ಮುಂಡಗೋಡ: 05/04/2025 ರಂದು ಮುಂಡಗೋಡ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪಿಯನ್ನು ಮುಂಡಗೋಡ ಪೋಲಿಸರು ಬಂಧಿಸಿದ್ದಾರೆ. ಮಂಜುನಾಥ ತಂದೆ ನಾಗಪ್ಪ ಕೊರವರ ,ಸಾ||ಅಂಬೇಡ್ಕರ್ ಓಣಿ, ಮುಂಡಗೋಡ, ವೆಂಕಟೇಶ ತಂದೆ ಅಶೋಕ ಅರಿವಾಣ ಸಾ||ಆನಂದ ನಗರ. ಮುಂಡಗೋಡ, ಮಂಜುನಾಥ ತಂದೆ ಬೈಲಪ್ಪ ಆಸಂಗಿ ಸಾ॥ಗದಗ ಹಾಗೂ ಹರೀಶ ತಂದೆ ದೇವೆಂದ್ರಪ್ಪ ಬಾಳಮ್ಮನವರ ಸಾ//ಹೊಸಕೊಪ್ಪ (ಸಾಲಗಾಂವ)ತಾ||ಮುಂಡಗೋಡ ರವರೆಲ್ಲರೂ ಸೇರಿಕೊಂಡು ಪಂಜಾಬ ರಾಜ್ಯದ ಚಂಡಿಘರನಲ್ಲಿರುವ ಮಹಾರಾಜ ಯದವಿಂದ್ರ ಸಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಾಜಸ್ಥಾನ ಮತ್ತು ಪಂಜಾಬ ತಂಡಗಳ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳ ಮೇಲೆ ಹಣ ಕಟ್ಟಿ ರಸ್ತೆಯಲ್ಲಿ ಬರಹೋಗುವ ಜನರನ್ನು ಕರೆದು ಜನರನ್ನು ಸಂಪರ್ಕಿಸಿ ಬೆಟ್ಟಿಂಗ್ ನಡೆಸುತ್ತಿದ್ದವರ ಮೇಲೆ ದಾಳಿ ಮಾಡಿದ್ದಾಗ ಬೆಟ್ಟಿಂಗ್ ನಡೆಸುತ್ತಿದ್ದವರ ಪೈಕಿ ಮಂಜುನಾಥ ತಂದೆ ನಾಗಪ್ಪ ಕೊರವರ, ಸಾ|ಅಂಬೇಡ್ಕರ್ ಓಣಿ. ಮುಂಡಗೋಡ ಈತನು ಪೊಲೀಸರ ಕೈಗೆ ಸಿಕ್ಕಿದ್ದು. ಕ್ರಿಕೇಟ ಬೇಟ್ಟಿಂಗ ನಡೆಸುತ್ತಿದ್ದ ಇನ್ನೂ ಮೂವರು ಓಡಿ ಹೋಗಿರುತ್ತಾರೆ. ಬಂಧಿತ ಆರೋಪಿಯಿಂದ ನಗದು ಹಣ 2300/-ರೂ. ಲಾವಾ ಕಂಪನಿಯ ಕೀಪ್ಯಾಡ್ ಮೋಬೈಲ್ ಮತ್ತು ಕ್ರಿಕೇಟ್ ಬೆಟ್ಟಿಂಗ್ ಬರೆದಿರುವ ನೋಟಬುಕ್ ,ಪೆನ್ನುಗಳನ್ನು ಜಪ್ತುಪಡಿಸಿಕೊಂಡು ಸದರಿಯವರ ಮೇಲೆ ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಎಮ್. ನಾರಾಯಣ ಐ.ಪಿ.ಎಸ್ ಮಾನ್ಯ ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ ಕಾರವಾರ, ಕೃಷ್ಣಮೂರ್ತಿ ಜಿ. ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕಾರವಾರ. ಜಗದೀಶ ನಾಯ್ಕ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕಾರವಾರ, ಶ್ರೀ ಗಣೇಶ ಕೆ. ಎಲ್ ಡಿ.ಎಸ್.ಪಿ ಶಿರಸಿ ರವರ ಮಾರ್ಗದರ್ಶನದಲ್ಲಿ ಶ್ರೀ ರಂಗನಾಥ ನೀಲಮ್ಮನವರ ಪೊಲೀಸ್ ನಿರೀಕ್ಷಕರು ಮುಂಡಗೋಡ ಪೋಲೀಸ್ ಠಾಣೆ ಇವರ ನೇತೃತ್ವದಲ್ಲಿ ಸಿಬ್ಬಂದಿಯವರಾದ ಮಹಾಂತೇಶ ಮುಧೋಳ, ಅನ್ವರ ಬಮ್ಮಿಗಟ್ಟಿ, ನಾಗಪ್ಪ ಎಮ್ ಇವರು ಆರೋಪಿತರನ್ನು ದಸ್ತಗಿರಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.ವರದಿ: ಮಂಜುನಾಥ್ ಎಫ್ ಹೆಚ್

Related News

error: Content is protected !!