ಕಳೆದ ಅಕ್ಟೋಬರ್ ತಿಂಗಳ ಪತ್ರಿಕೆಯ ಸಂಚಿಕೆಯಲ್ಲಿ ಗ್ರಾಮೋದ್ಧಾರ ಕೇಂದ್ರದ ಹೆಸರಿನಲ್ಲಿ ಫ್ರಾಂಚೈಸಿ ಪಡೆದವರ ಬಳಿ ಯಾವ ರೀತಿ ಹಣ ಲೂಟಿ ಮಾಡುತ್ತಿದ್ದರು ಹಾಗೂ ಅವರುಗಳನ್ನು ಹೇಗೆ ಮೋಸ ಮಾಡುತ್ತಿದ್ದರು ಎಂದು ತಿಳಿಸಿದ್ದೆವು. ಅಲ್ಲಿಗೆ ಮುಗಿಯಲಿಲ್ಲ ಗ್ರಾಮೋದ್ದಾರ ಕೇಂದ್ರ ಸಂಸ್ಥೆಯ ಹಾಗೂ ಮುಖ್ಯಸ್ಥರುಗಳ ಕರ್ಮಕಾಂಡ. ಕಳೆದ ಸಂಚಿಕೆಯಲ್ಲಿ ತಿಳಿಸಿರುವ ಹಾಗೆ ಗ್ರಾಮೋದ್ದಾರ ಕೇಂದ್ರ ಮೊದಲಿಗೆ ದೆಸಿಸ್ಕಿಲ್ಸ್ ಎಂದು ಸ್ಥಾಪನೆಗೊಂಡಿದ್ದು. ನಂತರ ದೆಸಿಸ್ಕಿಲ್ಸ್ನ ಅಡಿಯಲ್ಲಿ ಗ್ರಾಮೋದ್ದಾರ ಕೇಂದ್ರವನ್ನು ಆರಂಭಿಸಿದರು ಗ್ರಾಮೋದ್ಧಾರ ಕೇಂದ್ರ ಒಂದೇ ಮಾತ್ರವಲ್ಲದೆ ಇನ್ನೂ ಹಲವು ಹೆಸರುಗಳಲ್ಲಿ ವೆಬ್ಸೆöÊಟ್ಗಳನ್ನು ತೆರೆಯುವುದರ ಮೂಲಕ ಹೊಸ ರೀತಿಯ ಕಂಪನಿಗಳನ್ನು ಮಾಡಿ ಜನರಿಗೆ ಮೋಸ ಮಾಡುತ್ತಿದ್ದರು. ಈ ರೀತಿ ಹೆಸರುಗಳನ್ನು ಬದಲಿಸಿಕೊಂಡು ತೆರೆಯುತ್ತಿದ್ದ ಹೊಸ ಕಂಪನಿಗಳಿಗೂ ಕೂಡ ಇರುವ ಕೆಲಸಗಾರರನ್ನೆ ಬಳಸಿಕೊಳ್ಳುತ್ತಿದ್ದರು. ಇದು ಮೋಸದ ಕಂಪನಿ ಎಂದು ಅರಿಯದ ಕೆಲಸಗಾರರು ಅತಿ ಹೆಚ್ಚು ಶ್ರಮದಿಂದ ಕೆಲಸ ಮಾಡಿ ಕಂಪನಿಯನ್ನು ಉದ್ದಾರ ಮಾಡಲು ಅತಿ ಹೆಚ್ಚು ಶ್ರಮವಹಿಸಿದ್ದಾರೆ. ಇಂತಹ ಕೆಲಸಗಾರರನ್ನು ಈ ಕಂಪನಿಯು ಇಂದು ನಡುನೀರಿನಲ್ಲಿ ಕೈಬಿಟ್ಟಿದ್ದಲ್ಲದೆ ಅವರುಗಳ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ತಪ್ಪಿತಸ್ಥರ ಸ್ಥಾನದಲ್ಲಿ ನಿಲ್ಲಿಸಿದೆ.
ಕೆಲಸಗಾರರ ದೌರ್ಬಲ್ಯತೆಯನ್ನು ಬಂಡವಾಳ ಮಾಡಿಕೊಂಡ ಗ್ರಾಮೋದ್ಧಾರ ಕೇಂದ್ರದ ಮುಖ್ಯಸ್ಥರು!
ಮೊದಲಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲಸಕ್ಕೆ ಬೇಕಾಗಿದ್ದಾರೆ ಎಂದು ಜಾಹೀರಾತುಗಳನ್ನು ಹಾಕುತ್ತಾರೆ. ಅಂತಹ ಜಾಹಿರಾತುಗಳನ್ನು ನೋಡಿ ಕೆಲಸಕ್ಕೆ ಬಂದವರನ್ನು ಪರೀಕ್ಷಿಸಿ ಅವರ ಆಸಕ್ತಿ ಹಾಗೂ ದೌರ್ಬಲ್ಯಗಳನ್ನು ಸಂಪೂರ್ಣವಾಗಿ ಅರಿತು ಅವರನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತಿದ್ದರು. ಉದಾಹರಣೆಗೆ ದೇಶಾಭಿಮಾನ ಇರುವಂತವರ ಬಳಿ ಈ ಕಂಪನಿಯು ನಮ್ಮ ದೇಶದಲ್ಲಿ ತಯಾರಾಗುವಂತಹ ಸಾಮಗ್ರಿಗಳನ್ನು ಮಾತ್ರ ಮಾರಾಟ ಮಾಡುತ್ತದೆ ಅದು ಕಡಿಮೆ ಬೆಲೆಗೆ ಇದರಿಂದ ನಮ್ಮ ದೇಶದ ಬೆಲೆ ಹೆಚ್ಚಾಗುತ್ತದೆ ಮತ್ತು ನಾವು ಭಾರತದ ರೂಪಾಯಿಯನ್ನು ಅಮೇರಿಕಾದ ಡಾಲರ್ ಗಿಂತ ಹೆಚ್ಚು ಬೆಲೆ ಗೊಳಿಸಬಹುದು ಎಂದು ಇಲ್ಲಸಲ್ಲದ ಮಾತುಗಳನ್ನು ಹೇಳಿ ಅವರ ಮನ ಪರಿವರ್ತನೆ ಮಾಡಿ ಹೆಚ್ಚಿನದಾಗಿ ಶ್ರಮವಹಿಸಿ ಕೆಲಸ ಮಾಡುವಂತೆ ಮಾಡುತ್ತಾರೆ. ಕೆಲಸಕ್ಕೆ ಬಂದಂತಹ ಅಮಾಯಕರುಗಳು ಇವರ ಬೊಗಳೆ ಮಾತುಗಳನ್ನು ನಂಬಿಕೊಂಡು ನಾವು ದೇಶಕ್ಕಾಗಿ ದುಡಿಯುತ್ತಿದ್ದೇವೆ ಎಂದು ಭಾವಿಸಿ ಅಮಾಯಕ ಜನರುಗಳ ಬಳಿ ಗ್ರಾಮೋದ್ಧಾರ ಕೇಂದ್ರದ ಫ್ರಾಂಚೈಸಿ ತೆಗೆದುಕೊಳ್ಳಿ ಎಂದು ಬೆನ್ನು ಬೀಳುತ್ತಿದ್ದರು ಹಾಗೂ ಅವರುಗಳು ಇವರಿಗೆ ಹೇಳಿದಂತಹ ಬೊಗಳೆ ಮಾತುಗಳನ್ನು ಇವರುಗಳು ಫ್ರಾಂಚೈಸಿ ತೆಗೆದುಕೊಳ್ಳುವವರ ಬಳಿಯೂ ಹೇಳಿ ಫ್ರಾಂಚೈಸಿ ತೆಗೆದುಕೊಳ್ಳಲು ಇಷ್ಟ ಇಲ್ಲದವರನ್ನು ಕೂಡ ಫ್ರಾಂಚೈಸಿ ತೆಗೆದುಕೊಳ್ಳುವಂತೆ ಮಾಡುತ್ತಿದ್ದರು. ಈ ರೀತಿ ಫ್ರಾಂಚೈಸಿ ತೆಗೆದುಕೊಳ್ಳುವಂತೆ ಮಾಡುತ್ತಿರುವುದರಿಂದ ನಾವು ದೇಶಕ್ಕೆ ಒಳಿತನ್ನು ಮಾಡುತ್ತಿದ್ದೇವೆ ಎಂದು ಕೆಲಸಗಾರರುಗಳು ಭಾವಿಸುತ್ತಿದ್ದರು. ಆದರೆ ಈ ಕಂಪನಿಯ ಮುಖ್ಯಸ್ಥರುಗಳು ಮಾತ್ರ ಈ ರೀತಿ ಫ್ರಾಂಚೈಸಿ ತೆಗೆದುಕೊಂಡವರ ಕಡೆಯಿಂದ ಬರುತ್ತಿದ್ದ ಹಣವನ್ನು ತಾವುಗಳು ಶೋಕಿ ಮಾಡುವುದಕ್ಕೆ ಬಳಸಿಕೊಳ್ಳುವುದರ ಜೊತೆಗೆ ನುಂಗಿ ನೀರು ಕುಡಿಯುತ್ತಿದ್ದರು. ಒಂದೇ ಜಾಗದಲ್ಲಿ ಕೆಲಸ ಮಾಡುತ್ತಿದ್ದ ಮೇಲೆ ಇಂದಲ್ಲ ನಾಳೆ ಸತ್ಯಾಂಶ ತಿಳಿದೇ ತಿಳಿಯುತ್ತದೆ. ಇವರುಗಳ ವಿಚಾರದಲ್ಲೂ ಇದೇ ಆಗಿದ್ದು. ಕೆಲಸಕ್ಕೆ ಸೇರಿಕೊಂಡ ಮೊದಲ ಮೂರರಿಂದ ಆರು ತಿಂಗಳವರೆಗೂ ಸಂಬಳವನ್ನು ಸರಿಯಾಗಿ ಕೊಡುತ್ತಾರೆ ನಂತರ ಸತಾಯಿಸಲು ಮುಂದಾಗುತ್ತಾರೆ. ಈ ರೀತಿ ಸತಾಯಿಸಿ ಕೊಂಡು ಮುಂದಿನ ತಿಂಗಳು ಸಂಬಳ ಕೊಡುತ್ತೇವೆ ಎಂದು ಹೇಳಿಕೊಂಡು ಎರಡರಿಂದ ಮೂರು ತಿಂಗಳು ಸಂಬಳ ಕೊಡದೆ ಕೆಲಸ ಮಾಡಿಸಿಕೊಳ್ಳುತ್ತಾರೆ. ಇದರಿಂದ ಬೇಸತ್ತ ಕೆಲಸಗಾರರು ಸಂಬಳ ಬೇಕೆಂದು ಜಗಳಕ್ಕೆ ಮುಂದಾದರೆ ಅಂಥವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಠಾಣೆಯ ಮೆಟ್ಟಿಲೇರುವಂತೆ ಮಾಡುತ್ತಾರೆ. ಉದಾಹರಣೆಗೆ ಕಂಪನಿಯ ಖಾಸಗಿ ಮಾಹಿತಿಯನ್ನು ಹೊರಹಾಕಿದ್ದಾನೆ, ಕಂಪನಿಯ ಫೈಲ್ಗಳನ್ನು ಕದ್ದಿದ್ದಾನೆ ಅಥವಾ ಕಂಪನಿಯಲ್ಲಿರುವ ಉಪಕರಣಗಳನ್ನು ಕದ್ದಿದ್ದಾನೆ ಎಂದು ಠಾಣೆಯಲ್ಲಿ ದೂರು ನೀಡುತ್ತಾರೆ. ಈ ರೀತಿ ದೂರು ನೀಡಿದ ನಂತರ ಪೊಲೀಸರು ಯಾವುದೇ ರೀತಿ ವಿಚಾರಣೆ ನಡೆಸದೆ ಕೆಲಸಗಾರರನ್ನು ನೇರವಾಗಿ ತಪ್ಪಿತಸ್ಥರ ಸ್ಥಾನದಲ್ಲಿ ನಿಲ್ಲಿಸಿ ಮಹಿಳೆಯೊ ಅಥವಾ ಪುರುಷನೊ ಎಂಬ್ಬುದನ್ನು ಪರಿಗಣಿಸದೆ ದಬಾಯಿಸುವ ಕೆಲಸ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ಭಯಭೀತಿ ಗೊಂಡ ಕೆಲಸಗಾರರುಗಳು ಸಂಬಳ ಬರದಿದ್ದರೂ ಪರವಾಗಿಲ್ಲ ನನ್ನನ್ನು ಬಿಟ್ಟರೆ ಸಾಕು ಎಂದುಕೊಂಡು ಸಂಬಳ ಕೇಳುವುದನ್ನು ಬಿಟ್ಟು ಬಿಡುತ್ತಾರೆ. ಪೊಲೀಸರುಗಳು ಕಂಪನಿಯ ಮುಖ್ಯಸ್ಥರುಗಳನ್ನು ಪ್ರಶ್ನಿಸದೆ ಕೆಲಸಗಾರರ ಮೇಲೆ ದಬ್ಬಾಳಿಕೆ ಮಾಡುವುದಕ್ಕೂ ಒಂದು ಕಾರಣವಿದೆ ಅದೇನೆಂದರೆ ಈ ಕಂಪನಿಯವರ ಬಳಿ ಪ್ರತಿ ತಿಂಗಳು ಆಪ್ತ ವಸೂಲಿ ಮಾಡುತ್ತಾರೆ ಎಂದು ಗ್ರಾಮೋದ್ಧಾರ ಕೇಂದ್ರದಲ್ಲಿ ಕೆಲಸ ಮಾಡುವಂತಹ ಕೆಲಸಗಾರರೆ ಹೇಳಿಕೆಯನ್ನು ನೀಡಿರುತ್ತಾರೆ. ಜನರಿಗೆ ರಕ್ಷಣೆ ಕೊಡಬೇಕಾದಂತಹ ಪೊಲೀಸರೇ ಈ ರೀತಿ ಮಾಡಿದರೆ ಜನಸಾಮಾನ್ಯರು ಯಾರ ಬಳಿ ನ್ಯಾಯ ಕೇಳಲು ಹೋಗಬೇಕು? ಪೊಲೀಸರುಗಳು ಅಪರಾಧವನ್ನು ತಡೆಯುವುದಕ್ಕಾಗಿ ಕಾಕಿ ಹಾಕಿದ್ದೇವೆ ಎಂಬುದನ್ನು ಮರೆತು ಅಪರಾಧ ಮಾಡುವುದಕ್ಕಾಗಿಯೇ ಕಾಕಿ ಹಾಕಿರುವುದು ಎಂಬ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಗ್ರಾಮೋದ್ದಾರ ಕೇಂದ್ರದ ಮುಖ್ಯಸ್ಥರುಗಳು ಸಂಬಳ ಕೇಳಿದವರಿಗೆ ಈ ರೀತಿಯಾಗಿ ಹಿಂಸೆ ಕೊಡುತ್ತಾರೆ ಹಾಗೂ ಇನ್ನು ಕೆಲ ಕೆಲಸಗಾರರುಗಳು ಸೇರಿಕೊಂಡ ಕೆಲವೇ ತಿಂಗಳುಗಳಲ್ಲಿ ಕಂಪನಿಯಿಂದ ಜನರಿಗಾಗುತ್ತಿರುವ ಮೋಸದ ಬಗ್ಗೆ ಹರಿಯುತ್ತಿದ್ದರೆ ಎಂದು ಕಂಪನಿಯ ಮುಖ್ಯಸ್ಥರುಗಳಿಗೆ ತಿಳಿದರೆ ಸಾಕು ಅಂಥವರನ್ನು ಯಾವುದೇ ಕಾಲವಕಾಶ ನೀಡದೇ ದಿಡೀರನೆ ಕೆಲಸದಿಂದ ತೆಗೆದು ಹಾಕುತ್ತಾರೆ. ಕೆಲಸದಿಂದ ಇವರುಗಳೇ ಕೆಲಸಗಾರರನ್ನು ತೆಗೆದಿದ್ದರೂ ಸಹ ಕೆಲಸಗಾರರು ಅವರುಗಳೇ ವೈಯಕ್ತಿಕವಾಗಿ ಕೆಲಸವನ್ನು ಬಿಟ್ಟು ಹೋಗುತ್ತಿರುವ ರೀತಿಯಲ್ಲಿ ಅವರಿಗೆ ಪತ್ರವನ್ನು ಬರೆದು ಕೊಡಬೇಕು. ಕಾನೂನು ರೀತಿ ಯಾವುದೇ ಸಮಸ್ಯೆ ಬರಬಾರದು ಎಂಬ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ. ಫ್ರಾಂಚೈಸಿ ತೆಗೆದುಕೊಂಡಂತವರು ಮೋಸ ಹೋಗಿರುವುದನ್ನು ಅರಿತ ಬಳಿಕ ಕಂಪನಿಯವರನ್ನು ಬೆನ್ನು ಬಿಡದೆ ಕಾಡಲು ಮುಂದಾದಾಗ ಕಂಪನಿಯನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸುವ ಸಂದರ್ಭದಲ್ಲಿ ಕಾರಣವನ್ನು ನೀಡದೇ ಹಲವು ಕೆಲಸಗಾರರನ್ನು ನೇರವಾಗಿ ಕೆಲಸದಿಂದ ತೆಗೆದು ಹಾಕಿದ್ದಾರೆ. ಇಷ್ಟು ಮಾತ್ರವಲ್ಲದೆ ಕೆಲಸಗಾರರಿಗೆ ನೀಡಬೇಕಾದಂತಹ ಇಎಫ್ ಮತ್ತು ಪಿಎಫ್ ಕೂಡ ಸರಿಯಾಗಿ ಕಟ್ಟಿರುವುದಿಲ್ಲ. ಇಎಫ್ ಪಿಎಫ್ ಇರಲಿ ಇವರು ತೆರೆದಿರುವ ಹಲವು ಕಂಪನಿಗಳು ಈಗಲೂ ಸಹ ಸರಕಾರದಿಂದ ಅಧಿಕೃತವಾಗಿ ನೋಂದಾಯಿಸಿ ಕೊಂಡಿರುವುದಿಲ್ಲ. ಹೆಸರಿಗೆ ಮಾತ್ರ ವೆಬ್ಸೆöÊಟ್ಗಳನ್ನು ಮಾಡಿಕೊಂಡು ಜನರಿಗೆ ಮೋಸ ಮಾಡುವುದಲ್ಲದೆ ಸರ್ಕಾರಕ್ಕೆ ಜಿ.ಎಸ್.ಟಿ ಕೂಡ ಸರಿಯಾಗಿ ಕಟ್ಟದೆ ಲಕ್ಷಾಂತರ ರೂಪಾಯಿ ಮೋಸ ಮಾಡುತ್ತಿದ್ದಾರೆ. ಕೆಲಸಗಾರರಿಗೆ, ಜನರಿಗೆ ಹಾಗೂ ಸರ್ಕಾರಕ್ಕೆ ಇಷ್ಟೆಲ್ಲ ಮೋಸ ಮಾಡುತ್ತಿರುವ ಇವರುಗಳು ಕೊಡುವ ಹಣದ ಆಸೆಗೆ ಜೊಲ್ಲು ಸುರಿಸುತ್ತಾ ಸರ್ಕಾರಿ ಅಧಿಕಾರಿಗಳು ಬೆಂಗಾವಲಾಗಿ ನಿಂತು ಇಂಥವರಿಗೆ ರಕ್ಷಣೆ ಕೊಡುತ್ತಿದ್ದಾರೆ ಎಂದರೆ ನಿಜಕ್ಕೂ ಇದು ನಾಚಿಕೆಗೇಡಿನ ಸಂಗತಿ.
ಮೋಸದ ಕಂಪನಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸತ್ಯ ಬರೆದವರನ್ನು ಬೆದರಿಸುತ್ತಿರುವ ಸೈಬರ್ ಕ್ರೈಂ ಪೊಲೀಸರು!
ಹಲವು ವರ್ಷಗಳಿಂದ ಈ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಂತಹ ವ್ಯಕ್ತಿಯೊಬ್ಬರಿಗೆ ಅಂದಾಜು ೧,೫೦,೦೦೦ ರೂಗಳಷ್ಟು ಸಂಬಳವನ್ನು ಕೊಡಬೇಕಿದ್ದಂತಹ ಈ ಕಂಪನಿಯ ಮುಖ್ಯಸ್ಥರುಗಳು ಕೊಡದೆ ಸತಾಯಿಸಲು ಮುಂದಾಗುತ್ತಾರೆ. ಎಷ್ಟೇ ಬಾರಿ ಇವರು ಬೇಡಿಕೊಂಡರು ಸಹ ಗ್ರಾಮೋದ್ಧಾರ ಕೇಂದ್ರ ಮುಖ್ಯಸ್ಥರುಗಳು ನೀವು ಕಂಪನಿಯಿಂದ ಲ್ಯಾಪ್ಟಾಪ್ ಕದ್ದಿದ್ದಿರಿ ಹಾಗೂ ಕಂಪನಿಯ ಇನ್ನಿತರ ಖಾಸಗಿ ಮಾಹಿತಿಗಳನ್ನು ಸೋರಿಕೆ ಮಾಡಿದ್ದೀರಿ ಎಂದು ಆರೋಪ ಮಾಡಿ ಬೆದರಿಸುವ ಕೆಲಸ ಮಾಡಿರುತ್ತಾರೆ ಹಾಗೂ ಕೊಡಬೇಕಿದ್ದ ಸಂಬಳದ ಮೊತ್ತವನ್ನು ಕೂಡ ೪೫ ಸಾವಿರ ರೂಗಳು ಮಾತ್ರ ಎಂದು ಹೇಳಿರುತ್ತಾರೆ. ಎಲ್ಲಾ ವಿಚಾರಗಳಿಂದ ನೊಂದಿದ್ದ ವ್ಯಕ್ತಿಯು ಭ್ರಷ್ಟರ ಬೇಟೆ ಕನ್ನಡ ಮಾಸ ಪತ್ರಿಕೆಯ ಅಕ್ಟೋಬರ್ ಸಂಚಿಕೆಯಲ್ಲಿ ಗ್ರಾಮೋದ್ದಾರ ಕೇಂದ್ರದ ಹಗಲು ದರೋಡೆ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟವಾಗಿದೆ ಸುದ್ದಿಯನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಳ್ಳುವುದರ ಜೊತೆಗೆ ಈ ಕಂಪನಿಯಿಂದ ಆಗುತ್ತಿರುವ ಮೋಸದ ಬಗ್ಗೆ ನೇರವಾಗಿ ಬರೆದಿರುತ್ತಾರೆ. ಈ ಕಂಪನಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ಬರೆದವರು ಇವರೇ ಮೊದಲೇನಲ್ಲ ಫ್ರಾಂಚೈಸಿ ತೆಗೆದುಕೊಂಡು ಮೋಸಹೋದ ಹಲವರು ಈ ಕಂಪನಿಯ ವಿರುದ್ಧ ಅಶ್ಲೀಲ ಪದಗಳನ್ನು ಬಳಸಿ ಬೈದು ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿ ಕೊಂಡಿರುತ್ತಾರೆ. ಇದ್ಯಾವುದನ್ನು ಪರಿಗಣಿಸದ ಸೈಬರ್ ಕ್ರೈಂ ಪೊಲೀಸರು ಅಮಾಯಕ ಕೆಲಸಗಾರ ಬರೆದಿರುವ ವಿಚಾರ ಮಾತ್ರ ತಪ್ಪು ಎಂದು ಪರಿಗಣಿಸಿ ಆತನನ್ನು ಠಾಣೆಗೆ ಕರೆಸಿ ಬೆದರಿಸಿ ಅವನು ಬರೆದು ಹಾಕಿಕೊಂಡಿರುವಂತಹ ಪೋಸ್ಟ್ಳನ್ನು ಡಿಲೀಟ್ ಮಾಡಿಸಿರುತ್ತಾರೆ. ಬೆಂಗಳೂರಿನ ಯಶವಂತಪುರದ ಸೈಬರ್ ಕ್ರೈಂ ಪೊಲೀಸರು ಇಂತಹ ಕೆಲಸವನ್ನು ಮಾಡಿರುವುದು. ಕೆಲಸಗಾರನಿಗೆ ಕರೆ ಮಾಡಿ ಠಾಣೆಗೆ ಬರಲು
ಹೇಳಿದ ಸೈಬರ್ ಕ್ರೈಮ್ ಪೋಲಿಸ್ ಆದಂತಹ ಮಂಜುನಾಥ್ ಆತನ್ನು ಠಾಣೆಗೆ ಬಂದ ನಂತರ ಆತನನ್ನು ಬೆದರಿಸಿ ಆತನ್ನು ಮಾಡಿರುವಂತಹ ಪೋಸ್ಟ್ಳನ್ನು ಡಿಲೀಟ್ ಮಾಡಿಸಿರುತ್ತಾರೆ. ಇಂತಹ ಸಂದರ್ಭದಲ್ಲಿ ಸೈಬರ್ ಕ್ರೈಂ ಪೊಲೀಸ್ ಆದಂತಹ ಮಂಜುನಾಥ್ ರವರು ಕೆಲವೊಂದು ವಿಚಾರಗಳನ್ನು ಕೆಲಸಗಾರನ ಬಳಿ ಹೇಳಿಕೊಂಡಿರುತ್ತಾರೆ. ಅದೇನೆಂದರೆ ಗ್ರಾಮೋದ್ಧಾರ ಕೇಂದ್ರದ ಮುಖ್ಯಸ್ಥನಾದ ಕೌಶಿಕ್ ಎಂಬಾತನು ಮೇಲಾಧಿಕಾರಿಗಳ ಕಡೆಯಿಂದ ಹೆಚ್ಚಿನದಾಗಿ ಒತ್ತಡ ಹಾಕಿಸುತ್ತಿರುವ ಕಾರಣ ನಾನು ಈ ರೀತಿ ಮಾಡುತ್ತಿದ್ದೇನೆ. ಅವರು ದುಡ್ಡು ಇರುವಂತವರು ಅವರ ಜೊತೆ ಜಗಳವೇಕೆ ಮಾಡಿಕೊಳ್ಳುವೆ ನಿನ್ನ ಪಾಡಿಗೆ ನೀನು ಇರು ಮತ್ತೊಮ್ಮೆ ಈ ರೀತಿ ಮಾಡಬೇಡ ಎಂದು ಸೈಬರ್ ಕ್ರೈಮ್ ಪೋಲಿಸ್ ಆದಂತಹ ಮಂಜುನಾಥ್ ರವರು ಗ್ರಾಮೋದ್ಧಾರ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಂತಹ ಕೆಲಸಗಾರರನ್ನು ಬಳಿ ಹೇಳಿರುತ್ತಾರೆ. ಇವರು ಹೇಳುವುದು ದುಡ್ಡು ಇದ್ದವರಿಗೆ ಮಾತ್ರ ನ್ಯಾಯ ದುಡ್ಡಿಲ್ಲದವರಿಗೆ ನ್ಯಾಯ ಸಿಗುವುದಿಲ್ಲ ಎಂಬ ರೀತಿಯಲ್ಲಿದೆ. ಒಬ್ಬ ಸರ್ಕಾರಿ ಅಧಿಕಾರಿ ಇಂತಹ ಹೇಳಿಕೆಯನ್ನು ನೀಡುವುದಕ್ಕೆ ನಿಜಕ್ಕೂ ನಾಚಿಕೆಯಾಗಬೇಕು. ಯಾವುದೇ ರೀತಿ ವಿಚಾರಣೆ ನೆಡೆಸದೆ ಮೇಲಧಿಕಾರಿಗಳ ಒತ್ತಡದಿಂದ ಅಮಾಯಕ ನೊಬ್ಬನನ್ನು ಬೆದರಿಸುವುದು ಹಾಗೂ ಅವನ ಅಭಿಪ್ರಾಯಗಳನ್ನು ಅಳಿಸಿಹಾಕುವುದು ಎಷ್ಟರ ಮಟ್ಟಿಗೆ ಸರಿ? ಹಣ ಇದ್ದವನೊಬ್ಬ ಕರೆಮಾಡಿ ಹೇಳಿದ ತಕ್ಷಣ ಮೇಲಧಿಕಾರಿಗಳು ತಮ್ಮ ಕೆಳ ಅಧಿಕಾರಿಗಳಿಗೆ ಒತ್ತಡ ಹಾಕುವುದು ಸರಿಯೇ?
ಸುಗ್ರಾಮ ಸಾಲ ಯೋಜನೆ ಹೆಸರಿನಲ್ಲಿ ದರೋಡೆಗೈದಿರುವ ದೇಸಿ ಸ್ಕಿಲ್ಸ್ ತಂಡ!
ದೇಸಿ ಸ್ಕಿಲ್ಸ್ ಎಂದು ಆರಂಭಗೊಂಡ ಕಂಪನಿಯು ನಂತರ ಇದರ ಭಾಗವಾಗಿ ಹಲವು ಹೆಸರಿನಲ್ಲಿ ಸರ್ಕಾರದಿಂದ ಅನುಮತಿ ಪಡೆಯದೆ ಹೊಸ ಹೆಸರುಗಳಲ್ಲಿ ಕಂಪನಿಗಳನ್ನು ಆರಂಭಿಸುತ್ತದೆ. ಇದರಲ್ಲಿ ಗ್ರಾಮೋದ್ಧಾರ ಕೇಂದ್ರವು ಒಂದು ಹಾಗೆಯೇ ಸುಗ್ರಾಮ ಸಾಲ ಯೋಜನೆ ಕೂಡ ಒಂದು. ಈ ಸುಗ್ರಾಮ ಸಾಲ ಯೋಜನೆಯು ಯಾವ ಉದ್ದೇಶಕ್ಕಾಗಿ ಮಾಡಿದ್ದಾರೆಂದರೆ ಗ್ರಾಮೋದ್ಧಾರ ಕೇಂದ್ರ ತೆರೆಯಲು ಹಣ ಇಲ್ಲದವರು ಸುಗ್ರಾಮ ಸಾಲ ಯೋಜನೆಯಲ್ಲಿ ಐದು ಸಾವಿರ ರೂಗಳನ್ನು ಪಾವತಿಸಿ ಸಾಲ ಪಡೆದು ಅದರಲ್ಲಿ ಗ್ರಾಮೋದ್ಧಾರ ಕೇಂದ್ರದ ಫ್ರಾಂಚೈಸಿ ಪಡೆಯಬಹುದು ಎಂದು ಹೇಳಿ ಸುಮಾರು ೧೦೦೦ ದಿಂದ ೨೦೦೦ ಜನರ ಬಳಿ ಐದು ಸಾವಿರ ರೂಗಳನ್ನು ಪಡೆದು ಯಾವುದೇ ರೀತಿಯ ಸಾಲವನ್ನು ನೀಡದೆ ವಂಚಿಸಿದ್ದಾರೆ. ೨೦೨೦ರಲ್ಲಿ ಕರೋನ ಸಲುವಾಗಿ ಲಾಕ್ಡೌನ್ ಆಗುವ ಸಂದರ್ಭಕ್ಕೂ ಮುನ್ನ ಈ ರೀತಿಯ ಕೆಲಸವನ್ನು ಮಾಡಿರುತ್ತಾರೆ. ಸಾಕಷ್ಟು ಜನರ ಬಳಿ ಇವರು ಹಣ ಪಡೆದ ನಂತರ ಲಾಕ್ಡೌನ್ ಘೋಷಣೆಯಾಗಿರುತ್ತದೆ. ಆ ಸಂದರ್ಭದಲ್ಲಿ ಈ ಕಂಪನಿಗಳು ತೆರೆದಿದ್ದರೂ ಸಹ ಲಾಕ್ಡೌನ್ ನೆಪವನ್ನು ಹೇಳಿ ಸಾಲಕೊಡುವ ದಿನವನ್ನು ಮುಂದೂಡುತ್ತಿದ್ದರು. ಲಾಕ್ಡೌನ್ ಮುಗಿದನಂತರ ೫೦೦೦ ರೂ ಹಣವನ್ನು ಪಾವತಿಸಿದಂತವರು ಸಾಲ ಕೇಳಲು ಮುಂದಾದಾಗ ಈ ಸಂದರ್ಭದಲ್ಲಿ ಯಾವುದೇ ಬ್ಯಾಂಕ್‌ಗಳಲ್ಲಿ ಸಾಲ ನೀಡುವುದಿಲ್ಲ ಏಕೆಂದರೆ ಈಗ ತಾನೆ ಲಾಕ್ ಡೌನ್ ನ್ನಿಂದ ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ ಆದಕಾರಣ ಸದ್ಯಕ್ಕೆ ಸಾಧ್ಯವಿಲ್ಲ ಎಂದು ನೆಪವನ್ನು ಹೇಳಲು ಮುಂದಾಗುತ್ತಾರೆ. ಗ್ರಾಮೋದ್ದಾರ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದವರೆ ಸುಗ್ರಾಮ ಸಾಲ ಯೋಜನೆಯಲ್ಲು ಕೆಲಸ ಮಾಡುತ್ತಿರುತ್ತಾರೆ ಅವರು ಹೇಳುವ ಪ್ರಕಾರ ಸಾಲ ಕೊಡುತ್ತೇವೆಂದು ಇವರುಗಳ ಕಡೆಯಿಂದ ತೆಗೆದುಕೊಂಡಿರುವ ಯಾವುದೇ ದಾಖಲೆಗಳನ್ನು ಬ್ಯಾಂಕ್‌ಗಳಿಗೆ ನೀಡದೆ ಇವರ ಬಳಿಯೇ ಇಟ್ಟುಕೊಂಡು ಸುಳ್ಳು ನೆಪಗಳನ್ನು ಹೇಳುತ್ತಾ ಸಾಲ ಕೊಡದೆ ಸತಾಯಿಸುತ್ತಿದ್ದರು. ಸಾಲ ಪಡೆಯಬೇಕಾದಲ್ಲಿ ಸಾಲ ಪಡೆಯುತ್ತಿರುವವರ ಸಂಪೂರ್ಣ ದಾಖಲೆಗಳನ್ನು ಬ್ಯಾಂಕಿಗೆ ನೀಡಿದರೆ ಮಾತ್ರ ಸಾಲ ಪಡೆಯಬಹುದು. ಸಂಪೂರ್ಣ ದಾಖಲೆಗಳನ್ನು ಬ್ಯಾಂಕಿಗೆ ನೀಡದೆ ಇವರ ಬಳಿಯೇ ಇಟ್ಟುಕೊಂಡಿದ್ದರೆ ಸಾಲ ಹೇಗೆ ಸಿಗುತ್ತದೆ? ಇವರು ಈ ರೀತಿ ಸಾಲ ಕೊಡುತ್ತೇವೆ ಎಂದು ಹೇಳಿ ಸುಗ್ರಾಮ ಸಾಲ ಯೋಜನೆಯನ್ನು ತೆರೆದಿರುವುದು ನೆಪಕ್ಕೆ ಮಾತ್ರ. ಸಾಲ ಕೊಡದೆ ಮುಂಚಿತವಾಗಿಯೇ ಐದು ಸಾವಿರ ರೂಗಳನ್ನು ಪಡೆದು ಜನರಿಗೆ ವಂಚಿಸುವುದು ಇವರ ಉದ್ದೇಶವಾಗಿದೆ. ಇವರ ನೆಪಗಳನ್ನು ಕೇಳಿ ಬೇಸತ್ತ ಎಷ್ಟೋ ಜನರು ಸಾಮಾಜಿಕ ಜಾಲತಾಣಗಳಲ್ಲಿ ಮನಸೋಇಚ್ಛೆ ಬೈದು ಸುಮ್ಮನಾಗಿದ್ದಾರೆ. ಸಾಲ ಕೊಡದಿದ್ದ ಮೇಲೆ ಮೊದಲೇ ಪಾವತಿಸಿ ದಂತಹ ಐದು ಸಾವಿರ ರೂಗಳನ್ನು ಹಿಂದಿರುಗಿಸಿ ಎಂದು ಕೇಳಿದವರಿಗೆ ನೀವು ಕೊಟ್ಟಿರುವ ೫೦೦೦ ರೂಗಳಲ್ಲಿ ಎರಡರಿಂದ ಮೂರು ಸಾವಿರದಷ್ಟು ಪ್ರೋಸಸಿಂಗ್ ಚಾರ್ಜ್ ಆಗಿರುತ್ತದೆ ಅದನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸಲು ಸಾಧ್ಯವಿಲ್ಲ. ಉಳಿದ ಹಣವನ್ನು ಹಿಂತಿರುಗಿಸುತ್ತೇವೆ ಎಂದು ಹೇಳಿ ೧೦ ರಿಂದ ೧೫ ಜನಕ್ಕೆ ಮಾತ್ರ ಪ್ರೊಸೆಸಿಂಗ್ ಚಾರ್ಜ್ ಎಂದು ಕಡಿತಗೊಳಿಸಿರುವ ಹಣವನ್ನು ಹೊರತುಪಡಿಸಿ ಉಳಿದ ಹಣವನ್ನು ಹಿಂದಿರುಗಿಸಿರುತ್ತಾರೆ. ಪ್ರೋಸಸಿಂಗ್ ಚಾರ್ಜ್ ಹಾಕುವುದಕ್ಕೆ ಹಣ ಪಾವತಿಸಿದ್ದಂತಹ ಯಾರೊಬ್ಬರ ದಾಖಲೆಗಳು ಸಹ ಬ್ಯಾಂಕಿನವರೆಗೆ ತಲುಪಿರುವುದಿಲ್ಲ ಅಂದ ಮೇಲೆ ಪ್ರೋಸಸಿಂಗ್ ಚಾರ್ಜ್ ಹೇಗೆ ಬೀಳುತ್ತದೆ? ಇದೆಲ್ಲಾ ಇವರುಗಳು ಹಣ ಹೊಡೆಯುವುದಕ್ಕೆ ಹೇಳುತ್ತಿದ್ದ ಸುಳ್ಳುಗಳಷ್ಟೇ. ಮೋಸ ಮಾಡಿ ಹಣ ಪಡೆದದ್ದು ೧೦೦೦ ದಿಂದ ೨೦೦೦ ಜನರ ಬಳಿ. ಪ್ರೋಸಸಿಂಗ್ ಚಾರ್ಜ್ ಹೊರತುಪಡಿಸಿ ಉಳಿದ ಹಣವನ್ನು ಹಿಂದಿರುಗಿಸಿದು ಮಾತ್ರ ಹತ್ತರಿಂದ ಹದಿನೈದು ಮಂದಿಗೆ. ಈ ರೀತಿಯ ಕಂಪನಿಯನ್ನು ತೆರೆಯುವುದಕ್ಕೆ ಸರಕಾರದಿಂದ ಯಾವುದೇ ರೀತಿಯ ಅನುಮತಿಯನ್ನು ಪಡೆದಿರುವುದಿಲ್ಲ ಹಾಗೂ ಈ ರೀತಿಯ ಕಂಪನಿಯ ಕಚೇರಿಯನ್ನು ತೆರೆಯುವುದಕ್ಕು ಕೂಡ ಸ್ಥಳೀಯ ಯಾವೊಬ್ಬ ಅಧಿಕಾರಿಯ ಬಳಿಯೂ ಅನುಮತಿಯನ್ನು ಪಡೆದಿರುವುದಿಲ್ಲ. ಇಷ್ಟೆಲ್ಲಾ ವಿಚಾರಗಳನ್ನು ಈ ಕಂಪನಿಯಲ್ಲಿ ಕೆಲಸ ಮಾಡುವ ಕೆಲಸಗಾರರು ಹೇಳಿಕೊಂಡಿರುತ್ತಾರೆ. ಆದಷ್ಟು ಬೇಗ ಸರಕಾರ ಇತ್ತ ಗಮನ ಹರಿಸಿ ಜನರಿಗಿರುವ ದೇಶಾಭಿಮಾನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಇಂತಹ ಮೋಸದ ಕಂಪನಿಯ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಹಾಗೂ ಮೋಸ ಹೋದ ಜನರಿಗೆ ನ್ಯಾಯ ಕೊಡಿಸಬೇಕು.
1 thought on “ಗ್ರಾಮೋದ್ಧಾರ ಕೇಂದ್ರದ ಹಗಲು ದರೋಡೆ ಭಾಗ-2”
Comments are closed.