ಮುಂಡಗೋಡ: ತಾಲೂಕಿನ ಮುಡಸಾಲಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಭಾರೀ ಅನಾಹುತವೊಂದು ಸಂಭವಿಸಿದೆ.ಹೌದು ಮುಡಸಾಲಿ ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯೊಂದು ನಿನ್ನೆ ತಡರಾತ್ರಿ ಕುಸಿದುಬಿದ್ದು ಭಾರಿ ಅನಾಹುತವೊಂದು ಸಂಭವಿಸಿದೆ ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
ಅಧಿಕಾರಿಗಳ ನಿರ್ಲಕ್ಷವೇ?
ಸರ್ಕಾರ ಈ ಮೊದಲೇ ತಿಳಿಸಿರುವಂತೆ ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳಲ್ಲಿ ಪಾಠ ಬೋಧನೆ ಮಾಡದಂತೆ ಆದೇಶ ಹೊರಡಿಸಿದೆ .ಆದರೆ ಈ ಬಗ್ಗೆ ಶಾಲಾ ಮುಖ್ಯಾಧ್ಯಾಪಕರು ನಿರ್ಲಕ್ಷ್ಯ ವಹಿಸಿದರೆ ಎಂಬ ಅನುಮಾನ ಕಾಡುತ್ತಿದೆ. ಅಥವಾ ಸರ್ಕಾರದ ಆದೇಶ ಇವರಿಗೆ ತಿಳಿದೇ ಇಲ್ಲವೇ?ಏನೇ ಆಗಲಿ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುವುದು ಯಾವ ನ್ಯಾಯ ?ಎಂದು ಗ್ರಾಮಸ್ಥರು ಶಿಕ್ಷಣ ಇಲಾಖೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ .
ಬಿದ್ದ ಕೊಠಡಿಯಲ್ಲಿಯೇ 4 ಮತ್ತು5 ನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ನಡೆಯುತ್ತಿತ್ತಂತೆ.ಹೌದು ಮುಡಸಾಲಿ ಗ್ರಾಮದ ಶಾಲೆಯಲ್ಲಿ 103 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ನಾಲ್ಕು ಮತ್ತು ಐದನೇ ತರಗತಿಯ ಸುಮಾರು 30 ವಿದ್ಯಾರ್ಥಿಗಳು ಇದೇ ಶಿಥಿಲವಾದ ಕೊಠಡಿಯಲ್ಲಿ ಕುಳಿತು ಪಾಠ ಕೇಳುತ್ತಿದ್ದರು ಎನ್ನಲಾಗಿದೆ.
ಇನ್ನಾದರೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಾಲೂಕಿನ ಎಲ್ಲ ಶಾಲೆಗಳಿಗೂ ಖುದ್ದು ಭೇಟಿನೀಡಿ ಇಂತಹ ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳನ್ನು ಗುರುತಿಸಿ ಪಾಠ ಬೋಧನೆ ಮಾಡದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕಾಗಿದೆ.
ವರದಿ :ಮಂಜುನಾಥ ಹರಿಜನ .