ಮೋದಿ 3.0 ಸರ್ಕಾರದ ಮೊದಲ ಬಜೆಟ್ ಇದಾಗಿದೆ. ಕಳೆದೆರಡು ಅವಧಿಯ ಬಜೆಟ್‌ಗಿಂತ ಈ ಬಾರಿಯ ಬಜೆಟ್ ಮೋದಿ ಸರ್ಕಾರಕ್ಕೆ ಹೆಚ್ಚು ಸವಾಲಾಗಿತ್ತು. ಕಾರಣ ಈ ಬಾರಿ ಮೈತ್ರಿ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚಿಸಿದೆ.
ಉದ್ಯೋಗ ಸೃಷ್ಟಿ, ತೆರಿಗೆ ಕಡಿತ, ಆದಾಯ ತೆರಿಗೆ ನೀತಿಯಲ್ಲಿ ಬದಲಾವಣೆ, ಕೃಷಿ ಜೊತೆಗೆ ಕೆಲ ಹೊಸ ಯೋಜನೆಗಳ ಘೋಷಣೆ ಮಾಡಲಾಗಿದೆ. ಅದರಲ್ಲೂ ಪ್ರಮುಖವಾಗಿ ಚಿನ್ನ, ಬೆಳ್ಳಿ ಮೇಲಿನ ಕಸ್ಟಮ್ಸ್ ತೆರಿಗೆ ಶೇ 6ರಷ್ಟು ಕಡಿತ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.