ಕುಂದಗೋಳ: ಪ್ರತಿಯೊಬ್ಬರಿಗೊ ಶುದ್ದ ಕುಡಿಯುವ ನೀರು ದೊರಕಿಸಿಕೊಡುವು ಉದ್ದೇಶದಿಂದ ಸರ್ಕಾರ ಶುದ್ದ ನೀರಿನ ಘಟಕಗಳನ್ನು ಸ್ಥಾಪಿಸಿರುವುದು ಸರಿಯಸ್ಟೆ. ಬಹುತೇಕ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸಿದೆ ತುಕ್ಕು ಹಿಡಿಯುತ್ತಿರುವುದು ವಿಪರ್ಯಾಸ.

ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಯರೇನಾರಾಯಣಪೂರ ಗ್ರಾಮದಲ್ಲಿ ಶುದ್ದ ನೀರಿನ ಘಟಕ ಕಾರ್ಯನಿರ್ವಹಿಸಿದೆ ಸ್ಥಗತಿಗೊಂಡಿದ್ದು, ಪಾಳು ಬಿದ್ದು ದುಸ್ಥಿತಿಗೆ ತಲುಪಿ ಎಷ್ಟೋ ತಿಂಗಳು ಕಳೆದರೂ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಇತ್ತ ತಲೆ ಕೊಡ ಹಾಕಿಲ್ಲ.

ಜನರಿಗೆ ಶುದ್ದ ನೀರು ಪೂರೈಸಲು ಲಕ್ಷ ಲಕ್ಷ ರೂಪಾಯಿ ವೆಚ್ಚ ಭರಸಿ ಸರಕಾರ ನಿರ್ಮಿಸಿದ್ದರು, ಸಹ ಈ ಅಧಿಕಾರಿಗಳು ನನಗೂ ಇದಕ್ಕೂ ಸಂಬಂಧವೇ ಇಲ್ಲ ಅನ್ನುವು ರೀತಿಯಲ್ಲಿ ಸೇವೆಯಲ್ಲಿ ಕಾರ್ಯಪ್ರವೃತ್ತಿರಾಗಿದ್ದಾರೆ. ಸುಮಾರು ದಿನಗಳಿಂದಲೂ ಘಟಕ ಸ್ಥಗತಿಗೊಂಡಿದ್ದು, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತೆಗೆದುಕೊಂಡು ಬಂದರು ಸಹ ಇದುವರೆಗೂ ದುರಸ್ತಿ ಕಂಡಿಲ್ಲ. ಹಾಗಾದರೆ ನಿರ್ವಹಣೆ ಕೊರತೇನಾ?ಕಂಡಿತ ಇಲ್ಲ. ಕಳೆದ 2022- 23 ಸಾಲಿನ 15ನೇ ಹಣಕಾಸಿನ ಕ್ರಿಯಾಯೋಜನೆ ಅಡಿಯಲ್ಲಿ ಯರೇನಾರಾಯಣಪೂರ ಗ್ರಾಮದ ಕುಡಿಯುವ ನೀರಿನ ಪೈಪ್ ಲೈನ್ ಸಾಮಗ್ರಿ ಹಾಗೂ ಆರ್ ಓ ಮಷಿನ್ ದುರಸ್ತಿಗೆ ಅಂದಾಜು ಹಣ 110082 ರಷ್ಟು ಹಣ ತೆಗದು ಇಡಲಾಗಿತ್ತು. ಇದರಲ್ಲಿ 82864 ರಷ್ಟು ಹಣ ಹೀರೆಮಠ ಸೇಲ್ಸ್ ಕಾರ್ಪೋರೇಷನ್ ಎಂಬ ಏಜನ್ಸಿ ಅವರ ಖಾತೆಗೆ ಜಮೆಯಾಗಿದೆ. ದುರಸ್ತಿ ಕೈಗೊಳ್ಳದೇ ಹಣ ಹೇಗೆ ಸಂದಾಯವಾಯ್ತು? ನಮ್ಮನ್ನು ಯಾರು ಕೇಳೂವರು ಇಲ್ಲ ದುರಾಂಹಕರದಲ್ಲಿ ಮೆರೆದ್ರಾ? ಇಷ್ಟು ವೆಚ್ಚ ಭರಸಿದ್ದರು ಸಹ ಶುದ್ದ ಕುಡಿಯುವ ನೀರಿನ ಘಟಕ ದುರಸ್ತಿ ಯಾಕಿಲ್ಲ? ಎಂಬುದು ಸಾರ್ವಜನಿಕರ ಪ್ರಶ್ನೆ.

ಯರೇನಾರಾಯಣಪೂರ ಗ್ರಾಮದ ಗ್ರಾಮಸ್ಥರು ಮಂಟೂರು ಅಥವಾ ಯರಗುಪ್ಪಿ ಗ್ರಾಮಕ್ಕೆ ತೆರಳಿ ಶುದ್ದ ನೀರು ತೆಗೆದುಕೊಂಡು ಬರುತ್ತಿದ್ದಾರೆ. ಇದು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಗೆ ಕಾಣ್ತಾ ಇಲ್ಲವೇ?ಬೇಸಗೆ ಸಮಯದಲ್ಲಿ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ಎದುರಾಗುವ ಮುನ್ನ ಶುದ್ದ ನೀರು ಪೂರೈಕೆಗೆ ಸ್ಥಳೀಯ ಆಡಳಿತ ಮಂಡಳಿ ಅಸ್ತು ಅನ್ನುತ್ತಾ? ಇಲ್ಲವಾ ಅಥವಾ ಹಣ ಕೊಳ್ಳೆ ಹೊಡೆಯಲು ಪ್ರಯತ್ನಸುತ್ತ. ಅನ್ನುವುದು ನಿಗೂಢವಾಗಿದೆ.

ಒಟ್ಟಾರೆ ಶುದ್ದ ಕುಡಿಯುವ ನೀರಿಗೆ ಅರಸಿ ಬೇರೆ ಗ್ರಾಮಕ್ಕೆ ತೆರಳುವ ಹಾಗೇ ಆಗಿದೆ. ಇನ್ನಾದರೂ ಎಚ್ಚೆತ್ತುಕೊಂಡು ಗ್ರಾಪಂ ಆಡಳಿತ ಮಂಡಳಿ ಜನರಿಗೆ ಶುದ್ದ ನೀರು ಪೂರೈಸುತ್ತಾ?

ವರದಿ: ಶಾನು ಯಲಿಗಾರ

error: Content is protected !!