ಬಾಗಲಕೋಟೆ: ಜಿಲ್ಲೆಯ ಬಾಗಲಕೋಟೆ ತಾಲೂಕಿನ ಸುತಗುಂಡಾರ ಗ್ರಾಮ ಪಂಚಾಯತಿ ವ್ಯಾಪ್ತಿಯ ಡೊಮನಾಳ ಜೆಪಿ (ಸಿದ್ದಪನ ಅಡಿ) ಗ್ರಾಮದಲ್ಲಿ ನೀರಿನ ಟ್ಯಾಂಕ್ ಇದ್ದು, ಈ ಟ್ಯಾಂಕ್ ಗೆ ಸರಿಯಾದ ವ್ಯವಸ್ಥೆ ಇಲ್ಲವಾಗಿದೆ. ಪ್ರತಿದಿನವೂ ನೀರು ಅನಾವಶ್ಯಕವಾಗಿ ಗ್ರಾಮ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪೋಲಾಗುತ್ತಿದೆ. ಅಲ್ಲೇ ಹತ್ತಿರವಿರುವ ಒಬ್ಬರನ್ನು ಕೇಳಿದಾಗ ಈ ಟ್ಯಾಂಕ್ ಗೆ ನಳಗಳಿಲ್ಲದೆ ಎಷ್ಟೋ ವರ್ಷಗಳು ಕಳೆದಿವೆ ಎಂದು ತಿಳಿಸಿದರು. ಪ್ರತಿದಿನ ಗ್ರಾಮ ಪಂಚಾಯತಿ ಸಿಬ್ಬಂದಿ ನೋಡಿದರೂ ನೋಡದ ಹಾಗೆ ಇರುತ್ತಾರೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗಮನಕ್ಕೆ ತಂದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಲ್ಲಿಯ ಪ್ರಜ್ಞಾವಂತರು ತಿಳಿಸಿದ್ದಾರೆ.
ಈ ಟ್ಯಾಂಕ್ ನ ಎದುರುಗಡೆಗೆ ಶಾಲೆಯಿದೆ. ಆ ಶಾಲೆಯಲ್ಲಿ ಅದೇಷ್ಟೋ ಪುಟ್ಟ ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಆದರೆ ಅಲ್ಲೇ ಹತ್ತಿರವಿರುವ ನೀರು ಪೋಲಾಗುತ್ತಿದೆ ಹೊರತು ಆ ಪುಟ್ಟ ವಿದ್ಯಾರ್ಥಿಗಳಿಗೆ ಆ ನೀರು ಸಿಗುತ್ತಿಲ್ಲ. ಈ ಟ್ಯಾಂಕ್ ಸ್ವಚ್ಚಗೊಳಿಸಿ ನಳಗಳ ವ್ಯವಸ್ಥೆ ಮಾಡಿದರೆ ಎಲ್ಲಾ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗುತ್ತದೆ ಎಂಬುದನ್ನು ಅರಿಯದ ಅಧಿಕಾರಿಗಳು ಇದು ನಿಜಕ್ಕೂ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಅಸೂಯೆ ತರುವ ವಿಷಯವಾಗಿದೆ. ಇನ್ನುಮುಂದೆ ಆದರೂ ಈ ಟ್ಯಾಂಕ್ ಗೆ ನಳದ ವ್ಯವಸ್ಥೆ ಕಲ್ಪಿಸಿ, ಪೋಲಾಗುತ್ತಿರುವ ನೀರನ್ನು ತಡೆಗಟ್ಟಿ ಮುಂದಿನ ಪೀಳಿಗೆಗೆ ನೀರು ಸಿಗುವ ಹಾಗೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಲಕ್ಷಣವಾಗಿದೆ. ಈ ವರದಿಯನ್ನು ಗಮನಿಸಿಯಾದರೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಚ್ಚೆತ್ತುಕೊಂಡು ವ್ಯವಸ್ಥೆ ಕಲ್ಪಿಸುತ್ತಾರಾ? ಕಾದು ನೋಡಬೇಕಿದೆ.

ವರದಿ: ವಿಶ್ವನಾಥ ಭಜಂತ್ರಿ

error: Content is protected !!