ತಮಿಳುನಾಡಿನ ನಿರುದ್ಯೋಗಿಯೋರ್ವ ಮೂರು ಹೊತ್ತಿನ ಊಟಕ್ಕಾಗಿ ಜೈಲು ಸೇರಲು ಸಕ್ಕತ್ತ್ ಪ್ಲಾನ್ ಮಾಡಿದ್ದಾನೆ. ಕಡೆಗೂ ಆತನ ಆಸೆ ನೆರವೇರಿದೆ. ತಮಿಳುನಾಡಿನ ನಿರುದ್ಯೋಗಿಯೋರ್ವ
ಮೂರು ಹೊತ್ತಿನ ಊಟಕ್ಕಾಗಿ ಜೈಲು ಸೇರಲು ಸಕ್ಕತ್ತ್ ಪ್ಲಾನ್ ಮಾಡಿದ್ದಾನೆ. ಕಡೆಗೂ ಆತನ ಆಸೆ ನೆರವೇರಿದೆ. ಈತ ಮಾಡಿದ ಕೆಲಸಕ್ಕೆ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮೂರು ಹೊತ್ತು ಊಟ, ಆರಾಮ ಜೀವನ ನಡೆಸಲು ಜೈಲು ಒಂದು ಉತ್ತಮ ತಾಣ ಎಂದು ಯೋಚಿಸಿದ್ದ ತಮಿಳುನಾಡು ಮೂಲದ 34 ವರ್ಷದ ಸಂತೋಷ್ ಕುಮಾರ್ , ತಾನು ಹೇಗಾದರೂ ಪೊಲೀಸರ ಕೈಯಲ್ಲಿ ಬಂಧಿಯಾಗಬೇಕೆಂದು ಹಲವು ದಿನಗಳ ನಂತರ ಪ್ಲಾನ್ ಮಾಡಿ, ಇದೀಗಾ ಪೊಲೀಸರ ಅತಿಥಿಯಾಗಿದ್ದಾನೆ. ಅಷ್ಟಕ್ಕೂ ಈತ ಮಾಡಿದ ಕೆಲಸ ಏನು ಗೊತ್ತಾ?
ತಮಿಳುನಾಡಿನ ಕೊಯಂಬತ್ತೂರಿನ ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವ ಬಗ್ಗೆ ಈತ ಚೆನ್ನೈನ ಕಂಟ್ರೋಲ್ ರೂಮ್ಗೆ ಕರೆ ಮಾಡಿದ್ದಾನೆ. ಬಾಂಬ್ ಸ್ಫೋಟದ ಬಗ್ಗೆ ಸುಳ್ಳು ಸುದ್ದಿ ಹರಡಿಸಿರುವುದರಿಂದ ಶನಿವಾರ ಇತನನ್ನು ಬಂಧಿಸಲಾಗಿದೆ.
ಕುಮಾರ್ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ) ಮತ್ತು 507 ಅಡಿಯಲ್ಲಿ ಆರೋಪ ಹೊರಿಸಲಾಯಿತು. ಆರೋಪಿಯ ವಿಚಾರಣೆಯ ನಂತರ, ಶಂಕಿತನು ತಾನು ನಿರುದ್ಯೋಗಿ ಮತ್ತು ಜೀವನೋಪಾಯಕ್ಕಾಗಿ ಹೆಣಗಾಡುತ್ತಿರುವುದನ್ನು ವಿವರಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೀಗಾ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.