ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ಮೇಲೆ ಇದೀಗ ಜೀವ ಬೆದರಿಕೆ ಕೇಸ್ ದಾಖಲಾಗಿದೆ. ಖಾಸಗಿ ವಾಹಿನಿಯಲ್ಲಿ ಕಾಮಿಡಿಯನ್ ಆಗಿ ಕೆಲಸ ಮಾಡುತ್ತಿರುವ ಸೋಮಶೇಖರ್ ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಮಗೂ ತಮ್ಮ ಕುಟಂಬಕ್ಕೂ ಜೀವ ಬೆದರಿಕೆ ಇದೆ, ಅವರನ್ನು ಕರೆಸಿ ಎಚ್ಚರಿಕೆ ಕೊಡಿ ಎಂದು ಮನವಿ ಮಾಡಿದ್ದಾರೆ.
ಖಾಸಗಿ ಚಾನೆಲ್ ನಲ್ಲಿ ನಡೆದ ಕಾಮಿಡಿ ಗ್ಯಾಂಗ್ ಕಾರ್ಯಕ್ರಮದಿಂದ ಸೋಮಶೇಖರ್ ಅವರಿಗೆ ಒಂದಷ್ಟು ಹಣ ಬಂದಿತ್ತಂತೆ. ಆ ಹಣವನ್ನು ಸೀನಿಯರ್ ಗಳಾದ ಚಿದಾನಂದ್ ಹಾಗೂ ಅನಿ ಎನ್ನುವವರಿಗೂ ನೀಡಿ ಎಂದು ಕೇಳಿದ್ದರೆಂತೆ. ಅದಕ್ಕೆ ಒಪ್ಪದ ಸೋಮಶೇಖರ್ ಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಸಂಬಂಧ ದೂರು ದಾಖಲಿಸಿರುವ ಸೋಮಶೇಖರ್, ನಯನಾ ಮಾತನಾಡಿರುವ ಆಡಿಯೋ ಕೂಡ ನೀಡಿದ್ದಾರೆ.
ಆಡಿಯೋ : ಹಾಯ್ ಸೋಮ.. ನಾನು ಈ ಆಡಿಯೋವನ್ನು ನಮ್ಮ ಏರಿಯಾದ ಆರ್ ಆರ್ ನಗರ ಪೊಲೀಸ್ ಠಾಣೆಯಿಂದ ಕಳುಹಿಸುತ್ತಿದ್ದೇನೆ. ಚಿದುಗೆ ಮತ್ತು ಅನಿಗೆ ನೀನು ಹಣ ಕೊಟ್ಟಿಲ್ಲವಂತೆ. ಅವರಿಗೆ ಹಣ ನೀಡದೆ ಹೋದರೆ ಪೊಲೀಸರಿಗೆ ದೂರು ನೀಡುತ್ತೇವೆ. ಆಮೇಲೆ ಅವರೇ ನೀನು ಎಲ್ಲಿ ಇದ್ದರು ಎಳೆದು ತರುತ್ತಾರೆ. ಆ ಹಣ ಎಲ್ಲರಿಗೂ ಸೇರಿದ್ದು. ಆದ್ರೆ ನೀನು ನಿನ್ನ ಲುಚ್ಚಾ ಬುದ್ದಿಯನ್ನು ತೋರಿಸಿದ್ದೀಯಾ. ದಯವಿಟ್ಟು ಆದಷ್ಟು ಬೇಗ ದುಡ್ಡು ತಲುಪಿಸು ಇಲ್ಲವಾದರೆ ನಾವೂ ಏನು ಮಾಡುವುದಕ್ಕೂ ಹೇಸುವುದಿಲ್ಲ. ಮಿಸ್ಟರ್ ಸೋಮ ಅವರೇ ಅದೇನೋ ರೂಲ್ಸ್ ಬಗ್ಗೆ ಎಲ್ಲಾ ಮಾತಾಡಿದ್ರಂತೆ. ಹೋಗಿ ಅದ್ಯಾವ ಪೊಲೀಸ್ ಸ್ಟೇಷನ್ ಗೆ ಹೋಗುತ್ತೀರಾ ಹೋಗಿ. ಅದೇನು ದೂರು ಕೊಡ್ತೀರಾ ಕೊಡಿ. ನಿಮಗಿದು ಲಾಸ್ಟ್ ಕಾಲ್, ಇನ್ಮೇಲೆ ಬೆಂಗಳೂರಿನಲ್ಲಿ ಅದೇಗೆ ಓಡಾಡ್ತೀಯಾ ಅನ್ನೋದನ್ನ ನಾನು ನೋಡ್ತೀನಿ ಎಂದು ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ.