ಕನ್ನಡ ಚಲನಚಿತ್ರ ಕಪ್ 2023ನೇ ಆವೃತ್ತಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಸ್ಯಾಂಡಲ್‌ವುಡ್‌ನ ಸ್ಟಾರ್‌ಗಳು ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನ ದಿಗ್ಗಜರು ಒಟ್ಟಾಗಿ ಆಡುವ ಈ ಟೂರ್ನಿ ಎರಡು ಆವೃತ್ತಿಗಳನ್ನು ಈಗಾಗಲೇ ಯಶಸ್ವಿಯಾಗಿ ಪೂರೈಸಿದ್ದು ಮೂರನೇ ಆವೃತ್ತಿ ಫೆಬ್ರವರಿ 24 ಹಾಗೂ 25ರಂದು ಆಯೋಜನೆಯಾಗಲಿದೆ. ಈ ಬಾರಿಯ ಕೆಸಿಸಿ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್‌ನ ದಿಗ್ಗಜ ಆಟಗಾರ ಕ್ರಿಸ್ ಗೇಲ್ ಭಾಗಿಯಾಗಲಿದ್ದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಎರಡು ದಿನಗಳ ಕಾಲ ಕ್ರಿಕೆಟ್ ಗೇಲ್ ಅಬ್ಬರ ನಡೆಯಲಿದೆ.
ಸ್ಯಾಂಡಲ್‌ವುಡ್‌ನ ಸ್ಟಾರ್‌ಗಳನ್ನು ಒಳಗೊಂಡ ಆರು ತಂಡಗಳ ನಡುವೆ ಈ ಟೂರ್ನಿ ನಡೆಯಲಿದ್ದು ಪ್ರತಿ ತಂಡದಲ್ಲಿಯೂ ಅಂತಾರಾಷ್ಟ್ರೀಯ ಕ್ರಿಕೆಟ್‌ನ ತಲಾ ಒಬ್ಬ ಸ್ಟಾರ್ ಆಟಗಾರ ಆಡಲಿದ್ದಾರೆ. ಈ ಪೈಕಿ ಕ್ರಿಸ್ ಗೇಲ್ ಕೂಡ ಒಬ್ಬರಾಗಿದ್ದು ಕಿಚ್ಚ ಸುದೀಪ್ ನಾಯಕತ್ವದ ತಂಡದಲ್ಲಿ ಕ್ರಿಸ್ ಗೇಲ್ ಕಣಕ್ಕಿಳಿಯಲಿದ್ದಾರೆ.