ದೇವರಹಿಪ್ಪರಗಿ: ಹಳೆಯ ಬಸ್‌ನಿಲ್ದಾಣದ ಕಟ್ಟಡವನ್ನು ನವೀಕರಣದ ಹೆಸರಿನಲ್ಲಿ ಕೆಡವಿ ಬಿಟ್ಟಿದ್ದಾರೆ. ಕಟ್ಟಡ ಮಾಡಿ ಒಳ್ಳೆಯ ಬಸ್ ನಿಲ್ದಾಣ ನಿರ್ಮಾಣ ಮಾಡಲಿ ಆದರೆ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಮತ್ತು ಬಸ್ ನಿಲ್ಲಿಸಲು ವ್ಯವಸ್ಥೆ ಮಾಡಿ ಅನುಕೂಲಮಾಡಿ ಕೊಡಬೇಕಿತ್ತು.
ಆದರೆ ಆ ವ್ಯವಸ್ಥೆ ಮಾಡದೆ ಇರುವುದರಿಂದ ಪರದಾಡುತ್ತಿರುವ ಚಾಲಕರು ಮತ್ತು ಪ್ರಯಾಣಿಕರು, ಈ ಬಸ್‌ನಿಲ್ದಾಣ ಕಟ್ಟಡ ಕೆಡವಿದರಿಂದ ಪ್ರಯಾಣಿಕರು ಫಜೀತಿ ಪಡುವಂತಾಗಿದೆ.
ಇದರಿಂದ ಬಸ್ಸಗಾಗಿ ಕಾಯುತ್ತಿರುವ ಪ್ರಯಾಣಿಕರು ಎಲ್ಲೆಂದರಲ್ಲಿ ನಿಲ್ಲುವಂತಾಗಿದೆ. ಚಾಲಕರು ಬಸ್ ಎಲ್ಲಿ ನಿಲ್ಲಿಸುವುದೆಂದು ಗೊಂದಲಕ್ಕೆ ಒಳಗಾಗಿದರೆ.
ಒಂದು ಬಸ್ ಇನ್ನೊಂದು ಬಸ್ಸಿಗೆ ಜಾಗ ಮಾಡಿಕೊಡುವುದಕ್ಕೆ ಮುಂದಕ್ಕೆ ಚಲಿಸಿ ನಿಯಂತ್ರಣ ತಪ್ಪಿದರೆ ಅಂಗಡಿಯತ್ತ ಬಸ್ ನುಗ್ಗಿ ಅನಾಹುತ ಸಂಭವಿಸಬಹುದು.
ಈ ಬಸ್ ನಿಲ್ದಾಣದಲ್ಲಿ ಮಳೆ ನೀರು ನಿಂತು ಕೆಸರು ಗದ್ದೆಯಂತೆಯಾಗಿ ಪ್ರಯಾಣಿಕರು, ಶಾಲಾ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ. ದೇವರಹಿಪ್ಪರಗಿ ಇದು ತಾಲೂಕು ಕೇಂದ್ರವಾಗಿರುವದರಿಂದ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಈ ಪಟ್ಟಣಕ್ಕೆ ಆಗಮಿಸುತ್ತಾರೆ. ಈ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಜನ – ಜಂಗುಳಿಯಿಂದ ಕೂಡಿರುತ್ತದೆ. ವಿಜಯಪುರ, ಗುಲ್ಬರ್ಗಾ, ಇಂಡಿ, ತಾಳಿಕೋಟೆ, ಬಸವನ ಬಾಗೇವಾಡಿ, ಹೂ ಹಿಪ್ಪರಗಿ ಊರುಗಳಿಗೆ ಹೋಗಬೇಕಾದರೆ ದೇವರಹಿಪ್ಪರಗಿ ಪಟ್ಟಣದ ಮಾರ್ಗಗದಿಂದ ಬಸ್ ಬದಲಾವಣೆ ಮಾಡಿಕೊಂಡು ಹೋಗಬೇಕಾಗುತ್ತದೆ. ಮತ್ತು ಹಳ್ಳಿಗಾಡಿನ ಜನ ತಮ್ಮ ಗ್ರಾಮಕ್ಕೆ ಹೋಗಬೇಕಾದರೆ ಈ ಪಟ್ಟಣದಿಂದ ಬಸ್ ಹಿಡಿದು ತಮ್ಮ ಹಳ್ಳಿಗಳಿಗೆ ಹೋಗಬೇಕಾಗುತ್ತದೆ.
ಪ್ರಯಾಣಿಕರು ಮಳೆಯಲ್ಲಿ ನಿಂತುಕೊಂಡೆ ಬಸ್ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆ ಕಾಲದಲ್ಲಿ ಬಸ್ಸಿಗೆ ಕಾಯುವ ಪ್ರಯಾಣಿಕರು ಅಲ್ಲಿ-ಇಲ್ಲಿ ನಿಂತು, ಕುಳಿತು ಸಾಗುತ್ತಿದ್ದರು. ಆದರೆ ಈಗ ಮಳೆಗಾಲ ಪ್ರಾರಂಭವಾಗಿದೆ ಇದರಿಂದ ಜನರ ಪರಿಸ್ಥಿತಿ ಹೈರಾಣಗುತ್ತಿದೆ. ಈ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿಲ್ಲ, ಚಾಹದ ಅಂಗಡಿಯಲ್ಲಿ ಚಾಹ ಕುಡಿದರೆ ಮಾತ್ರ ನೀರು ಕುಡಿಯಲು ಕೊಡುತ್ತಾರೆ. ಈ ಬಸ್ ನಿಲ್ದಾಣದಲ್ಲಿ ಕುಳಿತು ಕೊಳ್ಳಲು ಬಿಡಿ ನಿಂತುಕೊಳ್ಳಲು ವ್ಯವಸ್ಥೆಯಿಲ್ಲ ಎಂದು ಪ್ರಯಾಣಿಕರು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.
ಈಗಲಾದರೂ ಎಚ್ಚೆತ್ತುಕೊಂಡು ಸಂಬಂಧಪಟ್ಟ ಇಲಾಖೆಯವರು, ಶಾಸಕರು ಗುತ್ತಿಗೆ ಹಿಡಿದಂತ ಗುತ್ತಿಗೆದಾರ ಈ ಕಡೆ ಸ್ವಲ್ಪ ಲಕ್ಷ್ಯವಹಿಸಿದರೆ ಪ್ರಯಾಣಿಕರು ಸುರಕ್ಷಿತವಾಗಿ ಮಳೆಗಾಲವನ್ನು ಕಳೆಯಬಹುದು.
ವರದಿ : ಮಹಾಂತೇಶ ಹಾದಿಮನಿ
ನಂಜನಗೂಡು: ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸಮೀಪ…
ನಂಜನಗೂಡು: ಅಪರಿಚಿತ ಕಾರು ಚಾಲಕನ ಅತಿ ವೇಗಕ್ಕೆ ಸಿಲುಕಿದ ಆರು ಜನರ ಪೈಕಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಓರ್ವ ಮಹಿಳೆ…
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಯಿಂದ ಗೊಲಗೇರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆ ಅಪಘಾತದಲ್ಲಿ ಗೊಲಗೇರಿ ಗ್ರಾಮದ ಯುವಕ…
ನಂಜನಗೂಡು: ನಗರದಲ್ಲಿ ವಾಸಿಸುವ ನಗರವಾಸಿಗಳಿಗೆ ದುಬಾರಿ ವೆಚ್ಚದ ಕುಡಿಯುವ ನೀರಿನ ಬಿಲ್‌ಗಳನ್ನು ನೀಡಲಾಗುತ್ತಿದೆ, ಅಲ್ಲದೆ ಅನಧಿಕೃತ ಬಡಾವಣೆಗಳಿಗೆ ಎನ್‌ಓಸಿ ನೀಡಿ…
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು 50,000 ಲಂಚ ಸ್ವೀಕರಿಸುತ್ತಿದ್ದ ವೇಳೆ…
ಗೌರಿಬಿದನೂರು ನಗರದ ವಿನಾಯಕ ನಗರದ ವಾಸಿ ಪದ್ಮ ಜೈನ್ (59) ಎಂಬುವವರ 50 ಗ್ರಾಂ ಮಾಂಗಲ್ಯ ಸರವನ್ನು ದ್ವಿಚಕ್ರ ವಾಹನದಲ್ಲಿ…