
ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಅಕ್ರಮ ಮದ್ಯದ ಸಾಗಾಟವನ್ನು ಪತ್ತೆ ಹಚ್ಚಿ, ಓರ್ವನನ್ನು ಬಂಧಿಸಿರುವ ಘಟನೆ ನಡೆದಿದೆ. ಗೋವಾ ಕಡೆಗೆ ಸಾಗಿಸುತ್ತಿದ್ದ 40,000 ಲೀಟರ್ ಸ್ಪಿರಿಟ್‌ನ್ನು ವಶಕ್ಕೆ ಪಡೆಯಲಾಗಿದೆ.
ನಂಬರ್ ಪ್ಲೇಟ್ ಬದಲಿಸಿ ತಪ್ಪಿಸಿಕೊಳ್ಳಲು ಯತ್ನ
ಬಂಧಿತ ಓಂ ಪ್ರಕಾಶ್, ಕಳೆದ ಆರು ತಿಂಗಳಿಂದ ಅಕ್ರಮವಾಗಿ ಟ್ಯಾಂಕರ್ ಮೂಲಕ ಸ್ಪಿರಿಟ್ ಸಾಗಿಸುತ್ತಿದ್ದ ಎನ್ನಲಾಗುತ್ತಿದೆ. ಅಧಿಕಾರಿಗಳಿಗೆ ತಪ್ಪಿಸಿಕೊಳ್ಳಲು ನಂಬರ್ ಪ್ಲೇಟ್ ಬದಲಿಸುವ ತಂತ್ರ ಬಳಕೆ ಮಾಡಿದ್ದರೂ, ಈ ಬಾರಿ ಅದೃಷ್ಟ ಕೈಕೊಟ್ಟಿದೆ. ಮಾಹಿತಿ ಪಡೆದು ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು, 24 ಲಕ್ಷ ಮೌಲ್ಯದ ಸ್ಪಿರಿಟ್ ಮತ್ತು 55 ಲಕ್ಷ ಮೌಲ್ಯದ ಟ್ಯಾಂಕರ್ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.
ಮಾಲೀಕರಿಗೂ ಪ್ರಕರಣ
ಈ ಅಕ್ರಮ ವಹಿವಾಟಿಗೆ ಸಂಬಂಧಿಸಿದಂತೆ ಟ್ಯಾಂಕರ್ ಮಾಲೀಕ ಸುಖದೇವ್ ವಿರುದ್ಧವೂ ದೂರು ದಾಖಲಿಸಲಾಗಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಗೊಂಡಿದ್ದು, ಅಕ್ರಮ ಮದ್ಯದ ಸಾಗಾಟದ ಹೆಚ್ಚಿನ ಜಾಲವಿದೆ ಎಂದೇ ಅನುಮಾನ ವ್ಯಕ್ತವಾಗಿದೆ.
ಅಬಕಾರಿ ಇಲಾಖೆ ಮತ್ತಷ್ಟು ತನಿಖೆ ನಡೆಸಿ, ಅಕ್ರಮ ಮದ್ಯ ಮಾರಾಟದ ಕೊಂಡಿಗಳನ್ನು ಪತ್ತೆ ಮಾಡುವ ನಿರೀಕ್ಷೆ ಇದೆ.