Cinema

ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಕೃತ್ಯದ ಹಿಂದಿನ ಕಾರಣ ಬಾಯ್ಬಿಟ್ಟ ಆರೋಪಿ.

ಬೆಂಗಳೂರು: ಚಾಮರಾಜಪೇಟೆಯಲ್ಲಿ ಜ. 11 ರಂದು ತಡರಾತ್ರಿ ಕೆಲಗೇಡಿಗಳು ಮೂರು ಹಸುಗಳ ಕೆಚ್ಚಲನ್ನು ಕತ್ತರಿಸಿದ ಅಮಾನವೀಯ ಘಟನೆಯು ಬೆಳಕಿಗೆ ಬಂದಿದೆ. ಈ ಕುರಿತು ಮಾಹಿತಿ ಪಡೆದ ಹಸುಗಳ ಮಾಲೀಕ ಕರ್ಣ ತಕ್ಷಣವೇ ಕಾಟನ್ ಪೇಟೆ ಪೋಲಿಸರಿಗೆ ಮಾಹಿತಿ ನೀಡಿ ಪ್ರಕರಣವನ್ನು ದಾಖಲಿಸಿದ್ದಾರೆ.
ಪೋಲಿಸರು ತಕ್ಷಣವೇ ತನಿಖೆ ಆರಂಭಿಸಿದ್ದು, ಜನವರಿ 12ರಂದು ಕಾಟನ್ ಪೇಟೆ ಪೊಲೀಸರು ಬಿಹಾರದ ಚಂಪರಣ ಮೂಲದ ಸೈಯದ್ ನಸ್ರು ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆಯ ನಂತರ ಆರೋಪಿ ಸೈಯದ್ ನಸ್ರು ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಅವರನ್ನು ಜನವರಿ 24 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.
ಸೈಯದ್ ನಸ್ರು ಅವರ ಬಗ್ಗೆ ಮುಂದುವರೆದ ತನಿಖೆಯಿಂದ ತಿಳಿದುಬಂದ ಮಾಹಿತಿಯ ಪ್ರಕಾರ, ಆತ ಕೃತ್ಯ ನಡೆದ ಸ್ಥಳದಿಂದ 50 ಮೀಟರ್ ದೂರದಲ್ಲಿರುವ ಪ್ಲಾಸ್ಟಿಕ್ ಮತ್ತು ಬಟ್ಟೆ ಹೊಲಿಯುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಪೋಲಿಸರು ವಿಚಾರಣೆ ವೇಳೆ, ಸೈಯದ್ ನಸ್ರು ತನ್ನ ಕೃತ್ಯವನ್ನು ಮದ್ಯಪಾನ ಸೇವನೆ ನಂತರ ಮಾಡಿದ ವಿಚಾರವನ್ನು ಒಪ್ಪಿಕೊಂಡಿದ್ದಾನೆ.
ಈ ಘಟನೆಯಲ್ಲಿ ಅವನು ಕೈಜೋಡಿಸಿದ್ದ ಇನ್ನೂ ಕೆಲವರ ಪತ್ತೆಗೆ ಪೊಲೀಸರು ಮುಂದುವರಿದಿದ್ದಾರೆ.

nazeer ahamad

Recent Posts

ಸುಳ್ಳು ಹೇಳಿ ಮದುವೆ ಮಾಡಿಕೊಂಡ ಮುಸ್ಲಿಂ; ಮದುವೆ ನಂತರ ಮತಾಂತರಕ್ಕೆ ಯತ್ನ!

ಪತಿ ಶಫಿ ಅಹ್ಮದ್ ವಿರುದ್ಧ ಪತ್ನಿ ಲಕ್ಷ್ಮೀ ಮತಾಂತರ ಮಾಡಿಸಲು ಕಿರುಕುಳ ನೀಡಿದುದಾಗಿ ಆರೋಪ ಮಾಡಿದ್ದಾರೆ. 2014-15 ರಲ್ಲಿ ಪ್ರೀತಿಸಿ…

9 hours ago

ಪತ್ನಿ ಕಿರುಕುಳಕ್ಕೆ, ಪತಿ ಆತ್ಮಹತ್ಯೆ.

ವ್ಯಕ್ತಿಯೊಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಒಂದು ದುರ್ಘಟನೆ ಧಾರವಾಡ ತಾಲೂಕಿನ ಬೇಲೂರು ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ…

10 hours ago

ಥೀಮ್ ಪಾರ್ಕ್: ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಪಿಕ್ ಜಾಮ್!?

ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ಚಿಟಗಿನಕೊಪ್ಪ ಗ್ರಾಮದ ಹತ್ತಿರ ಇರುವ ರಾಷ್ಟ್ರೀಯ ಹೆದ್ದಾರಿ 50 ರ ಬಳಿ ಕಳೆದ ಎರಡು…

10 hours ago

ಮಗಳ ಮೇಲೆ ಕಣ್ಣು ಹಾಕಿದ ಪತಿಯ ಮರ್ಮಾಂಗ ಜಜ್ಜಿದ ಪತ್ನಿ!

ತಮ್ಮ ಮಗಳ ಮೇಲೆಯೇ ಕಣ್ಣು ಹಾಕಿದ ವ್ಯಕ್ತಿಯನ್ನು ಅವನ ಇಬ್ಬರು ಪತ್ನಿಯರು ಸೇರಿ ಕೊಲೆಗೈದ ಘಟನೆ ತೆಲಂಗಾಣದ ಸೂರ್ಯಪೇಟಾ ಜಿಲ್ಲೆಯ…

10 hours ago

ಐಫೋನ್ ಬಳಕೆದಾರರ ಜೇಬಿಗೆ ಕತ್ತರಿ; ಆನ್ಲೈನ್ ಶಾಪಿಂಗ್ ಕುರಿತು ಮಹಿಳೆ ಮಾಡಿದ ವಿಡಿಯೋ ವೈರಲ್!

ಸಾಮಾಜಿಕ ಜಾಲತಾಣಗಳಲ್ಲಿ ಐಫೋನ್ ಮತ್ತು ಆಂಡ್ರಾಯ್ಡ್ ಫೋನುಗಳಲ್ಲಿ ಆನ್ಲೈನ್ ಶಾಪಿಂಗ್ ಮಾಡುವಾಗ ವಸ್ತುಗಳ ಬೆಲೆ ಹೆಚ್ಚು ಕಡಿಮೆಯಾಗುತ್ತಿವೆ ಎಂಬ ಸಾಕಷ್ಟು…

11 hours ago

ಮಕ್ಕಳನ್ನು ಕಾಲುವೆಗೆ ತಳ್ಳಿದ್ದು ತಾಯಿಯಲ್ಲ ತಂದೆ; ಮಕ್ಕಳ ದುರಂತ ಅಂತ್ಯದ ಪ್ರಕರಣಕ್ಕೆ ಟ್ವಿಸ್ಟ್!

ನಾಲ್ಕು ಮಕ್ಕಳನ್ನು ಕಾಲುವೆಗೆ ಎಸೆದು ತಾಯಿ ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ನಾಲ್ವರು ಮಕ್ಕಳು ಜಲಸಮಾಧಿಯಾದ ಘಟನೆ ವಿಜಯಪುರ ಜಿಲ್ಲೆ ನಿಡಗುಂದಿ…

13 hours ago