ನಟಿ ಮುಮ್ತಾಜ್ ತಮಿಳು ಚಿತ್ರರಂಗದಲ್ಲಿ ಪ್ರಮುಖ ಸ್ಥಾನ ಪಡೆದ ನಟಿಯರಲ್ಲಿ ಒಬ್ಬರು. ಅವರು ಅನೇಕ ಚಿತ್ರಗಳಲ್ಲಿ ವಿಶೇಷ ಹಾಡುಗಳಲ್ಲಿ ಕಾಣಿಸಿಕೊಂಡಿದ್ದು, ಹೆಚ್ಚಾಗಿ ಗ್ಲಾಮರ್ ಪಾತ್ರಗಳಲ್ಲಿ ಪ್ರಭಾವ ಬೀರಿದ್ದಾರೆ. ಇದೀಗ ಅವರ ಹೇಳಿಕೆಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆದಿದೆ.
ಕನ್ನಡದ ಕಂಠಿ ಸಿನಿಮಾದ ಐಟಂ ಸಾಂಗ್‌ನಲ್ಲಿ ಮಿಂಚಿದ್ದ ಮುಮ್ತಾಜ್ ಮುಖ್ಯವಾಗಿ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದರು. ಹಳೆಯ ಸಂದರ್ಶನವೊಂದರಲ್ಲಿ, ಅವರು ತಮ್ಮ ಮರಣದ ನಂತರ ತಮ್ಮ ಮಾದಕ ಫೋಟೋಗಳನ್ನು ಹಂಚದಿರಲು ವಿನಂತಿಸಿಕೊಂಡಿದ್ದರು. ಈ ಮಾತುಗಳು ಈಗ ಮತ್ತೆ ಚರ್ಚೆಗೆ ಗ್ರಾಸವಾಗಿವೆ.
ಮುಂಬೈ ಮೂಲದ ಮುಮ್ತಾಜ್ ತಮಿಳು ಚಿತ್ರರಂಗಕ್ಕೆ ರಾಜೇಂದ್ರನ್ ನಿರ್ದೇಶಿಸಿದ ಮೋನಿಶಾ ಎನ್ ಮೊನಾಲಿಸಾ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. “ಮುಮ್ತಾಜ್ ಅಂದರೆ ಗ್ಲಾಮರ್, ಗ್ಲಾಮರ್ ಅಂದರೆ ಮುಮ್ತಾಜ್” ಎನ್ನುವ ಮಾತು ಪ್ರಚಲಿತವಾಗಿತ್ತು. ಆದರೆ 2013ರಲ್ಲಿ ತೆರೆಕಂಡ ಅತ್ತಾರಿಂಟಿಕಿ ದಾರೇದಿ ಸಿನಿಮಾದ ನಂತರ ಅವರು ಚಿತ್ರರಂಗವನ್ನು ಸಂಪೂರ್ಣವಾಗಿ ಬಿಟ್ಟರು.
ನಂತರದ ಬದುಕಿನಲ್ಲಿ ಮುಮ್ತಾಜ್ ಪೂಜೆ ಮತ್ತು ಆಧ್ಯಾತ್ಮದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಈಗಾಗಲೇ ಮೂರು ಬಾರಿ ಮೆಕ್ಕಾಗೆ ಭೇಟಿ ನೀಡಿದ್ದು, ಈ ಪವಿತ್ರ ಸ್ಥಳಕ್ಕೆ ಭೇಟಿ ನೀಡಿದ ಮುಸ್ಲಿಮರು ಧನ್ಯರು ಎಂಬ ನಂಬಿಕೆಯನ್ನು ಒಪ್ಪಿಕೊಂಡಿದ್ದಾರೆ.
ಆಧ್ಯಾತ್ಮದ ಬಗ್ಗೆ ಮಾತನಾಡಿದ ಅವರು, “ನಾನು ಬಾಲ್ಯದಲ್ಲಿ ಧಾರ್ಮಿಕ ಪುಸ್ತಕ ಕುರಾನ್ ಓದಿದರೂ, ಅದರ ಅರ್ಥ ತಿಳಿದಿರಲಿಲ್ಲ. ಈಗ ನಾನು ಬದಲಾಗಿದ್ದೇನೆ. ಕುರಾನ್‌ನ ಅರ್ಥವನ್ನು ಅರ್ಥಮಾಡಿಕೊಂಡು, ಅಲ್ಲಾಹನಿಗೆ ಹತ್ತಿರವಾಗಲು ಪ್ರಯತ್ನಿಸುತ್ತಿದ್ದೇನೆ. ನನ್ನ ಹಳೆಯ ಜೀವನವನ್ನು ಬದಲಾಯಿಸಲು ಸಾಧ್ಯವಿಲ್ಲ, ಆದರೆ ನನ್ನ ಹೊಸ ಜೀವನವನ್ನು ಶ್ರದ್ಧೆಯಿಂದ ನಡೆಸಲು ಪ್ರಯತ್ನಿಸುತ್ತಿದ್ದೇನೆ,” ಎಂದು ತಿಳಿಸಿದ್ದಾರೆ.
ಅವರು ತಮ್ಮ ಅಂತಿಮ ವಿನಂತಿಯನ್ನು ಹಂಚಿಕೊಳ್ಳುತ್ತಾ, “ನಾನು ಸತ್ತ ನಂತರ ನನ್ನ ಮಾದಕ ಫೋಟೋಗಳನ್ನು ಹಂಚದಿರಲು ನಿಮ್ಮೆಲ್ಲರ ಬಳಿ ಕೋರಿದ್ದೇನೆ. ದಯವಿಟ್ಟು ಇದನ್ನು ನನ್ನ ಕೊನೆಯ ಆಸೆಯಾಗಿ ಗಮನಿಸಿ. ಅವುಗಳನ್ನು ಹಂಚುವುದರಿಂದ ನನ್ನ ಆತ್ಮಕ್ಕೆ ನೋವು ಉಂಟಾಗುತ್ತದೆ,” ಎಂದು ಮನವಿ ಮಾಡಿದ್ದಾರೆ.
ಕೆಂಡ್ರ ವಿಭಾಗದ ಮಹಿಳಾ ಠಾಣೆ ಪೊಲೀಸರು, 37 ವರ್ಷದ ತಮಿಳುನಾಡು ಮೂಲದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಇಬ್ಬರನ್ನು…
ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ಪಟ್ಟಣದ ಮೋಳೆ ರಿಂಗ್ ರಸ್ತೆಯಲ್ಲಿ ಒಂದು ಅಂಶಾತುರ ಘಟನೆ ನಡೆದಿದೆ, ಕಾಡು ರಕ್ಷಣೆ ಮತ್ತು ಪರಿಸರ…
ಸಿಂಧನೂರು ತಾಲ್ಲೂಕಿನ ಉಪ್ಪಳ ಮತ್ತು ದಢೇಸುಗೂರು ಗ್ರಾಮದ ರೈತರಿಂದ 4,500 ಚೀಲ ಭತ್ತವನ್ನು ಖರೀದಿಸಿದ್ದ ವ್ಯಾಪಾರಿ ಮಲ್ಲೇಶ ₹60 ಲಕ್ಷ…
ಹುಕ್ಕೇರಿ ತಾಲೂಕಿನ ಸುಲ್ತಾನಪುರದಲ್ಲಿ ಏಳು ವರ್ಷದ ಬಾಲಕನನ್ನು 4 ಲಕ್ಷ ರೂ.ಗೆ ಮಾರಾಟ ಮಾಡಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಿರುವ…
ಕುಂದಗೋಳ: ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮದಲ್ಲಿ ಸ್ವಚ್ಛತೆಗೆ ಸಂಬಂಧಿಸಿದ ಸಮಸ್ಯೆಗಳು ತೀವ್ರ ಸ್ವರೂಪ ತಾಳುತ್ತಿದ್ದು, ಗ್ರಾಮ ಪಂಚಾಯಿತಿ ಮುಂಭಾಗದ ರಸ್ತೆಗಳು…
ಹುಬ್ಬಳ್ಳಿಯ ಟಿಪ್ಪು ನಗರದಲ್ಲಿ ಘಟನೆ ನಡೆದಿದ್ದು, ವಿವಾಹಿತ ಮಹಿಳೆಯೊಂದಿಗೆ ಮಾತನಾಡಿದ ಯುವಕನನ್ನು ಕೆಲವರು ಹಾಡಹಗಲೇ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಯುವಕನನ್ನು…