ಧಾರವಾಡ : ಭೂ ಸ್ವಾಧೀನಕ್ಕೊಳಪಟ್ಟ ರೈತನಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಧಾರವಾಡ ಉಪ ವಿಭಾಗಧಿಕಾರಿಗಳ ಕಾರನ್ನು ಮಾನ್ಯ ನ್ಯಾಯಾಲಯದ ಸೂಚನೆ ಮೇರೆಗೆ ಜಪ್ತಿ ಮಾಡಲಾಗಿದೆ. ಅಳ್ನಾವರ ತಾಲೂಕಿನ ಕಡಬಗಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹುಲಿಕೇರಿ ಗ್ರಾಮದ ಇಂದಿರೆಮ್ಮನ ಕೆರೆಯಲ್ಲಿ ಮುಳಗಡೆ ಯಾಗಿರುವ ಜಮಿನಿನ ವಿಷಯವಾಗಿ ವೀರಣ್ಣ ನಾಗಶೇಟ್ಟಿ ಎಂಬುವರಿಗೆ ನೀರಾವರಿ ಇಲಾಖೆಯು ಉಪವಿಭಾಗಧಿಕಾರಿಗಳ ಸೂಚನೆ ಮೆರೆಗೆ 2015. ರಲ್ಲಿ ಹದಿಮೂರು ಗುಂಟೆ (13) ಜಮೀನನ್ನು ಸ್ವಾಧೀನಪಡಿಸಿಕೊಂಡಿತು. ಈ ಜಮಿನಿಗೆ ಸಂಬಂಧಿಸಿದಂತೆ ನೀರಾವರಿ ಇಲಾಖೆ ರೈತನಿಗೆ ಕೇವಲ ಆರು ಲಕ್ಷರೂಪಾಯಿ .(6.00.000)₹ ಮಾತ್ರ ನೀಡಿತ್ತು ಬಾಕಿ ಉಳಿದ 14.00.000(ಹದಿನಾಲ್ಕು ಲಕ್ಷ) ರೂಪಾಯಿ .ಪರಿಹಾರ ನೀಡಲು ವಿಳಂಬವಾಗಿರುವುದರಿಂದ ರೈತ ಮಾನ್ಯ ನ್ಯಾಯಾಲಯದ ಮೆಟ್ಟಿಲೇರಿದ ಸ್ವಾದಿನಕ್ಕೊಳಪಟ್ಟ ರೈತನಿಗೆ ಇಪ್ಪತ್ತು ಲಕ್ಷ ರೂ.ಪರಿಹಾರ ನಿಡಬೆಕೆಂದು ತಿರ್ಮಾನವಾಗಿತ್ತು.

ಬಾಕಿ ಉಳಿದ ಪರಿಹಾರ ನೀಡಲು ವಿಳಂಬವಾಗಿರುವುದರಿಂದ ಧಾರವಾಡದ ಎರಡನೆಯ ಹೇಚ್ಚುವರಿ ದಿವಾಣಿ ನ್ಯಾಯಾಲಯವು ಉಪವಿಭಾಗ ಅಧಿಕಾರಿಗಳ ಕಾರು ಜಪ್ತಿ ಮಾಡುವಂತೆ ಸೂಚನೆ ನಿಡಿತು. ನ್ಯಾಯಾಲಯದ ಆದೇಶದ ಮೇರೆಗೆ ಶನಿವಾರ ಉಪವಿಭಾಗ ಅಧಿಕಾರಿಗಳ ಕಾರನ್ನು ಜಪ್ತಿ ಮಾಡಲಾಗಿದೆ . ಇದೆನು …? ಹೊಸದೆನಲ್ಲ ಇವರಿಗೆ ಇದೆ ತರಹ ಕಳೆದ ವರ್ಷ ಕೂಡಾ ನವಲಗುಂದದ ನಿಲವ್ವಾ ಲಲಿತಾ ಕೇರಿ ಎಂಬ ರೈತ ಮಹಿಳೆಯ ಭೂ ಸ್ವಾದಿನಪಡಿಸಕೊಂಡ ವಿಷಯದಲ್ಲೂ ಹೀಗೆ ಕಾರು ಜಪ್ತಿ ಯಾಗಿದ್ದು ಕಾಣಬಹುದು.. ಎನೆಯಾಗಲಿ ಜಮಿನು ಕಳೆದುಕೊಂಡು ಸರಕಾರ ನಿಡುವ ಪರಿಹಾರದತ್ತ ರೈತ ಮುಖಮಾಡಿ ನೋಡುವಾಗ ನಿರಾಸೆ ಅಗಬಾರದು.. ಎನ್ನುವುದೇ…! ನಮ್ಮ ಉದ್ದೇಶ.
ಸಣ್ಣ ನೀರಾವರಿ ಇಲಾಖೆ ಕಾಮಗಾರಿಗಾಗಿ ಭೂಸ್ವಾಧೀನ ; ನೀರಾವರಿ ಇಲಾಖೆ ಬಾಕಿ ಮೊತ್ತ ನೀಡದ್ದರಿಂದ ಭೂಸ್ವಾಧೀನ ಅಧಿಕಾರಿ ಎ.ಸಿ. ವಾಹನ ಜಪ್ತಿ; ಮಾ.06 ರಂದು ನ್ಯಾಯಾಲಯಕ್ಕೆ ಬಾಕಿ ಮೊತ್ತ ಜಮೆ
ಧಾರವಾಡ : ಧಾರವಾಡ ತಾಲೂಕ ಹೂಲಿಕೇರಿ ಗ್ರಾಮದ ಇಂದಿರಮ್ಮನ ಕೆರೆ ಎಡದಂಡೆ ಕಾಲುವೆ ನಂ. 02 ನೇದ್ದರ ನಿರ್ಮಾಣದ ಕುರಿತಂತೆ ಧಾರವಾಡ ತಾಲೂಕ ಹೂಲಿಕೇರಿ ಗ್ರಾಮದ ರಿಸನಂ. 108/2 ಕ್ಷೇತ್ರ : 00ಎ-13 ಗುಂಟೆ ಜಮೀನನ್ನು ಭೂ ಮಾಲಿಕರಾದ ವೀರಣ್ಣ ತಂದೆ ಶೀದ್ಲಿಂಗಪ್ಪ ನಾಗಶೆಟ್ಟಿ ಸಾ|| ಹೂಲಿಕೇರಿ ತಾ|| ಅಳ್ನಾವರ ಇವರ ಹೆಸರಿನಲ್ಲಿ ಸದರಿ ಜಮೀನಿಗೆ ರೂ. 14,184/-ಗಳನ್ನು ನಿಗಧಿಪಡಿಸಿ ತೀರ್ಪು ಘೋಷಣೆ ಮಾಡಿ ಭೂ-ಸ್ವಾಧೀನ ಪಡಿಸಿಕೊಂಡಿದ್ದು ಇರುತ್ತದೆ.
ಸದರಿ ಜಮೀನಿನ ಭೂ ಮಾಲಿಕರು ಹೆಚ್ಚುವರಿ ಪರಿಹಾರ ಕೋರಿ ಭೂ ಸ್ವಾಧೀನ ಕಾಯ್ದೆ 1894 ರ ಕಲಂ 18 (1) ರಡಿ ಈ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಸದರಿ ಅರ್ಜಿಗೆ ಸಂಬಂಧಿಸಿದಂತೆ ಮಾನ್ಯ ನ್ಯಾಯಾಲಯದಲ್ಲಿ ದಾಖಲಾದ ಎಲ್.ಎ.ಸಿ ನಂ. 26/2013 ನೇದ್ದಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ದಿವಾಣಿ ನ್ಯಾಯಾಲಯ ಧಾರವಾಡ ರವರು ಸದರಿ ಜಮೀನಿಗೆ ಪ್ರತಿ ಗುಂಟೆಗೆ ರೂ: 31,500/-ಗಳನ್ನು ನಿಗಧಿಪಡಿಸಿ ಆದೇಶಿಸಿದ್ದು ಇರುತ್ತದೆ.
ಮಾನ್ಯ ನ್ಯಾಯಾಲಯದ ಆದೇಶದನ್ವಯ ಸದರಿ ಪ್ರಕರಣಗಳಲ್ಲಿ ಒಟ್ಟು ರೂ: 20,42,792/- ಗಳನ್ನು ಮಾನ್ಯ ನ್ಯಾಯಾಲಯಕ್ಕೆ ಭರಣಾ ಮಾಡಬೇಕಾಗಿದ್ದು, ಈ ಕುರಿತಂತೆ ಭೂ ಕೋರಿಕೆ ಸಂಸ್ಥೆಯವರಾದ ಕಾರ್ಯನಿರ್ವಾಹಕ ಇಂಜನೀಯರರು, ಸಣ್ಣ ನೀರಾವರಿ ಇಲಾಖೆ ಧಾರವಾಡ ಇವರು ರೂ: 17,85,308/-ಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಣವನ್ನು ಈಗಾಗಲೇ ಭರಣಾ ಮಾಡಿದ್ದು ಬಾಕಿ ಮೊತ್ತ ರೂ: 2,57,484/-ಗಳನ್ನು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಮಾನ್ಯ ನ್ಯಾಯಾಲಯಕ್ಕೆ ಹಣವನ್ನು ಭರಣಾ ಮಾಡದ ಕಾರಣ ಸರ್ಕಾರದ ಹಂತದಲ್ಲಿ ಭೂಸ್ವಾಧೀನ ಅಧಿಕಾರಿಯಾಗಿರುವ ಉಪವಿಭಾಗಾಧಿಕಾರಿಗಳ ವಾಹನ ಜಪ್ತಿಯಾಗಿರುತ್ತದೆ ಎಂದು ಎ.ಸಿ. ಅವರು ತಿಳಿಸಿದ್ದಾರೆ.
ಈಗಾಗಲೇ ದಿನಾಂಕ: 03-03-2023 (ಶುಕ್ರವಾರ) ರಂದು ಸಣ್ಣ ನೀರಾವರಿ ಇಲಾಖೆಗೆ ಸರ್ಕಾರದಿಂದ ರೈತರಿಗೆ ನೀಡಬೇಕಾಗಿರುವ ಬಾಕಿ ಮೊತ್ತ ಬಿಡುಗಡೆಯಾಗಿದ್ದು, ಸೋಮವಾರ ದಿನಾಂಕ: 06-03-2023 ರಂದು ನ್ಯಾಯಾಲಯಕ್ಕೆ ಜಮೆ ಮಾಡುವುದಾಗಿ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಚರಂತಯ್ಯ ಹಿರೇಮಠ

error: Content is protected !!