Crime

ಕಲಬುರಗಿಯಲ್ಲಿ ಪಾಲಿಕೆ ಆಯುಕ್ತರ ನಕಲಿ ಸಹಿ ಕೇಸ್: ಐವರು ಬಂಧಿತರು, ₹30 ಲಕ್ಷ ವಶ.

ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರ ಸಹಿ ನಕಲಿ ಮಾಡಿ ಹಣ ವಿತ್‌ಡ್ರಾ ಮಾಡಿದ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಐವರಲ್ಲಿ ಪಾಲಿಕೆ ಆಯುಕ್ತರ ವೆಕ್ತಿಗತ ಸಹಾಯಕ (ಪಿಎ) ಮೊಹಮ್ಮದ್ ನಯಿಮೋದ್ದಿನ್ ಸೇರಿದಂತೆ ವಾಜೀದ್ ಇಮ್ರಾನ್, ಮಿರ್ಜಾ ಬೇಗ್, ನಸೀರ್ ಅಹ್ಮದ್, ಮತ್ತು ಮೊಹಮ್ಮದ್ ರೆಹಮಾನ್ ಸೇರಿದ್ದಾರೆ. ಬಂಧಿತರಿಂದ ₹30 ಲಕ್ಷ ಜಪ್ತಿ ಮಾಡಲಾಗಿದ್ದು, ಈ ಸಂಬಂಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಪ್ರಾರಂಭದಲ್ಲಿ ಆಯುಕ್ತರ ನಕಲಿ ಸಹಿಯನ್ನು ಬಳಸಿಕೊಂಡು, ಚೆಕ್‌ಬುಕ್ ಮೂಲಕ ₹1.32 ಕೋಟಿ ವಿತ್‌ಡ್ರಾ ಮಾಡಲು ಮೂರು ಚೆಕ್‌ಗಳನ್ನು ಬ್ಯಾಂಕ್‌ಗೆ ಕಳುಹಿಸಲಾಗಿತ್ತು. ಮೊದಲ ಚೆಕ್ ಮೂಲಕ ₹35,56,640 ವಿತ್‌ಡ್ರಾ ಮಾಡಲಾಗಿತ್ತು. ನಂತರ ಇನ್ನೆರಡು ಚೆಕ್‌ಗಳನ್ನು ಭಾರಿ ಮೊತ್ತದ ಹಣಕ್ಕಾಗಿ ಬಳಸಲು ಪ್ರಯತ್ನಿಸಿದ್ದನ್ನು ಬ್ಯಾಂಕ್ ಸಿಬ್ಬಂದಿ ಗಮನಿಸಿದರು. ಅನುವಾದು ಹೊಂದಿ, ಬ್ಯಾಂಕ್ ಸಿಬ್ಬಂದಿ ಆಯುಕ್ತರ ಕಚೇರಿಗೆ ಈ ಕುರಿತು ಮಾಹಿತಿ ನೀಡಿದರು. ಇದರಿಂದಾಗಿ ತಕ್ಷಣ ಕ್ರಮ ಕೈಗೊಂಡು ದೂರು ದಾಖಲಿಸಲಾಯಿತು. ಹೀಗಾಗಿ ಇದೀಗ, ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ ತನಿಖೆಯನ್ನು ಮುಂದುವರಿಸಿದ್ದಾರೆ.

nazeer ahamad

Recent Posts

ರೈಲಿನಿಂದ ಬೀಳುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಆರ್‌.ಪಿ.ಎಫ್: ವಿಡಿಯೋ ವೈರಲ್!

ಕಾನ್ಪುರ ಸೆಂಟ್ರಲ್ ನಿಲ್ದಾಣದಲ್ಲಿ RPF ಪೊಲೀಸರ ತ್ವರಿತ ಕ್ರಮದಿಂದ ಮಹಿಳಾ ಪ್ರಯಾಣಿಕರೊಬ್ಬರ ಜೀವ ರಕ್ಷಣೆಯಾಗಿದೆ. ನಿಲ್ದಾಣದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ…

15 minutes ago

ಜೂಜಿನ ಚಟಕೆ ಬಿದ್ದು ಕಳ್ಳತನ: ಟೆಕ್ ಮೂರ್ತಿ ಮತ್ತೆ ಪೊಲೀಸರ ಅತಿಥಿಯಾದ.!

ಜೂಜಿನ ಚಟಕೆ ಬಿದ್ದು ಟೆಕ್ ಉದ್ಯೋಗಿ ಒಬ್ಬನು 18 ಲಕ್ಷ ಮೌಲ್ಯದ ಚಿನ್ನ ಕಳ್ಳತನ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.…

2 hours ago

ಹುಬ್ಬಳ್ಳಿಯಲ್ಲಿ ಕರುವಿನ ಮೇಲೆ ಕ್ರೌರ್ಯ: ಘಟನೆಗೆ ಸಾರ್ವಜನಿಕರು ಆಕ್ರೋಶ.

ಬೆಂಗಳೂರು ಚಾಮರಾಜಪೇಟೆಯಲ್ಲಿ ಹಸುವಿನ ಮೇಲೆ ನಡೆದ ಕ್ರೌರ್ಯದ ಘಟನೆ ಮಾಸುವ ಮೊದಲು, ಹುಬ್ಬಳ್ಳಿಯಲ್ಲಿ ಮತ್ತೊಂದು ಹೇಯ ಕೃತ್ಯ ಬೆಳಕಿಗೆ ಬಂದಿದೆ.…

3 hours ago

ಹಿರಿಯ ಹಾಸ್ಯನಟ ಸರಿಗಮ ವಿಜಿ ನಿಧನ.

ಕನ್ನಡ ಚಲನಚಿತ್ರರಂಗದ ಹಿರಿಯ ಹಾಸ್ಯನಟ ಹಾಗೂ ರಂಗಭೂಮಿ ಕಲಾವಿದ ಸರಿಗಮ ವಿಜಿ (ಆರ್. ವಿಜಯಕುಮಾರ್) ಅವರು ಅನಾರೋಗ್ಯದ ಕಾರಣದಿಂದ ಬೆಂಗಳೂರಿನ…

4 hours ago

ಬಟ್ಟೆ ಅಂಗಡಿಯಲ್ಲಿ ಖರೀದಿ ನೆಪದಲ್ಲಿ ಹಣ ಕಳ್ಳತನ – ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

ಹುಬ್ಬಳ್ಳಿಯ ಕೊಪ್ಪಿಕರ ರಸ್ತೆಯ ಫ್ಲೈಯಿಂಗ್ ಮಷಿನ್ ಬಟ್ಟೆ ಅಂಗಡಿಯಲ್ಲಿ ಖರೀದಿ ನೆಪದಲ್ಲಿ ಬಂದು ಗಲ್ಲೆಯಲ್ಲಿದ್ದ 30 ಸಾವಿರ ರೂಪಾಯಿ ಹಣವನ್ನು…

5 hours ago

50 ಹುಡುಗಿಯರನ್ನು ಬ್ಲಾಕ್‌ಮೇಲ್ ಮಾಡಿ ಅತ್ಯಾಚಾರ ಮಾಡಿದ ಮನಃಶಾಸ್ತ್ರಜ್ಞ

47 ವರ್ಷದ ಮನೋವೈದ್ಯನೊಬ್ಬ ಕಳೆದ 15 ವರ್ಷಗಳಲ್ಲಿ ಕನಿಷ್ಠ 50 ಹುಡುಗಿಯರನ್ನು ಬ್ಲಾಕ್‌ಮೇಲ್ ಮಾಡಿ ಅತ್ಯಾಚಾರ ಮಾಡಿದ ಆರೋಪದ ಮೇಲೆ…

5 hours ago