ಉತ್ತರಕನ್ನಡ ಜಿಲ್ಲೆಗೆ ಘಟನೆ ನಡೆದು ದಿನಗಳು ಕಳೆಯುತ್ತಿದ್ದಂತೆ ಒಬ್ಬರಾದ ಮೇಲೆ ಒಬ್ಬರು ರಾಜಕಾರಣಿಗಳು ಶೀರೂರು ಘಟನಾ ಸ್ಥಳಕ್ಕೆ ಬೇಟಿ ನೀಡುತ್ತಿದ್ದಾರೆ , ಈ ಕುರಿತು ಮಾನ್ಯ ಮುಖ್ಯಮಂತ್ರಿಗಳು ಕೂಡ ದಿ: 21 ರಂದು ಶಿರುರಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಘಟನಾ ಸ್ಥಳದಲ್ಲಿ ಮಣ್ಣು ತೆಗಿಯುವ ಕೆಲಸ ನಡೆಯುತ್ತಿದೆ ಯಾವುದೇ ವಿಳಂಬವಿಲ್ಲ ,ಮತ್ತು ನಾನು ಇಲ್ಲಿ ರಾಜಕೀಯ ಮಾಡಲು ಬಂದಿಲ್ಲ ಮಣ್ಣಿನಡಿಯಲ್ಲಿ ಸಿಲುಕಿ ಸವನಪ್ಪಿದವರಿಗೆ ಸಂತಾಪ ಸೂಚಿಸಿದ್ದಾರೆ ,ಹಾಗೆಯೇ ಮಣ್ಣಿನಡಿ ಇರುವ ಅರ್ಜುನ್ ಅವರನ್ನು ಕೂಡ ಕೂಡಲೇ ರಕ್ಷಣೆ ಮಾಡಲಾಗುವುದು,ಮತ್ತು ಮಣ್ಣಿನಡಿ ಸಿಲುಕಿರುವ ಕೇರಳ ಮೂಲದ ಅರ್ಜುನ್ ನನ್ನು ರಕ್ಷಣೆ ಮಾಡಲು ಅಲ್ಲಿ ಜನ ಕೂಡ ಬಂದಿದ್ದಾರೆ ನಾವು ಕೂಡ ಆತನ ರಕ್ಷಣೆ ಪ್ರಯತ್ನದಲ್ಲಿದ್ದೇವೆ,ಎಂದು ಹೇಳಿದ್ದಾರೆ
ಇನ್ನು ಈ ಘಟನೆ ಕುರಿತಂತೆ ಐ ಆರ್ ಬಿ ಇರಲಿ ಯಾವುದೇ ಅಧಿಕಾರಿಗಳು ಇರಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಹಾಗೂ ಗುಡ್ಡ ದೊಡ್ಡ ಪ್ರಮಾಣದಲ್ಲಿ ಕುಸಿದಿದ್ದು ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ,, ಈ ಸಮಯದಲ್ಲಿ
ಕಂದಾಯ ಸಚಿವ ಕೃಷ್ಣಬೈರೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಶಾಸಕ ಸತೀಶ್ ಸೈಲ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಎಲ್.ಕೆ. ಅತೀಕ್, ಶಾಲಿನಿ ರಜನೀಶ್ ಸೇರಿ ಕಂದಾಯ ಇಲಾಖೆಯ ಹಿರಿಯ ಅಧಿಕಾರಿ ಮತ್ತು ಸಿಬ್ಬಂದಿ ಸ್ಥಳದಲ್ಲಿದ್ದರು
ವರದಿ : ಶ್ರೀಪಾದ್ ಎಸ್