ಸಪ್ತಾಪದಿ ತಾಲ್ಲೂಕಿನ ಕರಿಕೆ ಗ್ರಾಮದ ಕರಿಬಳಪು ಎಂಬಲ್ಲಿ ಅಬಕಾರಿ ಅಧಿಕಾರಿಗಳ ತಂಡವು ಮೂರು ಸ್ಥಳಗಳಲ್ಲಿ ದಾಳಿ ನಡೆಸಿ, ಒಟ್ಟು 5.5 ಲೀಟರ್ ಕಳ್ಳಭಟ್ಟಿ, 100 ಲೀಟರ್ ಪುಳಗಂಜಿ ಹಾಗೂ ಭಟ್ಟಿಇಳಿಸುವ ಪರಿಕರಗಳನ್ನು ವಶಪಡಿಸಿಕೊಂಡಿದೆ.

ದಾಳಿಯ ವಿವರ:

ರಾರು ಎಂಬುವವರ ಮನೆಯಲ್ಲಿ 1 ಲೀಟರ್ ಕಳ್ಳಭಟ್ಟಿ, 25 ಲೀಟರ್ ಪುಳಗಂಜಿ ಹಾಗೂ ಕಳ್ಳಭಟ್ಟಿಗಾಗಿ ಬಳಸುತ್ತಿದ್ದ ಪರಿಕರಗಳು ಪತ್ತೆಯಾಗಿವೆ.

ರಮೇಶ್ ಎಂಬುವವರ ಮನೆಯಲ್ಲಿ 0.5 ಲೀಟರ್ ಕಳ್ಳಭಟ್ಟಿ, 50 ಲೀಟರ್ ಪುಳಗಂಜಿ ಮತ್ತು ಭಟ್ಟಿಇಳಿಸುವ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಪ್ಪ ಎಂಬುವವರ ಮನೆಯಲ್ಲಿ 4 ಲೀಟರ್ ಕಳ್ಳಭಟ್ಟಿ, 25 ಲೀಟರ್ ಪುಳಗಂಜಿ ಮತ್ತು ಭಟ್ಟಿಇಳಿಸುವ ಪರಿಕರಗಳು ಪತ್ತೆಯಾಗಿವೆ.

ಅಬಕಾರಿ ಇನ್‌ಸ್ಪೆಕ್ಟರ್ ವಿ.ಸ್ವರ್ಣಶ್ರೀ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಸಬ್‌ಇನ್‌ಸ್ಪೆಕ್ಟರ್ ಬಿ.ಎಸ್.ಬಾಲಕೃಷ್ಣ, ಹೆಡ್‌ಕಾನ್‌ಸ್ಟೆಬಲ್ ಕೆ.ಬಿ.ರಾಜೇಂದ್ರ, ಕಾನ್‌ಸ್ಟೆಬಲ್‌ಗಳಾದ ಎಚ್.ಎ.ರಾಜು, ಡಿ.ಎಸ್.ಮೊಹನ್ ಕುಮಾರ್ ಹಾಗೂ ವಾಹನ ಚಾಲಕ ನಿತಿನ್ ವೈ ಭಾಗವಹಿಸಿದ್ದರು.

ಅಬಕಾರಿ ಅಧಿಕಾರಿಗಳ ಪ್ರಕಾರ, ಕಳ್ಳಭಟ್ಟಿಯ ತಯಾರಣೆ ಮತ್ತು ವಿತರಣೆ ತಡೆಯಲು ನಿಯಮಿತವಾಗಿ ದಾಳಿಗಳನ್ನು ಮುಂದುವರಿಸಲಾಗುವುದು. ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಮರ್ಪಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

error: Content is protected !!