ಬೆಂಗಳೂರು: ಚಾಮರಾಜಪೇಟೆಯಲ್ಲಿ ಜ. 11 ರಂದು ತಡರಾತ್ರಿ ಕೆಲಗೇಡಿಗಳು ಮೂರು ಹಸುಗಳ ಕೆಚ್ಚಲನ್ನು ಕತ್ತರಿಸಿದ ಅಮಾನವೀಯ ಘಟನೆಯು ಬೆಳಕಿಗೆ ಬಂದಿದೆ. ಈ ಕುರಿತು ಮಾಹಿತಿ ಪಡೆದ ಹಸುಗಳ ಮಾಲೀಕ ಕರ್ಣ ತಕ್ಷಣವೇ ಕಾಟನ್ ಪೇಟೆ ಪೋಲಿಸರಿಗೆ ಮಾಹಿತಿ ನೀಡಿ ಪ್ರಕರಣವನ್ನು ದಾಖಲಿಸಿದ್ದಾರೆ.
ಪೋಲಿಸರು ತಕ್ಷಣವೇ ತನಿಖೆ ಆರಂಭಿಸಿದ್ದು, ಜನವರಿ 12ರಂದು ಕಾಟನ್ ಪೇಟೆ ಪೊಲೀಸರು ಬಿಹಾರದ ಚಂಪರಣ ಮೂಲದ ಸೈಯದ್ ನಸ್ರು ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆಯ ನಂತರ ಆರೋಪಿ ಸೈಯದ್ ನಸ್ರು ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಅವರನ್ನು ಜನವರಿ 24 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.
ಸೈಯದ್ ನಸ್ರು ಅವರ ಬಗ್ಗೆ ಮುಂದುವರೆದ ತನಿಖೆಯಿಂದ ತಿಳಿದುಬಂದ ಮಾಹಿತಿಯ ಪ್ರಕಾರ, ಆತ ಕೃತ್ಯ ನಡೆದ ಸ್ಥಳದಿಂದ 50 ಮೀಟರ್ ದೂರದಲ್ಲಿರುವ ಪ್ಲಾಸ್ಟಿಕ್ ಮತ್ತು ಬಟ್ಟೆ ಹೊಲಿಯುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಪೋಲಿಸರು ವಿಚಾರಣೆ ವೇಳೆ, ಸೈಯದ್ ನಸ್ರು ತನ್ನ ಕೃತ್ಯವನ್ನು ಮದ್ಯಪಾನ ಸೇವನೆ ನಂತರ ಮಾಡಿದ ವಿಚಾರವನ್ನು ಒಪ್ಪಿಕೊಂಡಿದ್ದಾನೆ.
ಈ ಘಟನೆಯಲ್ಲಿ ಅವನು ಕೈಜೋಡಿಸಿದ್ದ ಇನ್ನೂ ಕೆಲವರ ಪತ್ತೆಗೆ ಪೊಲೀಸರು ಮುಂದುವರಿದಿದ್ದಾರೆ.