ಬಾಗಲಕೋಟೆ: ಜಿಲ್ಲೆಯ ಬಾಗಲಕೋಟೆ ತಾಲೂಕಿನ ನಾಯನೇಗಲಿ ಗ್ರಾಮದ ಪರಸಪ್ಪ ಹನಮಪ್ಪ ಗಂಗೂರ ಎಂಬವರಿಗೆ ಸೇರಿದ 07 ಮೇಕೆಗಳು ಶುಗರ್ ಫ್ಯಾಕ್ಟರಿಯ ವಿಷಪೂರಿತ ನೀರು ಕುಡಿದು ಮೃತಪಟ್ಟಿವೆ. ಹಾಗೂ ಇನ್ನೂ 02 ಮೇಕೆಗಳು ಅಸ್ವಸ್ಥವಾಗಿವೆ. ಇದಕ್ಕೆ ಕಾರಣ ಸಮೀಪದಲ್ಲಿರುವ ಈ.ಐ.ಡಿ ಪ್ಯಾರಿ ಇಂಡಿಯಾ ಶುಗರ್ ಫ್ಯಾಕ್ಟರಿಯ ಕೊಳಚೆ ಹಾಗೂ ವಿಷಪೂರಿತ ನೀರು ಕುಡಿದು ಮೇಕೆಗಳು ಮೃತಪಟ್ಟಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದಷ್ಟೇ ಅಲ್ಲದೇ ಈ ಶುಗರ್ ಫ್ಯಾಕ್ಟರಿಯವರು ವಿಷಪೂರಿತ ನೀರನ್ನು ಹಳ್ಳ, ಕೆರೆ, ಹಾಗೂ ಕಾಲುವೆಗಳಿಗೆ ಬಿಡುತ್ತಿರುವುದರಿಂದ ಪ್ರಾಣಿಗಳು ಆ ನೀರನ್ನು ಕುಡಿದು ಸಾವನ್ನಪ್ಪುತ್ತೀವೆ. ಈ ವಿಷಯವಾಗಿ ಶುಗರ್ ಫ್ಯಾಕ್ಟರಿಯ ಹಿರಿಯ ಅಧಿಕಾರಿಯಾದ ಜೈರಾಮ್ ಎಂಬವನಿಗೆ ಕರೆ ಮಾಡಿ ತಿಳಿಸಿದರೆ ನನಗೆ ಅದಕ್ಕೆ ಸಂಬಂಧವಿಲ್ಲ ಎಂಬ ಉಡಾಫೆ ಉತ್ತರ ನೀಡಿದ್ದಾನೆ. ಈ ರೀತಿ ಪ್ರಾಣಿಗಳಿಗೆ ಹಾನಿಯಾದರೆ ಅವುಗಳನ್ನೇ ನಂಬಿ ಬದುಕುತ್ತಿರುವ ಕುಟುಂಬಗಳಿಗೆ ಬಹಳ ಕಷ್ಟವಾಗುತ್ತದೆ. ಪ್ರಾಣಿಗಳ ಮೇಲೆಯೇ ಅವಲಂಬಿತವಾಗಿರುವ ಪರಸಪ್ಪ ಗಂಗೂರ ಇವರಿಗೆ ತುಂಬಲಾರದ ನಷ್ಟವಾಗಿದೆ. ಸ್ಥಳಕ್ಕೆ ಆಗಮಿಸಿದ ಎ.ಎಸ್.ಐ ಬಸವರಾಜ ಜಮದಾರ್ ಖಾನಿ ಪರಿಶೀಲನೆ ನಡೆಸಿದ್ದಾರೆ.

ಆದ್ದರಿಂದ ಈ.ಐ.ಡಿ ಶುಗರ್ ಫ್ಯಾಕ್ಟರಿಯ ಅಧಿಕಾರಿಗಳು (Management team) ಈ ಕೂಡಲೇ ಇವರಿಗೆ ಸೂಕ್ತ ಪರಿಹಾರ ಒದಗಿಸಿ ಕೊಡಬೇಕು ಹಾಗೂ ಕೆರೆ, ಹಳ್ಳಗಳಿಗೆ ವಿಷಪೂರಿತ ನೀರನ್ನು ಬಿಡುವುದನ್ನು ನಿಲ್ಲಿಸಬೇಕೆಂದು ಗ್ರಾಮಸ್ಥರು ಹಾಗೂ ಭ್ರಷ್ಟರ ಬೇಟೆ ಪತ್ರಿಕೆ ಆಗ್ರಹಿಸುತ್ತದೆ.
ಈ ವರದಿಯನ್ನು ಕಂಡು ಶುಗರ್ ಫ್ಯಾಕ್ಟರಿಯವರು ಹಾಗೂ ಆಡಳಿತ ಮಂಡಳಿ ಎಚ್ಚೆತ್ತುಕೊಳ್ಳುತ್ತಾರಾ? ಕಾದು ನೋಡಬೇಕಿದೆ.

ವರದಿ: ಮುತ್ತಪ್ಪ ಬಡಿಗೇರ

error: Content is protected !!