ಬಾಗಲಕೋಟೆ: ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ನಾಯನೆಗಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನಾಯನೆಗಲಿ ಗ್ರಾಮದ ದಲಿತ ಕಾಲೋನಿಯ ದುಸ್ಥಿತಿ ಇದು, ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಗ್ರಾಮದ ಕೊಳಚೆ ನೀರೆಲ್ಲ ರಸ್ತೆಗೆ ಬಂದು ನಿಂತು ರಸ್ತೆಯೆಲ್ಲ ಕೊಳಚೆಯಿಂದ ಆವೃತಿಯಾಗಿದೆ.
ದಿನನಿತ್ಯ ಓಡಾಡಲು ಸ್ಥಳೀಯರಿಗೆ ತೊಂದರೆಯಾಗುತ್ತಿದ್ದು, ಅಧಿಕಾರಿಗಳು ಬರೋದು ಹೋಗೋದು ಬಿಟ್ಟರೆ ಕೆಲಸ ಮಾತ್ರ ಶೂನ್ಯವಾಗಿದೆ. ಪಿಡಿಓ ಮುತ್ತಣ್ಣ ಡೋಣಿ ಸರಿಯಾಗಿ ದಲಿತ ಕಾಲೋನಿಯತ್ತ ಸಹ ಮುಖ ಮಾಡಿರುವುದಿಲ್ಲ. ಇವನೇ ಬೇರೆ ಇವನ ಕೆಲಸನೇ ಬೇರೆ ಎನ್ನುವಂತಾಗಿದೆ.
ಪಿಡಿಓ ಗೆ ಸರ್ಕಾರದ ಸಂಬಳ ಬಂದರೆ ಸಾಕು, ಊರೇ ಹಾಳಾಗಿ ಹೋಗಿ ಯಾವುದೇ ರೋಗ ಬಂದರು ಸರಿ ಅವರುಗಳಿಗೇನು ಚಿಂತೆಯಿಲ್ಲ, ಅವ್ಯವಸ್ಥೆಯನ್ನು ಯಾರು ಪ್ರಶ್ನಿಸಿದ ಕಾರಣ ನಿರ್ಲಕ್ಷ್ಯ ತೋರುವ ನಾಲಾಯಕ್ ಪಿಡಿಓ ಮುತ್ತಣ್ಣ ಡೋಣಿಗೆ ಲಂಗು ಇಲ್ಲ ಲಗಾಮು ಇಲ್ಲದಂತಾಗಿದೆ.
ಸ್ವಚ್ಛತೆ ಇಲ್ಲದೆ ದಲಿತ ಕಾಲೋನಿ ಜನರಿಗೆ ಡೆಂಗ್ಯೂ,ಮಲೇರಿಯಾ, ಕಾಲರಾ ನಂತಹ ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಿದೆ. ಅಲ್ಲಿ ವಾಸವಿರುವ ಸ್ಥಳೀಯರು ಗ್ರಾಮ ಪಂಚಾಯತಿಗೆ ಹಾಗೂ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇಲ್ಲಿನ ಗ್ರಾಮ ಪಂಚಾಯತಿ ಪಿಡಿಓ ಏನು ಕೆಲಸ ಮಾಡ್ತಾ ಇದ್ದಾರೆ ಎಂಬುದೇ ತಿಳಿಯದಾಗಿದೆ. ಗ್ರಾಮದ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸದ ಪಿಡಿಓ ಇನ್ನು ಅಭಿವೃದ್ದಿ ಏನು ಮಾಡುತ್ತಾನೆ ಎಂಬುದು ಪ್ರಶ್ನೆಯಾಗಿದೆ?
ವರದಿ:ಸಂಗಪ್ಪ ಚಲವಾದಿ