ವಂದೇ ಭಾರತ ಎಕ್ಸ್ಪ್ರೆಸ್ ರೈಲಿನಲ್ಲಿ ಭೋಪಾಲ್ನಿಂದ ಗ್ವಾಲಿಯರ್ಗೆ ಪ್ರಯಾಣಿಸುತ್ತಿದ್ದ ಸುಬೋಧ್ ಪಹಲಾಜನ್ ಎಂಬ ಪ್ರಯಾಣಿಕರಿಗೆ ಎಸ್ಆರ್ಸಿಟಿಸಿ ಸಿಬ್ಬಂದಿಯಿಂದ ಊಟವನ್ನು ಪಡೆದುಕೊಂಡಿದ್ದಾರೆ.
ಇನ್ನೇನು ಊಟ ಮಾಡಬೇಕು ಚಪಾತಿಯಲ್ಲಿ ಸತ್ತ ಜಿರಳೆಮರಿಯೊಂದು ಕಣ್ಣಿಗೆ ಬಿದ್ದಿದೆ. ಸುಬೋಧ ತಡಮಾಡದೆ ಟ್ವೀಟ್ ಮೂಲಕ ಐಆರ್ಸಿಟಿಸಿಯ ಕಳಪೆ ಸೇವೆಯ ಕುರಿತು ರೈಲ್ವೇ ಇಲಾಖೆಯ ಗಮನ ಸೆಳೆದಿದ್ದಾರೆ. ನೆಟ್ಟಿಗರು ಈ ಟ್ವೀಟಿನಡಿ ತಾವು ಎದುರಿಸಿದ ಅನುಭವಗಳನ್ನೂ ಹಂಚಿಕೊಂಡು ಭಾರತೀಯ ರೈಲ್ವೆ ಇಲಾಖೆಯ ಬಗ್ಗೆ ಕಿಡಿಕಾರಿದ್ಧಾರೆ.
@IRCTCofficial found a cockroach in my food, in the vande bharat train. #Vandebharatexpress#VandeBharat #rkmp #Delhi @drmbct pic.twitter.com/Re9BkREHTl
— pundook🔫🔫 (@subodhpahalajan) July 24, 2023