ಧಾರವಾಡ : ಜಿಲ್ಲೆಯ ಅಳ್ನಾವರ ತಾಲೂಕಿನ ಪ್ರಾಥಮಿಕ ಆರೋಗ್ಯ ಕೆಂದ್ರ ಹಿರಿಯ ಅಧಿಕಾರಿಯ ಧಿಡಿರ ನಿರ್ಧಾರದಿಂದ ಅನಾಥವಾಗಿದೆ. ತಾಲೂಕಿನ ಸುತ್ತ ಮುತ್ತಲ್ಲಿನ ಸಾರ್ವಜನಿಕರು ಅನಾರೋಗ್ಯದ ಹಿನ್ನಲೆಯಲ್ಲಿ ಇಲ್ಲಿಗೆ ಬಂದು ಇಲ್ಲಿ ಆರೋಗ್ಯ ತಪಾಸನೆ ಮಾಡುವ ವೈದ್ಯರಿಲ್ಲದೆ ಇರುವುದನ್ನು ನೋಡಿ ಕಂಗಾಲಾಗಿ ಮತ್ತೊಂದು ದಾರಿ ಕಾಣದೆ ಖಾಸಗಿ ಕ್ಲಿನಿಕ್ ಗಳತ್ತ ಮೊರೆಹೋಗುತ್ತಿರುವುದು ಬೇಸರದ ಸಂಗತಿ. ಇದ್ದು ಉಪಯೋಗಕ್ಕೆ ಬಾರದ ಈ ಆಸ್ಪತ್ರೆ ಮೊದಲೆ ಹಳ್ಳಿಗಳಿಂದ ಅನಾರೋಗ್ಯ ಪಿಡಿತ ಸಾರ್ವಜನೀಕರು ಸುಮಾರು ಬಸ ನಿಲ್ದಾಣದಿಂದ ನಡೆದುಕೊಂಡು ಬರುವ ಇವರುಗಳು ಇಲ್ಲಿ ನೋಡಿದರೆ ಆರೋಗ್ಯ ತಪಾಸಣೆ ಮಾಡುವ ವೈದ್ಯರಿಲ್ಲದೆ ಆಸ್ಪತ್ರೆಯ ಆಡಳಿತ ಅದಿಕಾರಿಗಳಿಗೆ ಹಿಡಿಶಾಪ ಹಾಕಿ ಹೊಗುವಂತಾಗಿದೆ.
ನೂತನ ತಾಲೂಕಾ ಘೋಷಣೆ ಆಗಿ ಸುಮಾರು ವರ್ಷಗಳೆ ಕಳೆದರು ಸರಿಯಾದ ಅಭಿವೃದ್ಧಿಯ ವ್ಯವಸ್ಥೆ ಕಾಣದ ಅಳ್ನಾವರ. ಇಲ್ಲೋಬ್ಬ ಅಧಿಕೃತ ವೈದ್ಯರ ನಿಯೋಜನೆಯಿಲ್ಲ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ನಿಯೋಜಿತ ತತ್ಕಾಲವಾಗಿ ಸತತ ಎಳು ವರ್ಷಗಳಿಂದ ಈ ಭಾಗದ ಅನಾರೋಗ್ಯದಿಂದ ಬರುವ ಸಾರ್ವಜನಿಕರಿಗೆ (ನಾರಾಯಣನಾಗಿ ) ಜೀವ ನಾಡಿಯಾಗಿ ಆಸ್ಪತ್ರೆಯ ವೈದ್ಯನಾಗಿ ಎನ್.ಎಸ್.ಪಾಟೀಲ ಎಂಬುವರು ಎಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಬಹುದೊಡ್ಡ ಜಗತ್ತಿಗೆ ಗ್ರಾಸವಾಗಿ ಹಗಲಿರುಳು ಯಮ ಕಾಲನಾಗಿ ಮನುಷ್ಯರನ್ನು ಕಾಡಿದ ಸಾಂಕ್ರಾಮಿಕ ರೋಗ ಕರೊನಾ ಎಂಬ ದೈತ್ಯ ಅಲೆ ಇಂತಹ ಸಂದರ್ಭದಲ್ಲಿ ಹಳೆಯದಾದ ಶಿಥಿಲಾವ್ಯವಸ್ಥೆಯಲ್ಲಿ ಅವಾಗೊ ಇವಾಗೊ ಬೀಳುವಂತ ಕಟ್ಟಡಗಳಲ್ಲಿ ಜನರ ಜೀವನಾಡಿಯಾಗಿ ತಮ್ಮ ಜೀವಲಕ್ಷಿಸದೆ ಹಗಲಿರುಳು ಜನರ ಆರೋಗ್ಯ ತಪಾಸಣೆಯಲ್ಲಿ ಕಾರ್ಯನೀರತಾದ ವೈದ್ಯರು ಇವರು ಬೇರೊಬ್ಬ ಯಾವ ವೈದ್ಯರು ಈ ಆಸ್ಪತ್ರೆಗೆ ಬರಲು ಮುಂದಾಗಲಿಲ್ಲ .
ಅದರೂ ಇವರು ಮಾತ್ರ ಇಲ್ಲೆ ಇದ್ದು ಈ ಭಾಗದ ಜನರೋಂದಿಗೆ ಅಷ್ಟೆ ಮಮಕಾರದಿಂದ ಆಸ್ಪತ್ರೆಯಲ್ಲಿ ಜನರ ಸೇವೆ ಮಾಡುತ್ತಿರುವ ವೈದ್ಯ ಎನ್ .ಎಸ್ . ಪಾಟೀಲ್. ಈಗ ತಾನೆ ಸರಕಾರದ ಅನುದಾನದಡಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಆಸ್ಪತ್ರೆಯ ಕಟ್ಟಡ ಅಲ್ಲಿ ಒಂದಿಷ್ಟು ನಿಟ್ಟುಸಿರು ಬಿಟ್ಟು ಇರುವಾಗಲೆ ಡಿ.ಎಚ್.ಒ. ಮನಬಂದಂತೆ ಇವರನ್ನು ಬೆರೊಂದು ಕಡೆ ವರ್ಗಾವಣೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ. ದಿನಾಂಕ 09/03/2023 ರಂದು ಆದೇಶ ಹೊರಡಿಸಿದ್ದಾರೆ . ವಾರದಲ್ಲಿ ಮೂರು ದಿನ ಒಬ್ಬರಂತೆ ಹೇಬ್ಬಳ್ಳಿಯ ಅಸ್ಪತ್ರೆಯ ವೈದ್ಯರನ್ನು ಇಲ್ಲಿಗೆ ನಿಯೊಜನೆ ಮಾಡಿದ್ದಾರೆ ಅಲ್ಲಿಂದ ಇವತ್ತಿನವರೆಗೂ ಯಾವೊಬ್ಬ ವೈದ್ಯರು ಇತ್ತ ತಿರುಗಿ ಸಹ ನೋಡಿಲ್ಲ. ಹಿಗಾದರೆ ಇಲ್ಲಿಗೆ ಅನಾರೋಗ್ಯದಿಂದ ಬಳಲಿ ಬರುವ ಸಾರ್ವಜನಿಕರ ಗತಿ ಎನು …? ಇಷ್ಟಾದರೂ ಇಲ್ಲಿರುವ ವೈದ್ಯರನ್ನು ಅಷ್ಟೋಂದು ತ್ವರಿತಗತಿಯಲ್ಲಿ ತೆಗೆದುಹಾಕಿದ್ದಾದರು ಎಕೆ….? ಎಂಬುವುದೆ ಸಾರ್ವಜನೀಕರ ಮುಂದಿರುವ ಯಕ್ಷ ಪ್ರಶ್ನೆ..
ಇನ್ನಾದರೂ ಹಿರಿಯ ಅಧಿಕಾರಿಗಳು , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಶಾಸಕರು ಇತ್ತ ಶೀಘ್ರವಾಗಿ ಗಮನ ಹರಸಿ ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಯಂತೆ ವೈದ್ಯಾಧಿಕಾರಿಗಳನ್ನು ನಿಯೋಜಿಸಬೇಕು.
ವರದಿ : ಚರಂತಯ್ಯ ಹಿರೇಮಠ.