ಅಜಯ್ ದೇವಗನ್ ನಟನೆಯ ‘ದೃಶ್ಯಂ 2’ ಚಿತ್ರಕ್ಕೆ ಅಭಿಷೇಕ್ ಪಾಠಕ್ ನಿರ್ದೇಶನ ಮಾಡಿದ್ದಾರೆ. ಸಿನಿಮಾ ನೋಡಿದ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಖ್ಯಾತ ನಟ ಅಜಯ್ ದೇವಗನ್ ಅವರು ಮತ್ತೆ ಗೆಲುವಿನ ಟ್ರ್ಯಾಕ್ಗೆ ಮರಳಿದ್ದಾರೆ.
ಈ ಹಿಂದಿನ ಸಿನಿಮಾಗಳಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಕಂಡಿರದ ಅವರಿಗೆ ಈಗ ‘ದೃಶ್ಯಂ 2’ ಸಿನಿಮಾದಿಂದ ಗೆಲುವು ಸಿಕ್ಕಿದೆ. ಬಿಡುಗಡೆಯಾದ ಮೂರೇ ದಿನಕ್ಕೆ ಈ ಸಿನಿಮಾ ಬರೋಬ್ಬರಿ 64.14 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದು ಅವರ ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದೆ. ಇದು ಮಲಯಾಳಂನ ‘ದೃಶ್ಯಂ 2’ ಚಿತ್ರದ ಹಿಂದಿ ರಿಮೇಕ್. ಉತ್ತರ ಭಾರತದ ಮಂದಿ ಚಿತ್ರಮಂದಿರದಲ್ಲಿ ಈ ಸಿನಿಮಾವನ್ನು ಮುಗಿಬಿದ್ದು ನೋಡುತ್ತಿದ್ದಾರೆ. ಆ ಮೂಲಕ ಮೊದಲ ವೀಕೆಂಡ್ನಲ್ಲಿಯೇ ನಿರ್ಮಾಪಕರ ಜೇಬು ತುಂಬಿದೆ. ಬಾಕ್ಸ್ ಆಫೀಸ್ ಕಲೆಕ್ಷನ್ ಇದೇ ರೀತಿ ಮುಂದುವರಿದರೆ ಇನ್ನು ಮೂರು ಅಥವಾ ನಾಲ್ಕು ದಿನದಲ್ಲಿ 100 ಕೋಟಿ ರೂಪಾಯಿ ಗಳಿಕೆ ಆಗಲಿದೆ.
#Drishyam2 ends *Weekend 1* with a BIG BANG… Creates HAVOC on Day 3… Reboots and revives biz… Brings JOY, HOPE, CONFIDENCE, OPTIMISM back… Targets ₹ 💯 cr in *Week 1*… This one’s a SMASH-HIT… Fri 15.38 cr, Sat 21.59 cr, Sun 27.17 cr. Total: ₹ 64.14 cr. #India biz. pic.twitter.com/j9fK2xHtse
— taran adarsh (@taran_adarsh) November 21, 2022