ಹುಬ್ಬಳ್ಳಿ: ರಸ್ತೆಯ ತುಂಬೆಲ್ಲ ಕೊಳಚೆಯಂತೆ ಸಂಗ್ರಹವಾದ ನೀರು ದುಃಸ್ತರವಾದ ಜನರ ಓಡಾಟ ವೃದ್ಧರು ರೋಗಿಗಳಿಗೆ ಅವ್ಯವಸ್ಥೆಯಿಂದ ತುಂಬಿದ ರಸ್ತೆಗಳೇ ಕಂಟಕ ಪ್ರಾಯವಾಗಿವೆ. ಈ ಎಲ್ಲ ಸನ್ನಿವೇಶಗಳಿಗೆ ಸಾಕ್ಷಿಯಾಗಿರುವುದು ಕಡಪಟ್ಟಿ ಗ್ರಾಮ. ಹತ್ತು ಹಲವಾರು ವರ್ಷಗಳಿಂದ ಈ ಅವ್ಯವಸ್ಥೆಯ ರಸ್ತೆ ಹೀಗೆ ಇದ್ದು, ಇದರಿಂದ ಬೇಸತ್ತ ಸ್ಥಳೀಯ ನಿವಾಸಿಗಳು ಮಹಿಳೆಯರು ರಸ್ತೆ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತಿದ್ದಾರೆ. ಅದರಲ್ಲಿ ಕಡಪಟ್ಟಿ ಒಳಮಾರ್ಗವಾಗಿ ಅಲ್ಲಾಪುರ ಗ್ರಾಮ ಸಂಪರ್ಕಿಸುವ ರಸ್ತೆ ಬಗ್ಗೆ ಈ ವಠಾರದ ಮಹಿಳೆಯರು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ವರದಿ: ಶಿವು ಹುಬ್ಬಳ್ಳಿ.