ಶಿವಮೊಗ್ಗದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಮುಖ್ಯಸ್ಥನಾಗಿ ಸೇವೆ ಸಲ್ಲಿಸುತ್ತಿದ್ದ ಕೃಷ್ಣಪ್ಪ ಲಂಚದ ಆರೋಪದಲ್ಲಿ ಇಂದು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇದೇ ಅವರು ಅಧಿಕೃತವಾಗಿ ನಿವೃತ್ತಿಯಾಗಬೇಕಿದ್ದ ದಿನ. ಆದರೆ ಕರ್ತವ್ಯದ ಕೊನೆಯ ದಿನವೇ ಅವಮಾನಕರ ಅಂತ್ಯ ಕಂಡಿದ್ದಾರೆ.
ಮುಂಬೈ ಮೂಲದ ಕಂಪನಿಯೊಂದರಿಂದ ಟಿವಿ ಮತ್ತು ಎಲ್‌ಇಡಿ ಪರದೆ ಅಳವಡಿಕೆ ಸಂಬಂಧದ ಬಿಲ್ ಮುಂದುವರೆಸಲು 1 ಲಕ್ಷ ರೂಪಾಯಿ ಲಂಚಕ್ಕಾಗಿ ಕೃಷ್ಣಪ್ಪ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಎದುರಾಗಿದೆ. ಹಣ ಪಡೆದ ಕ್ಷಣದಲ್ಲೇ ಲೋಕಾಯುಕ್ತ ಪೊಲೀಸರು ಅವರನ್ನು ಬಲೆಗೆ ಬಿದಿದ್ದಾರೆ.
ಈ ಹಿಂದೆ ಲಂಚ ನೀಡದಿದ್ದರೆ “ಕಂಪನಿಯ ಸೇವೆ ತೊಂದರೆದಾಯಕವಾಗಿದೆ” ಎಂಬ ಷರಾ ಬರೆಯುತ್ತೇನೆ ಎಂದು ಬೆದರಿಕೆ ಹಾಕಿದ್ದೂ ವರದಿಯಾಗಿದೆ. ಇಂದು ಅವರು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಿಗೆ ಅಧಿಕಾರ ಹಸ್ತಾಂತರಿಸಿ ನಿವೃತ್ತಿ ಪಡೆಯಬೇಕಿತ್ತು. ಆದರೆ ನಿರೀಕ್ಷಿತ ಗೌರವಮಯ ವಿದಾಯದ ಬದಲು, ಲಂಚದ ಚಟುವಟಿಕೆಯಿಂದಲೇ ಬಂಧನದ ಚಪಲ ಅಂತ್ಯ ಎದುರಾದ ಘಟನೆ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಅರಣ್ಯ ಇಲಾಖೆಯಲ್ಲಿಯೂ ಸೇವೆ ಸಲ್ಲಿಸಿದ್ದ ಕೃಷ್ಣಪ್ಪ, ಸ್ಮಾರ್ಟ್ ಸಿಟಿ ಯೋಜನೆಯ ಪ್ರಮುಖ ಅಧಿಕಾರಿಯಾಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಆದರೆ ಕೊನೆಯ ದಿನವೇ ಉಜ್ವಲ ವೃತ್ತಿಯು ಕಪ್ಪು ಹದಿಯ ಅಂತ್ಯ ಕಂಡಿರುವುದು ಶೋಚನೀಯ.
ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ವಾಸವಿದ್ದ ಮಹಿಳೆಯೊಬ್ಬಳು ಅತ್ಯಾಚಾರ ಘಟನೆ ನಡೆದಿದೆ ಎಂಬ ನಾಟಕ ರೂಪಿಸಿ ಪೊಲೀಸರಿಗೆ ತೀವ್ರವಾಗಿ ತಲೆನೋವು…
ಬೆಂಗಳೂರು: ನಗರದಲ್ಲೊಂದು ಅಶ್ಲೀಲ ವರ್ತನೆ ಗಂಭೀರ ಹಲ್ಲೆ ಪ್ರಕರಣಕ್ಕೆ ಕಾರಣವಾಗಿದ್ದು, ಸಿಲಿಕಾನ್ ಸಿಟಿಯಲ್ಲಿರುವ ಶಿವಾಜಿನಗರದಲ್ಲಿ ಏಪ್ರಿಲ್ 13ರಂದು ಈ ಘಟನೆ…
ಮಾಲೂರು: ಕೆ.ಐ.ಎ.ಡಿ.ಬಿ ಕೈಗಾರಿಕಾ ಪ್ರದೇಶದ ಸಮೀಪ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಒಟ್ಟು 700 ಗ್ರಾಂ ಗಾಂಜಾವನ್ನು ಮಾಲೂರು ಅಬಕಾರಿ ಅಧಿಕಾರಿಗಳು ಬುಧವಾರ…
ಗದಗ ಜಿಲ್ಲೆ ಮುಂಡರಗಿಯಲ್ಲಿ ಬಸ್ ಹತ್ತುವ ಕುರಿತಂತೆ ನಡೆದ ಮಾತಿನ ಚಕಮಕಿ ಮಾರಾಮಾರಿಗೆ ಕಾರಣವಾಗಿ, ಮೂವರು ಯುವಕರು ಬಸ್ ಕಂಡಕ್ಟರ್…
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತಾವರಕೆರೆ ಗ್ರಾಮದಲ್ಲಿ ನಡೆದಿದೆ ಅಮಾನುಷ ಹಲ್ಲೆ ಪ್ರಕರಣ ಮತ್ತೊಮ್ಮೆ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಅಪ್ರಮಾಣಿತ…
ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ ಪಕ್ಕದ ನ್ಯೂ ಗಾಂಧಿ ನಗರದಲ್ಲಿ ಬುಧವಾರ ಸಂಭವಿಸಿದ ಭೀಕರ ಅವಘಡದಲ್ಲಿ ಇಬ್ಬರು ಕೂಲಿ ಕಾರ್ಮಿಕರು ಮಣ್ಣುಕೆಳಗೆ…