
ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಆಪ್ತರು, ಪತ್ನಿ ಹಾಗೂ ಮಗನೊಂದಿಗೆ ಕೇರಳದ ಕಣ್ಣೂರಿನ ಮಡಾಯಿ ಶ್ರೀ ತಿರುವಕ್ಕಾರ್ಟು ಕಾವು ಶ್ರೀ ಭಗವತಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶತ್ರು ಸಂಹಾರ ಪೂಜೆಗೆ ಹೆಸರಾಗಿರುವ ಈ ದೇವಾಲಯಕ್ಕೆ ದರ್ಶನ್ ತಮ್ಮ ಸ್ನೇಹಿತರ ಸಲಹೆ ಮೇರೆಗೆ ಭೇಟಿ ನೀಡಿರುವುದಾಗಿ ತಿಳಿದುಬಂದಿದೆ.
ಧನ್ವೀರ್ ಸಹ ದರ್ಶನ್ ಜೊತೆಗೆ ದೇವಾಲಯಕ್ಕೆ ಭೇಟಿ
ದರ್ಶನ್ ಜತೆಗೆ ನಟ ಧನ್ವೀರ್ ಕೂಡ ಈ ಯಾತ್ರೆಯಲ್ಲಿ ಭಾಗಿಯಾಗಿದ್ದು, ಇಬ್ಬರೂ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿವೆ. ಈ ಪೈಕಿ ಕೆಲವು ಚಿತ್ರಗಳು ಮತ್ತು ವೀಡಿಯೋಗಳು ಇದೀಗ ಹೊಸ ವಿವಾದಕ್ಕೆ ಕಾರಣವಾಗಿವೆ.
2017ರ ಕೊಲೆ ಆರೋಪಿ ಜೊತೆ ದರ್ಶನ್?
ವೈರಲ್ ಆಗಿರುವ ಚಿತ್ರಗಳಲ್ಲಿ 2017ರಲ್ಲಿ ನಡೆದ ಕರೋಪಾಡಿಯ ಗ್ರಾಮ ಪಂಚಾಯಿತಿ ಸದಸ್ಯ ಕಲೀಲ್ ಕೊಲೆ ಪ್ರಕರಣದ ಆರೋಪಿ ಪ್ರಜ್ವಲ್ ರೈ ಕೂಡ ಕಾಣಿಸಿಕೊಂಡಿರುವುದು now ಹಬ್ಬಿರುವ ಸಮೀಕ್ಷೆಗಳಿಗೆ ಎಡೆಮಾಡಿಕೊಟ್ಟಿದೆ. ಇದರಿಂದ ದರ್ಶನ್ ಅವರ ದೇವಾಲಯ ಭೇಟಿ ಹಾಗೂ ಪೂಜೆ ವಿವಾದದ ಕೇಂದ್ರಬಿಂದುವಾಗಿದ್ದು, ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಮೂರ್ನಾಲ್ಕು ಹೆಸರಿನಲ್ಲಿ ಪೂಜೆ – ಮತ್ತಷ್ಟು ಕುತೂಹಲ
ದರ್ಶನ್ ಹಾಗೂ ಧನ್ವೀರ್ ದೇವಾಲಯದಲ್ಲಿ ತಮ್ಮ ಹೆಸರಿನಲ್ಲಿ ಪೂಜೆ ಸಲ್ಲಿಸಿದ್ದು, ಜೊತೆಗೆ ಮತ್ತೊಬ್ಬ ವ್ಯಕ್ತಿಯ ಹೆಸರಿನಲ್ಲಿ ಕೂಡ ವಿಶೇಷ ಪೂಜೆ ನೆರವೇರಿಸಿರುವುದಾಗಿ ಮೂಲಗಳು ತಿಳಿಸಿವೆ. ಈ ಹಿನ್ನೆಲೆ, ದೇವಸ್ಥಾನ ಭೇಟಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಈ ಕುರಿತಂತೆ ದರ್ಶನ್ ಅಥವಾ ಅವರ ತಂಡದಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ದೊರೆತಿಲ್ಲ. ಆದರೆ ಈ ಘಟನೆ ಈಗ ತೀವ್ರ ಚರ್ಚೆಗೆ ಕಾರಣವಾಗಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ವಿಭಜಿತ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.