ಬೆಂಗಳೂರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ವೈದ್ಯೆ ಪ್ರಿಯದರ್ಶನಿ ತನ್ನ ಮಕ್ಕಳ ಸಹಾಯದಿಂದ ವಯೋವೃದ್ಧ ಅತ್ತೆ-ಮಾವನ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ದಾರುಣ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರು ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಹತ್ತು ವರ್ಷಗಳಿಂದ ಕಿರುಕುಳ:
ಪ್ರಿಯದರ್ಶನಿ ಕಳೆದ ಹತ್ತು ವರ್ಷಗಳಿಂದ ತನ್ನ ಅತ್ತೆ-ಮಾವನಿಗೆ ತೊಂದರೆ ನೀಡುತ್ತಿದ್ದಳು. ಕಾಟ ಸಹಿಸಲು ಆಗದೆ, ಅತ್ತೆ ಮಾವ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆದರೆ ಸೋಮವಾರ (ಮಾ. 10), ಪ್ರಿಯದರ್ಶನಿ ಅವರ ಮನೆಗೆ ನುಗ್ಗಿ ನರಸಿಂಹಯ್ಯ ಮತ್ತು ಅವರ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾಳೆ.
ವಿಚ್ಛೇದನ ಪ್ರಕ್ರಿಯೆ ಮತ್ತು ಹಲ್ಲೆ:
2007ರಲ್ಲಿ ನರಸಿಂಹಯ್ಯ ಅವರ ಪುತ್ರ ನವೀನ್ ಕುಮಾರ್ ಮತ್ತು ಪ್ರಿಯದರ್ಶನಿ ವಿವಾಹವಾಗಿದ್ದು, ಈಗ ಇಬ್ಬರೂ ವಿಚ್ಛೇದನ ಅರ್ಜಿ ಸಲ್ಲಿಸಿದ್ದಾರೆ. ಆದರೆ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದರೂ, ಪ್ರಿಯದರ್ಶನಿ ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಅತ್ತೆ-ಮಾವನ ಮನೆಗೆ ನುಗ್ಗಿ, ಬರ್ಬರವಾಗಿ ಹಲ್ಲೆ ನಡೆಸಿದ್ದಾಳೆ.
ಪೊಲೀಸರ ಕ್ರಮ:
ಈ ಕುರಿತು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಪ್ರಿಯದರ್ಶಿನಿಗೆ ವಿಚಾರಣೆಗೆ ನೋಟಿಸ್ ಜಾರಿಗೊಳಿಸಿದ್ದಾರೆ.
ಪಟಿಯಾಲಾದಲ್ಲಿ ಹಿರಿಯ ಸೇನಾ ಅಧಿಕಾರಿ ಪುಷ್ಪಿಂದರ್ ಸಿಂಗ್ ಬಾತ್ ಮತ್ತು ಅವರ ಮಗ ಅಂಗದ್ ಸಿಂಗ್ ಮೇಲೆ ಮೂವರು ಪಂಜಾಬ್…
ಒಡಿಶಾದ ಬಾಲಸೋರ್ ಜಿಲ್ಲೆಯ ಜಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಬಲಿಯಾಪಾಳ ಗ್ರಾಮದಲ್ಲಿ ನೊಂದ ಮಹಿಳೆಯ ನೆರೆಮನೆಯವನೊಬ್ಬ ಅತ್ಯಾಚಾರ ಎಸಗಿದ ಘಟನೆಯು…
ರಾಯಚೂರಿನ ಪಶ್ಚಿಮ ಠಾಣೆ ಪೊಲೀಸರು ರಾಜ್ಯದಲ್ಲೇ ಅತಿದೊಡ್ಡ ಖೋಟಾ ನೋಟು ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ದಂಧೆಯಲ್ಲಿ ತೊಡಗಿದ್ದ ಪೊಲೀಸರು…
ಪಾಕಿಸ್ತಾನ ಕ್ರಿಕೆಟಿಗ ರಜಾ ಹಸನ್ ಭಾರತ ಮೂಲದ ಹಿಂದೂ ಯುವತಿ ಪೂಜಾ ಬೊಮನ್ ಜೊತೆ ನ್ಯೂಯಾರ್ಕ್‌ನಲ್ಲಿ ಸೆಟಲ್ ಆಗಿದ್ದು, ಇವರ…
ಹೈದರಾಬಾದ್‌ನಲ್ಲಿ ವ್ಯಕ್ತಿಯೊಬ್ಬ ಪಶ್ಚಿಮ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ಹೆಸರನ್ನು ಬಳಸಿಕೊಂಡು 2.8 ಕೋಟಿ ರೂ. ವಂಚನೆ ನಡೆಸಿದ ಘಟನೆ…
ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಕೊಲ್ಲಲ್ಪಟ್ಟಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಪಾಕಿಸ್ತಾನಿ ಪತ್ರಕರ್ತೆ ಮೋನಾ ಆಲಂ…