Latest

ಚಿತ್ರದುರ್ಗದಲ್ಲಿ ಆನ್ಲೈನ್ ಹೂಡಿಕೆ ಹೆಸರಿನಲ್ಲಿ ₹34 ಲಕ್ಷ ವಂಚನೆ: ಮೂವರು ಆರೋಪಿಗಳ ಅರೆಸ್ಟ್

ಚಿತ್ರದುರ್ಗ, ಫೆಬ್ರವರಿ 17: ಸೈಬರ್ ಅಪರಾಧಕ್ಕೆ ಸಂಬಂಧಿಸಿದ ಭರ್ಜರಿ ಕಾರ್ಯಾಚರಣೆ ನಡೆಸಿದ ಚಿತ್ರದುರ್ಗ ಸಿಇಎನ್ (ಸೈಬರ್, ಎಕಾನಾಮಿಕ್ ಮತ್ತು ನಾರ್ಕೋಟಿಕ್ ಕ್ರೈಮ್) ಪೊಲೀಸರು ಮೂವರು ಆನ್ಲೈನ್ ವಂಚಕರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಉಡುಪಿಯ ಪ್ರಥ್ವೇಶ್ (25), ಚಿಕ್ಕಮಗಳೂರು ಜಿಲ್ಲೆಯ ನಂದೀಶ (24) ಮತ್ತು ಬೆಂಗಳೂರಿನ ಉಮರ್ ಫಾರೂಕ್ (24) ಎಂದು ಗುರುತಿಸಲಾಗಿದೆ. ಅವರಿಂದ ಮೂರು ಮೊಬೈಲ್‌ ಫೋನ್‌ಗಳು ಹಾಗೂ ವಂಚಿತ ಹಣದಿಂದ ಖರೀದಿಸಲಾದ ₹4.5 ಲಕ್ಷ ಮೌಲ್ಯದ ಮಹೀಂದ್ರ XUV 700 ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ವಿವರ:

ಆರೋಪಿಗಳು “K3-Gold Stock Investor Discussion Group” ಎಂಬ WhatsApp ಗುಂಪಿನ ಮೂಲಕ Fyers ಶೇರು ಮಾರುಕಟ್ಟೆ ಪ್ಲಾಟ್‌ಫಾರ್ಮ್ ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭವಾಗುತ್ತದೆ ಎಂದು ಆಮಿಷ ಒಡ್ಡಿ, ಚಿತ್ರದುರ್ಗ ನಿವಾಸಿ ಸೈಯದ್ ಸಿರಾಜ್ ಬಂಡಿ ಅವರಿಂದ ₹34 ಲಕ್ಷ ಹಣವನ್ನು ವಂಚಿಸಿದ್ದಾರೆ.

ಆರೋಪಿಗಳು ಶೇರು ಹೂಡಿಕೆ ಹೆಸರಿನಲ್ಲಿ ಮೋಸ ಮಾಡಿರುವ ಬಗ್ಗೆ ಸೈಯದ್ ಸಿರಾಜ್ ಬಂಡಿ 2023ರ ನವೆಂಬರ್ 23 ರಂದು ಚಿತ್ರದುರ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪೊಲೀಸರು ನಡೆಸಿದ ಕಾರ್ಯಾಚರಣೆ:

ದೂರು ಸ್ವೀಕರಿಸಿದ ನಂತರ, ಜಿಲ್ಲಾ ಪೊಲೀಸ್ ಅಧೀಕ್ಷಕ ರಂಜಿತ್ ಬಂಡಾರು (IPS) ಹಾಗೂ ಸಿಇಎನ್ ಠಾಣೆಯ ಪೊಲೀಸ್ ಉಪಾಧೀಕ್ಷಕ ಉಮೇಶ್ ಈಶ್ವರ್ ನಾಯ್ಕ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಯಿತು.

ಪೊಲೀಸ್ ನಿರೀಕ್ಷಕ: ವೆಂಕಟೇಶ್.ಎನ್

ASI: ಅಂಜನಪ್ಪ

Head Constables: ಕೆಂಚಪ್ಪ, ಗಂಗಾಧರಪ್ಪ

CPC: ಗಗನ್ ದೀಪ್

ವೈಜ್ಞಾನಿಕ ತನಿಖೆ ಹಾಗೂ ಹಣದ ಹರಿವಿನ ಪರಿವೀಕ್ಷಣೆಯ ಮೂಲಕ ಆರೋಪಿಗಳ ಪತ್ತೆ ಕಾರ್ಯಕ್ಕೆ ಮುನ್ನಡೆ ನೀಡಲಾಯಿತು. ಕೊನೆಗೂ, ವಿಶೇಷ ತಂಡ ಪ್ರಕರಣವನ್ನು ಭೇದಿಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು.

ಸೈಬರ್ ಕ್ರೈಮ್ ವಿಭಾಗದ ಆಶಾ, ಹರ್ಷವರ್ಧನ್ ಹಾಗೂ ಲೋಕೇಶ್ ಎಂಬುವವರು ತಾಂತ್ರಿಕ ವಿಶ್ಲೇಷಣೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದು, ಅವರ ಶ್ರಮವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ರಂಜಿತ್ ಕುಮಾರ್ ಬಂಡಾರು ಶ್ಲಾಘಿಸಿದ್ದಾರೆ.

ಸೈಬರ್ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

nazeer ahamad

Recent Posts

ಮುಳಬಾಗಿಲು ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ನಡುವೆ ತಟ್ಟೆ ತೊಳೆಯುವ ವಿಚಾರಕ್ಕೆ ಮಾರಾಮಾರಿ!

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಲ್ಲನಾಯಕನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ನಡುವೆ ಗಲಾಟೆಯ ಘಟನೆ ನಡೆದಿದೆ.…

18 minutes ago

ಒಂದೇ ಗೂಗಲ್ ಸ್ಟಾರ್ ರೇಟಿಂಗ್ ಕಾರಣ: ಪಿಜಿ ಮಾಲೀಕನಿಂದ ವಿದ್ಯಾರ್ಥಿಗೆ ಹಲ್ಲೆ!”

ದಕ್ಷಿಣ ಕನ್ನಡ ಜಿಲ್ಲೆಯ ಕದ್ರಿಯಲ್ಲಿ ಪಿಜಿಯ ಅವ್ಯವಸ್ಥೆ ಕುರಿತಂತೆ ಗೂಗಲ್ ರೇಟಿಂಗ್‌ನಲ್ಲಿ ಕೆಳಮಟ್ಟದ ಅಂಕ ನೀಡಿದ್ದಕ್ಕೆ ಪಿಜಿ ಮಾಲೀಕನ ಕೋಪಕ್ಕೊಳಗಾದ…

1 hour ago

ಲಕ್ನೋದಲ್ಲಿ ರಾತ್ರಿ ವಿಚಿತ್ರ ಹಂಗಾಮಾ: ರಸ್ತೆ ಮೇಲೆ ಕುಳಿತು ಮಹಿಳೆಯ ಅಸಹಜ ವರ್ತನೆ,! ಪೊಲೀಸರು ವಶಕ್ಕೆ

ಉತ್ತರಪ್ರದೇಶದ ಲಕ್ನೋ ನಗರದ ವಿಭೂತಿ ಖಾಂಡ್ ಪ್ರದೇಶದಲ್ಲಿ ಬುಧವಾರ (ಮಾರ್ಚ್ 19) ರಾತ್ರಿ ಅಚ್ಚರಿಯ ಘಟನೆಯೊಂದು ನಡೆದಿದೆ. ರಾತ್ರಿ ಸುಮಾರು…

3 hours ago

ನಶೆ ಮಾಡಿದ ವ್ಯಕ್ತಿಯಿಂದ ದೇವಸ್ಥಾನಕ್ಕೆ ಕಲ್ಲು ತೂರಾಟ!

ಬೆಳಗಾವಿ ನಗರದ ಪಾಂಗುಳ ಗಲ್ಲಿಯಲ್ಲಿರುವ ಅಶ್ವತ್ಥಾಮ ದೇವಸ್ಥಾನದ ಮೇಲೆ ಕಲ್ಲು ತೂರಿದ ಘಟನೆಯೊಂದು ವರದಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಜ್ವಲ್…

4 hours ago

ಠಾಣೆಯೊಳಗೆ ಜೂಜಾಟ! ಐದು ಖಾಕಿ ಅಧಿಕಾರಿಗಳು ಅಮಾನತ್ತು.

ಚಿತ್ತಾಪುರ ತಾಲೂಕಿನ ವಾಡಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ವಿರುದ್ಧವಾಗಿ ಇಸ್ಪೀಟ್ ಆಟ ಆಡಿದ್ದ ಐವರು ಪೊಲೀಸರನ್ನು ಅಮಾನತು ಮಾಡಲು ಜಿಲ್ಲಾ…

5 hours ago

ಬ್ಲೂಟೂತ್ ಮೂಲಕ ಪೊಲೀಸ್ ಪರೀಕ್ಷೆಯಲ್ಲಿ ಮೋಸ: ರಾಜಸ್ಥಾನದ ಮಹಿಳಾ ಎಸ್‌.ಐ ಬಂಧನ!”

ರಾಜಸ್ಥಾನದಲ್ಲಿ 2021ನೇ ಸಾಲಿನ ಸಬ್-ಇನ್ಸ್‌ಪೆಕ್ಟರ್ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದ ಪೇಪರ್ ಲೀಕ್ ಪ್ರಕರಣದಲ್ಲಿ ರಾಜ್ಯದ ವಿಶೇಷ ಕಾರ್ಯಾಚರಣೆ ಗುಂಪು (SOG)…

5 hours ago