ಕುಂದಗೋಳ; ಗ್ರಾಮದ ಪ್ರತಿಯೊಬ್ಬರಿಗೂ ಶುದ್ದ ಕುಡಿಯುವ ನೀರಿನ್ನು ಪೂರೈಸಬೇಕೆಂಬ ಸದ್ದೋಶದಿಂದ ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿ ಶುದ್ದ ನೀರಿನ ಘಟಕ ಸ್ಥಾಪಿಸಿದೆ.

ಅದರಂತೆ ಕುಂದಗೋಳ ತಾಲೂಕಿನ ಹೀರೆಗುಂಜಳ ಗ್ರಾಮದ ಗ್ರಾಮ ಪಂಚಾಯತ್ 2013-14ನೇ ಸಾಲಿನ 14&15 ಹಣಕಾಸಿನಲ್ಲಿ ನಿರ್ಮಿಸಿಲಾಗಿದ, ಶುದ್ದ ಕುಡಿಯುವ ನೀರಿನ ಘಟಕ ಕಳೆದ ಹಲವಾರು ದಿನಗಳಿಂದ ಶುದ್ದ ನೀರಿನ ಘಟಕ ಸ್ಥಗಿತಗೊಂಡಿತು. ಈ ಕುರಿತು ನಿಮ್ಮ ಭ್ರಷ್ಟರ ಬೇಟೆ ಪತ್ರಿಕೆ ಕಳೆದ ನವೆಂಬರ್ ತಿಂಗಳಲ್ಲಿ ಶುದ್ದ ನೀರಿನ ಘಟಕ ದುರಸ್ತಿಯಲ್ಲಿ ಇದ್ದರೂ ದುರಸ್ತಿ ಭಾಗ್ಯ ಏಕೆ ಒದಗಿಲ್ಲ ಅಧಿಕಾರಿಗಳೇ? ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ದಿ ಬಿತ್ತಿರಿಸಿ ಅಧಿಕಾರಿಗಳ ಗಮನ ಸೆಳದಿತ್ತು. ಕೊನೆಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ದುರಸ್ತಿ ಭಾಗ್ಯ ಒದಗಿಸಿದ್ದಾರೆ.

ಹೌದು..! ಡಿಸೆಂಬರ್ ತಿಂಗಳಲ್ಲಿ ತಾಲೂಕ ಪಂಚಾಯತ್ 15 ನೇ ಹಣಕಾಸಿನ ಯೋಜನೆಯಡಿಯಲ್ಲಿ 146643 ಲಕ್ಷ ರೂಪಾಯಿ ವೆಚ್ಚ ಭರಸಿ ಶುದ್ದ ನೀರಿನ ಘಟಕ ಕಾರ್ಯಾರಂಭಸಿಲಾಗಿದೆ. ಇದು ಭ್ರಷ್ಟರ ಬೇಟೆ ಪತ್ರಿಕೆಯ ಫಲಶೃತಿ. ಈ ಪತ್ರಿಕೆ ಸದಾ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತೆ.

ಶುದ್ದ ನೀರಿನ ಘಟಕ ದುರಸ್ಥಿಯಲ್ಲಿ ಇದ್ದರು ದುರಸ್ತಿ ಭಾಗ್ಯ ಏಕೆ ಒದಗಿಲ್ಲ ಅಧಿಕಾರಿಗಳೇ..?

ವರದಿ; ಶಾನು ಯಲಿಗಾರ

error: Content is protected !!