ತಮ್ಮ ಹಳೆ ಸ್ನೇಹಿತರು ಸಂಬಂಧಿಕರನ್ನು ನೋಡಿ ಭಾವುಕಾರದ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಹುಟ್ಟೂರಿನಲ್ಲಿ ಕಣ್ಣೀರು ಹಾಕಿದರು. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿರುವ ತಮ್ಮ ತಂದೆ ತಾಯಿ ಜನಿಸಿದ ಬಾಳಿ ಬದುಕಿದ ಕಮಡೊಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದು ಆ ಸಂದರ್ಭ ತಮ್ಮ ಬಾಲ್ಯದ ನೆನಪು ಮೆಲುಕು ಹಾಕಿ ಕಣ್ಣೀರಿಟ್ಟರು.
ಇದೇ ಸಂದರ್ಭ ಅವರು ಸಿಎಂ ಹುದ್ದೆಗೆ ಏರಲು ಸ್ನೇಹಿತರ ಸಹಾಯವನ್ನು ಸಿಎಂ ಬೊಮ್ಮಾಯಿ ನೆನೆದರು. ಇದೇ ಸಂದರ್ಭ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿಕೆ ನೀಡಿದ್ದು ‘ನಮ್ಮ ಪೂರ್ವಜರು ಬದುಕಿ ಬಾಳಿದಂತಹ ಮನೆ. ನಮ್ಮ ತಂದೆ ಇದ್ದಂತಹ ಮನೆ, ಎಲ್ಲ ಹಿರಿಯರು, ಸ್ನೇಹಿತರು ನೆನಪಾಗ್ತಾರೆ. ಚಿಕ್ಕಂದಿನಲ್ಲಿ ಸ್ನೇಹಿತರು ಜತೆಗೆ ಕಳೆದ ಆಟಗಳು ಕ್ಷಣಗಳ ಎಲ್ಲವೂ ನೆನಪು ಆಗುತ್ತೆ.
ಬಹಳ ಸುಂದರ ಗ್ರಾಮ ನನ್ನದು ಒಳ್ಳೆಯ ಕೆರೆ,ದೇವಸ್ಥಾನಗಳಿವೆ. 52 ದಶಕಗಳ ಹಿಂದೆಯೇ ಒಳ್ಳೆಯದು ಲೈಬ್ರರಿ ಇರೋ ಗ್ರಾಮ ನಮ್ಮದು. ನಮ್ಮ ಗ್ರಾಮದಲ್ಲಿ ಫಲವತ್ತಾದ ಜಮೀನು ಇದೆ. ಕಷ್ಟಪಟ್ಟು ದುಡಿಯುವ ಜನ ಬಹಳ ಸಜ್ಜನರು. ಗ್ರಾಮದಲ್ಲಿ ಯಾವಾಗಲೂ ನೀರಿನ ಕೊರತೆ ಇತ್ತು . ನಮ್ಮ ತಂದೆಯವರ ಕಾಲದಲ್ಲಿ ಬೋರವೆಲ್ ಮೂಲಕ ನೀರು ಕೊಡಲಾಗಿತ್ತು. ಗ್ರಾಮದಲ್ಲಿ ಸವಳು ನೀರು ಇರೋದ್ರಿಂದ ಪಕ್ಕದ ಶಿರೂರ ಗ್ರಾಮದಿಂದ ನಾನು ನೀರು ತಂದಿರೋದು ನೆನಪು ಇದೆ. ಆದರೀಗ ನರೇಂದ್ರ ಆಶೀರ್ವಾದಿಂದ ಜಲಜೀವನ ಮಿಷನ್ ನಿಂದ ಪ್ರತಿಯೊಂದು ಮನೆಗೆ ನೀರಿನ ವ್ಯವಸ್ಥೆ ಮಾಡಿದ್ದೇವೆ. ಬಹಳ ವರ್ಷದ ನೀರಿನ ಸಮಸ್ಯೆ ಬಗೆ ಹರಿದಿರೋದು ಸಂತಸ ತಂದಿದೆ. ಊರಿನ ಮಗ ರಾಜ್ಯದ ಮುಖ್ಯಸ್ಥರಾದಾಗ ಗ್ರಾಮದ ಜನರು ಬಹಳ ಪ್ರೀತಿ ವಿಶ್ವಾಸ ತೋರಿಸಿ ಹರಸಿದ್ದಾರೆ. ಬಹಳ ದಿನಗಳ ನಂತರ ನಮ್ಮ ಗ್ರಾಮಕ್ಕೆ ಬಂದಿದ್ದೇನೆ ಎಂದ ಸಿಎಂ
ಇದಕ್ಕೂ ಮುಂಚೆ ಕಮಡೊಳ್ಳಿ ಗ್ರಾಮಕ್ಕೆ ಭೇಟಿ ಕೊಟ್ಟ ಮುಖ್ಯಮಂತ್ರಿಗೆ ಅದ್ಧೂರಿ ಸ್ವಾಗತ ನೀಡಲಾಗಿದ್ದು ಅವರು ತಮ್ಮ ಮನೆಯಲ್ಲಿ ಮಂಡಕ್ಕಿ ಮಿರ್ಚಿ ಸವಿದರು. ನಂತರ ಗ್ರಾಮ ದೇವತೆಯ ದರ್ಶನ ಪಡೆದ ಸಿಎಂಗೆ ಬಿಜೆಪಿ ಟಿಕೇಟ್ ಆಕಾಂಕ್ಷಿಗಳಾದ ಎಸ್ ಐ ಚಿಕ್ಕನಗೌಡರ, ಎಂ.ಆರ್ ಪಾಟೀಲ್ ಸಾಥ್ ತೆರಳಿದರು.