೆ ದೌಡಾಯಿಸಿ, ಕೈಗೆ ಸಿಕ್ಕಷ್ಟು ಕೋಳಿಗಳನ್ನು ಹಿಡಿದುಕೊಳ್ಳಲು ಹರಸಾಹಸ ಪಟ್ಟರು.

ಜನರ ಹಾವಳಿ, ವೈರಲ್ ಆಗಿದ ದೃಶ್ಯ

ಘಟನೆಯ ಸುದ್ದಿಯೊಡನೆ ಪಕ್ಕದ ಹಳ್ಳಿಯವರೂ ಸ್ಥಳಕ್ಕೆ ಆಗಮಿಸಿ ಕೋಳಿಗಳನ್ನು ಹಿಡಿಯಲು ಮುಗಿಬಿದ್ದರು. ಈ ಗದ್ದಲದ ಮಧ್ಯೆ ಕೆಲವರು ಕೈಗೆ ಸಿಕ್ಕಷ್ಟು ಕೋಳಿಗಳನ್ನು ಕೈಯಲ್ಲಿ ಹಿಡಿದುಕೊಂಡು ಓಡಲು ಪ್ರಾರಂಭಿಸಿದರು. ಕೆಲವರು ಬೈಕ್ ಹಾಗೂ ಸೈಕಲ್ ಬಳಸಿ ಕೋಳಿಗಳನ್ನು ಸಾಗಿಸಿಕೊಳ್ಳುತ್ತಿದ್ದರೆ, ಇತರ ಕೆಲವರು ಬಟ್ಟೆ ಹಾಗೂ ಚೀಲಗಳಲ್ಲಿ ತುಂಬಿಕೊಂಡು ಹೋಗುವ ದೃಶ್ಯವೂ ಕಂಡುಬಂದಿದೆ.

ಸದ್ಯ, ಈ ಘಟನೆಯ ವಿಡಿಯೋ  ಹರಿದಾಡುತ್ತಿದ್ದು, ನೆಟ್ಟಿಗರು ಇದರ ಬಗ್ಗೆ ತೀವ್ರ ಚರ್ಚೆ ನಡೆಸುತ್ತಿದ್ದಾರೆ. ಲಾರಿಯ ಚಾಲಕನ ಸ್ಥಿತಿ ಹಾಗೂ ಅಪಘಾತದ ಪೈಚಾರಿ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ.

Related News

error: Content is protected !!