ಮುಂಡಗೋಡ: ತಾಲೂಕಿನ ಪಾಳಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲಕೊಪ್ಪ ಗ್ರಾಮದಲ್ಲಿ ದಿನಾಂಕ 12.04.2024 ರಂದು ಸಿಡಿಲು ಹೊಡೆದು ಸಾವನ್ನಪ್ಪಿದ 5 ಜಾನುವಾರುಗಳ ಮಾಲೀಕರಾದ ಫಕ್ಕೀರಗೌಡ ನೀರನಗೌಡ ಕಡಬಗೇರಿ ಅವರಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ 1, 52, 500 ( ಒಂದು ಲಕ್ಷ ಐವತ್ತೆರಡು ಸಾವಿರ ಐದು ನೂರು) ರೂಪಾಯಿಗಳನ್ನು ಮುಂಡಗೋಡದ ತಹಶೀಲ್ದಾರ್ ಶಂಕರ್ ಗೌಡಿ ಅವರು ವಿತರಿಸಿದ್ದಾರೆ. ಕೇವಲ ಮೂರು ದಿನಗಳಲ್ಲಿ ಜಾನುವಾರುಗಳನ್ನು ಕಳೆದುಕೊಂಡ ರೈತರಿಗೆ ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯವನ್ನು ಒದಗಿಸಿದ ತಹಶೀಲ್ದಾರ್ ಸಾಹೇಬರ ಕ್ರಮಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.