ಕಲಬುರಗಿ: ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ 8ನೇ ತರಗತಿ ವಿದ್ಯಾರ್ಥಿನಿ ಮಹಾಲಕ್ಷ್ಮಿ ಆಟೋ ಚಾಲಕನಿಂದ ಅತ್ಯಾಚಾರದ ಬೆದರಿಕೆ ಎದುರಿಸಿದ ನಂತರ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.
ಮಹಾಲಕ್ಷ್ಮಿ, ತನ್ನ ಶಾಲೆಗೆ ಹಾಗೂ ಮನೆಗೆ ಹೋಗುವಾಗ, ಮೆಹಬೂಬ್ ಎಂಬ ಆಟೋ ಚಾಲಕ ಅವಳನ್ನು ಹಿಂಬಾಲಿಸಿ, “ನೀನು ನನ್ನೊಂದಿಗೆ ಮಾತನಾಡಿದರೆ ನಿನ್ನನ್ನು ಅತ್ಯಾಚಾರ ಮಾಡುತ್ತೇನೆ” ಎಂದು ಬೆದರಿಸಿದ್ದ ಎಂದು ವಿದ್ಯಾರ್ಥಿನಿಯ ತಂದೆ ಯಶವಂತರಾಯಗೌಡ ಬಿರಾದಾರ ಹೇಳಿದ್ದಾರೆ. ಈ ಕಿರುಕುಳದಿಂದ ಬೇಸತ್ತು, ಮಹಾಲಕ್ಷ್ಮಿ ಮನನೊಂದು ನೇಣು ಹಾಕಿಕೊಂಡಿದ್ದಾಳೆ.
ವಿದ್ಯಾರ್ಥಿನಿಯ ತಂದೆ ಜೇವರ್ಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಮೇರೆಗೆ, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ.